Advertisement
ಬೆಳಕು ಮೀನುಗಾರಿಕೆ ದೇಶದ ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇತರದೇಶಗಳಲ್ಲೂ ಚಾಲ್ತಿಯಲ್ಲಿದೆ. ಅಲ್ಲಿ ಈ ಮೀನುಗಾರಿಕೆಯನ್ನು ನಿಷೇಧಿಸುವಂತೆ ಯಾವುದೇ ಸಂಘಟನೆ ಮೊಕದ್ದಮೆ ಹೂಡಿಲ್ಲ. ಕರ್ನಾಟಕದ ಮಲ್ಪೆ ಬಂದರಿನಲ್ಲಿ ಮಾತ್ರ ಡೀಪ್‌ಸೀ ಟ್ರಾಲ್‌ಬೋಟ್ ಸಂಘದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರು, ಹೈಕೋರ್ಟ್ ಬೆಳಕು ಮೀನುಗಾರಿಕೆ ನೀಡಿರುವ ಅನುಮತಿಯ ವಿರುದ್ಧ ಮೊಕದ್ದಮೆ ಹೂಡಿರು ತ್ತಾರೆ. ಈ ಮೊಕದ್ದಮೆಯನ್ನು ಪರಿ ಶೀಲಿಸಿದ ಉಚ್ಚ ನ್ಯಾಯಾಲಯವು ಜ. 21ರಂದು ನೀಡಿರುವ ಆದೇಶವನ್ನು ರದ್ದು ಪಡಿಸಿ 2017ರಂದು ಮೀನುಗಾರಿಕೆ ನಿಷೇಧಿಸುವಂತೆ ಹೊರಡಿಸಿ ರುವ ಆದೇಶವನ್ನು ಕಡ್ಡಾಯ ಪಾಲಿಸು ವಂತೆ ಮಧ್ಯಾಂತರ ತಡೆಯಾಜ್ಞೆ ನೀಡಿದೆ ಎಂದು ಸಂಘ ತಿಳಿಸಿದೆ.
ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್‌ನ ಸಂಘವು ಬೆಳಕು ಮೀನುಗಾರಿಕೆಯ ವಿರುದ್ಧ ಮೊಕದ್ದಮೆ ಹೂಡದಿದ್ದಲ್ಲಿ ಮಲ್ಪೆ ಬಂದರಿನಲ್ಲಿ ತಕರಾರಿಲ್ಲದೆ ಬೆಳಕು ಮೀನುಗಾರಿಕೆ ಹಾಗೂ ಇತರ ಮೀನುಗಾರಿಕೆ ನಿರಂತರವಾಗಿ ನಡೆಯುತ್ತಿತ್ತು. ಈಗ ಮೀನುಗಾರರ ಮಧ್ಯೆ ಒಡುಕು ಉಂಟು ಮಾಡುವ ಸಲುವಾಗಿ ಡೀಪ್‌ಸೀ ಸಂಘ ಏಕಪಕೀÒಯ ನಿರ್ಧಾರ ತಳೆದು ದೋಣಿಗಳನ್ನು ನಿಲ್ಲಿಸಿ ಅಪಾರ ಕಷ್ಟನಷ್ಟಗಳಿಗೆ ಎಡೆಮಾಡಿಕೊಟ್ಟಿದ್ದಾರೆ ಎಂದು ಪಸೀìನ್ ಮೀನುಗಾರರ ಸಂಘ ಆರೋಪಿಸಿದೆ.