Advertisement
ಕಾಂಕ್ರೀಟ್ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಭೇಟಿಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಬಹುಕಾಲದ ಬೇಡಿಕೆ ಈಗ ಈಡೇರಲಿದೆ. ನಾನು ಚುನಾವಣಾ ಪ್ರಚಾರಕ್ಕೆ ಈ ಭಾಗಕ್ಕೆ ಬಂದಿದ್ದಾಗ ಜನರು ಈ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು. ಒಟ್ಟು 500 ಮೀಟರ್ ಉದ್ದ, ಇಪ್ಪತ್ತನಾಲ್ಕು ಅಡಿ ವಿಸ್ತೀರ್ಣದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, ಇದಕ್ಕೆ ಒಂದು ಕೋಟಿ ರೂ. ವೆಚ್ಚವಾಗಲಿದೆ. ಬಹಳ ಜನನಿಬಿಡ ರಸ್ತೆಯಾಗಿರುವುದರಿಂದ ಮೊದಲ ಹಂತದಲ್ಲಿ ಹನ್ನೆರಡು ಅಡಿ ವಿಸ್ತೀರ್ಣಕ್ಕೆ ಕಾಮಗಾರಿ ನಡೆಯಲಿದ್ದು, ಅದು ಮುಗಿದ ಬಳಿಕ ಇನ್ನೊಂದು ಹಂತದಲ್ಲಿ ಉಳಿದ ಹನ್ನೆರಡು ಅಡಿ ವಿಸ್ತೀರ್ಣಕ್ಕೆ ಕಾಂಕ್ರೀಟ್ ಹಾಕಲಾಗುವುದು ಎಂದರು.
ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ಒಂದಿಷ್ಟು ದಿನ ಅಡಚಣೆ ಆಗಬಹುದು. ಆದ್ದರಿಂದ ಜನ ಅಭಿವೃದ್ಧಿಯನ್ನು ದೂರದೃಷ್ಟಿಯಲ್ಲಿಟ್ಟು ನಡೆಯಲಿರುವ ಕಾಮಗಾರಿ ಆದ ಕಾರಣ ಸಹಕರಿಸಬೇಕು ಎಂದು ಶಾಸಕರು ಹೇಳಿದರು.