Advertisement

ಮನ್ ಕೀ ಬಾತ್-ಚಾಯ್ ಕೇ ಸಾಥ್; 26/11 ಹುತಾತ್ಮರಿಗೆ ನಮನ

01:41 PM Nov 26, 2017 | Team Udayavani |

ನವದೆಹಲಿ:ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ 9ನೇ ವರ್ಷಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮನ್ ಕೀ ಬಾತ್ ನ 38ನೇ ಆವೃತ್ತಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡುತ್ತ, ದಾಳಿಯಲ್ಲಿ ಜೀವ ಕಳೆದುಕೊಂಡ ಪುರುಷರು, ಮಹಿಳೆಯರು ಹಾಗೂ ಯೋಧರಿಗೆ ನಮನ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ ಭಯೋತ್ಪಾದನೆ ಎನ್ನುವುದು ಜಾಗತಿಕ ಪಿಡುಗಾಗಿದೆ ಎಂದರು.

Advertisement

ತಿಂಗಳ ಆಕಾಶವಾಣಿ ಕಾರ್ಯಕ್ರಮವಾದ ಮನ್ ಕೀ ಬಾತ್ ನಲ್ಲಿ, ಭಯೋತ್ಪಾದನೆ ಮನುಕುಲಕ್ಕೆ ಅತೀ ದೊಡ್ಡ ಕಳಂಕ. ಈ ನಿಟ್ಟಿನಲ್ಲಿ ಇಡೀ ಜಗತ್ತೇ ಉಗ್ರವಾದದ ವಿರುದ್ಧ ನಿಲ್ಲಬೇಕಾಗಿದೆ ಎಂದು ಹೇಳಿದರು. ಆರಂಭಿಕವಾಗಿ ಜಾಗತಿಕವಾಗಿ ಕೂಡಾ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಆದರೆ ಈಗ ಉಗ್ರವಾದದ ಮುಖವಾಡದ ಬಗ್ಗೆ ವಿಶ್ವವೇ ಎಚ್ಚೆತ್ತುಕೊಂಡಿರುವುದಾಗಿ ತಿಳಿಸಿದರು.

ಮನುಕುಲಕ್ಕೆ ಅಪಾಯಕಾರಿಯಾಗಿರುವ ಭಯೋತ್ಪಾದನೆಯನ್ನು ಮಟ್ಟಹಾಕಲು ಇಡೀ ವಿಶ್ವವೇ ಒಗ್ಗಟ್ಟಾಗಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಯುವಜನರು ದೇಶದ ಸಮಸ್ಯೆ ಬಗ್ಗೆ ಎಚ್ಚೆತ್ತಿರುವುದು ಹೆಮ್ಮೆಯ ವಿಚಾರ. ಮಕ್ಕಳು ಕೂಡಾ ದೇಶದ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರತ ಬುದ್ಧ, ಗಾಂಧಿ, ನಾನಕ್ ಜನಿಸಿದ ನಾಡು. ಅಹಿಂಸೆಯಲ್ಲಿ ನಂಬಿಕೆ ಇರಿಸಿದವರು ಭಾರತೀಯರು ಎಂದು ಹೇಳಿದರು.

ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು…ಚಾಯ್ ಕೇ ಸಾಥ್!

Advertisement

ಕಾಂಗ್ರೆಸ್ ಯುವ ಘಟಕ ಚಾಯ್ ವಾಲಾ ಮೆಮೆ ವಿವಾದಿತ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವುದಕ್ಕೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಬಿಜೆಪಿ ವರಿಷ್ಠ ಅಮಿತ್ ಶಾ ಸೇರಿದಂತೆ ಪ್ರಮುಖ ಮುಖಂಡರು ಮನ್ ಕೀ ಬಾತ್ ಚಾಯ್ ಕೇ ಸಾಥ್ ಮೂಲಕ ಗುಜರಾತ್ ನಲ್ಲಿ ಆಲಿಸಿದರು. ಗುಜರಾತ್ ನಲ್ಲಿ ಆಯೋಜಿಸಿದ್ದ ಈ ಮನ್ ಕೀ ಬಾತ್ ಚಾಯ್ ಕೇ ಸಾಥ್ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರು, ಸಚಿವರು ಹಾಜರಾಗಿದ್ದರು.

ಗುಜರಾತ್ ನ 50 ಸಾವಿರ ಮತಗಟ್ಟೆಗಳಲ್ಲಿ ಜನರ ಜತೆ ಟೀ ಸೇವಿಸುತ್ತಾ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಆಲಿಸಲಾಯಿತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next