ಹೊಸಪೇಟೆ: ತಾಲೂಕಿನಲ್ಲಿ ಶಂಕಿತ ನೀಲಿನಾಲಿಗೆ ರೋಗಕ್ಕೆ ಪ್ರತಿನಿತ್ಯ ಹತ್ತಾರು ಕುರಿಗಳು ಬಲಿಯಾಗುತ್ತಿದ್ದು, ಕಳೆದ 20 ದಿನದಲ್ಲಿ 60ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿದ್ದು ಕುರಿಗಾಹಿಗಳಲ್ಲಿ ಆತಂಕ ಮನೆ ಮಾಡಿದೆ.
ತಾಲೂಕಿನ ಬೈಲುವದ್ದಿಗೇರಿ, ಕಾಕಾಬಾಳು, ವಡ್ರ ಹಳ್ಳಿ,ಗಾದಿಗನೂರು, ದೇವಸಮುದ್ರ ದೇವಲಾಪುರ ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಲ್ಲಿ ಕುರಿಗಳಿಗೆ ನೀಲಿನಾಲಿಗೆ ರೋಗ ಉಲ್ಬಣಗೊಂಡಿದೆ. 60ಕ್ಕೂ ಹೆಚ್ಚು ಕುರಿಗಳು ನೀಲಿನಾಲಿಗೆ ರೋಗಕ್ಕೆ ತುತ್ತಾದ ಹಿನ್ನಲೆಯಲ್ಲಿ ಕುರಿಗಾಹಿಗಳಿಗೆ ದಿಕ್ಕು ತೋಚದಂತಾಗಿದೆ.
ರೋಗ ಹತೋಟಿಗೆ ತರವಲ್ಲಿ ಪಶು ಚಿಕಿತ್ಸಾಲಯ ಸಂಪೂರ್ಣ ವಿಫಲವಾಗಿದೆ. ನಿತ್ಯ ಕುರಿಗಳು ಸಾಯುತ್ತಿದ್ದರೂ ಪಶು ವೈದ್ಯರು, ಎರಡೂ-ಮೂರು ಬಾರಿ ಮಾತ್ರ ಗ್ರಾಮ ಗ ಳಿಗೆ ಭೇಟಿ ನೀಡಿದ್ದು ಬಿಟ್ಟರೆ, ಇತ್ತ ಯಾರು ತಿರುಗಿ ನೋಡಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಬೈಲುವದ್ದಿಗೇರಿ ಗ್ರಾಮದ ಕೆ.ಎಸ್.ಹನುಮಂತಪ್ಪ,ಯರಿಸ್ವಾಮಿ, ಜಂಬಯ್ಯ, ಅಗಸರ ಕರಿಬಸವ, ಹೋಳಿಗೆ ಪಂಪಾಪತಿ, ಕಾಕಾಬಾಳು ಗ್ರಾಮದ ಸೊಂಟಿ ಬಸ ವಾರ, ವಡ್ರ ಹಳ್ಳಿ ಗ್ರಾಮದ ಮೂರ್ತಿ ಸೇರಿ ದಂತೆ ಗ್ರಾಮದ ಇತರೆ ಕುರಿ ಗಾಹಿ ಗಳ ಕುರಿ ಗಳು ನೀಲಿನಾಲಿಗೆ ರೋಗಕ್ಕೆ ತುತ್ತಾಗಿವೆ. ಇನ್ನು ನೂರಾರು ಕುರಿಗಳು ರೋಗದಿಂದ ಬಳಲುತ್ತಿವೆ.
ಇಂದೋ,ನಾಳೆಎಂಬಂತಾಗಿದೆ ಅವುಗಳ ಸ್ಥಿತಿ. ಪಶು ವೈದ್ಯರು ಬೆಂಗಳೂರಿನ ಹೆಬ್ಟಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಸತ್ತ ಕುರಿಗಳ ರಕ್ತ ಮಾದರಿಯನ್ನು ಕಳ ಹಿಸಿದ್ದು, ವರದಿ ಬರುವುದಷ್ಟೇ ಬಾಕಿಯಿದೆ. ಮೂರು ವರ್ಷಕೊಮ್ಮೆ ಕಾಣಿಸಿಕೊಳ್ಳುವ ನೀಲಿನಾಲಿಗೆ ರೋಗಕ್ಕೆ ನಿರ್ದಿಷ್ಟವಾದ ಲಸಿಕೆ ಲಭ್ಯವಿಲ್ಲದ ಪರಿಣಾಮ ಕುರಿಗಳ ಸಾವಿನ ಸಂಖ್ಯೆ ದ್ವಿಗುಣವಾಗುತ್ತಿದೆ. ಈ ಬಾರಿ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಹಿನ್ನ ಲೆಯಲ್ಲಿ ಸೊಳ್ಳೆ, ನೊಣ ಗಳು ಆಧಿಕವಾಗಿದೆ.
ಕುರುಡು ನೊಣ ಕಡಿತದಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗಕಾಣಿಸಿಕೊಳ್ಳಲು ಕಾರಣವಾಗಿದೆ. ಸರ್ಕಾರಿ ಲಸಿಕೆ ತಯಾರಿಕೆ ಕೇಂದ್ರದಲ್ಲಿ ಪ್ರಸ್ತುತ ರೋಗ ನಿವಾರಣೆಗೆ ಲಸಿಕೆ ಲಭ್ಯವಿಲ್ಲದ ಕಾರಣ ಸದ್ಯಖಾಸಗಿ ಕೇಂದ್ರದಲ್ಲಿ ಲಸಿಕೆ ಖರೀದಿಗೆ ಸರ್ಕಾರ ಸೂಚನೆ ನೀಡಿದೆ ಎಂದು ಪಶುವೈದ್ಯ ಡಾ| ಬಸವ ರಾಜ ಬೆಣ್ಣಿ ತಿಳಿಸಿದ್ದಾರೆ.