Advertisement

ಒಂದು ತಿಂಗಳು ಭಕ್ತರಿಗೆ ಶ್ರೀಕಂಠೇಶ್ವರನ ದರ್ಶನವಿಲ್ಲ

12:57 PM Apr 17, 2021 | Team Udayavani |

ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಪಡೆದಿರುವ ಶ್ರೀಕಂಠೇಶ್ವರ ದೇವಾಲಯಕ್ಕೆ ಕೋವಿಡ್  2ನೇ ಅಲೆ ತಗುಲಿದ್ದು, ಏ.16ರಿಂದಮೇ 15ರವರೆಗೆ ದೇಗುಲವನ್ನು ಮುಚ್ಚಲು ಕೇಂದ್ರಪ್ರಾಚ್ಯ ವಸ್ತು ಇಲಾಖೆ ಆದೇಶಿಸಿದೆ.

Advertisement

ಹೀಗಾಗಿಶುಕ್ರವಾರ ಸಂಜೆಯಿಂದಲೇ ದೇಗುಲದ ಮುಖ್ಯದ್ವಾರವನ್ನು ಬಂದ್‌ ಮಾಡಲಾಗಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆ ಈ ಕುರಿತು ಅಧಿಕೃತ ಆದೇಶ ನೀಡಿದ್ದು, ಇಲಾಖೆಯ ಆಧೀನದಲ್ಲಿರುವ ಎಲ್ಲ ದೇವಾಲಯಗಳು, ವಸ್ತುಸಂಗ್ರಾಹಲಯಗಳು ಸೇರಿದಂತೆ ಎಲ್ಲ ಸುರಕ್ಷಿತ ಸ್ಮಾರಕಗಳನ್ನೂ ಸಹ ಬಂದ್‌ ಮಾಡಲು ಸೂಚಿಸಲಾಗಿದೆ.

ಮೇ 15ರ ವರೆಗೆ ಶ್ರೀಕಂಠೇಶ್ವರನ ದೇವಾಲಯದ ಸೇರಿದಂತೆ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಯ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನ ಇಲ್ಲವಾಗಿದೆ. ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ದೇಗುಲವನ್ನು ಬಂದ್‌ ಮಾಡಲಾಗಿತ್ತು. ಅಲ್ಲೇ ಕಳೆದ ವರ್ಷ ಹಾಗೂ ಈ ವರ್ಷದೊಡ್ಡ ತೇರನ್ನು ನಡೆಸಲಿಲ್ಲ.ದೈನಂದಿನ ಪೂಜೆಗೆ ಅಡ್ಡಿ ಇಲ್ಲ: ಸಾರ್ವಜನಿಕರಪಾಲಿಗೆ ಮಾತ್ರ ದೇವಾಲಯವನ್ನು ಮುಚ್ಚಲಾಗುತ್ತಿದ್ದು, ನಿತ್ಯದ ಪೂಜೆ ಸೇರಿದಂತೆ ಧಾರ್ಮಿಕಕೈಂಕರ್ಯಗಳು ನಡೆಯಲಿವೆ.

ಇದಕ್ಕೆ ಯಾವುದೇತಡೆ ಇಲ್ಲ. ಅರ್ಚಕರು ಹಾಗೂ ಅವಶ್ಯಸಿಬ್ಬಂದಿಗಳನ್ನು ಹೊರತು ಪಡಿಸಿ ಬೇರ್ಯಾರಿಗೂದೇವಾಲಯದ ಒಳಗೆ ಪ್ರವೇಶವಿಲ್ಲ ಎಂದುಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next