Advertisement

ಸೌದಿಯಲ್ಲಿ ಸಿನಿಮಾಗೆ ಓಕೆ

08:00 AM Dec 12, 2017 | Harsha Rao |

ರಿಯಾದ್‌: ಸೌದಿ ಅರೇಬಿಯಾ ಸರಕಾರದ ಸುಧಾರಣಾ ಕ್ರಮಗಳಿಗೆ ಮತ್ತೂಂದು ಸೇರ್ಪಡೆಯಾಗಿದೆ. ಅದೇನೆಂದರೆ, ಇನ್ನು ಈ ದೇಶದಲ್ಲಿ ಆರಾಮವಾಗಿ ಸಿನಿಮಾವನ್ನೂ ನೋಡಬಹುದು. ಇದುವರೆಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಣೆಗೆ ಇದ್ದ ನಿರ್ಬಂಧವನ್ನು 2018ರ ಮಾರ್ಚ್‌ನಿಂದ ತೆಗೆದು ಹಾಕುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. 

Advertisement

35 ವರ್ಷಗಳ ಹಿಂದೆ ಅಂದರೆ 1980ರಲ್ಲಿ ಮೂಲಭೂತವಾದಿಗಳ ಪ್ರಬಲ ಆಕ್ಷೇಪದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಸಿನಿಮಾ ವೀಕ್ಷಣೆಗೆ ತಡೆ ಹೇರಲಾಗಿತ್ತು. ಇದೀಗ ಸೌದಿಯ ಭಾವೀ ದೊರೆ, 32 ವರ್ಷದ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಸುಧಾರಣಾವಾದಿ ದೃಷ್ಟಿಕೋನ ಹೊಂದಿರುವುದರಿಂದ ಅವರು 35 ವರ್ಷಗಳಿಂದ ಜಾರಿಯಲ್ಲಿರುವ ನಿಷೇಧ ಕ್ರಮ ಹಿಂಪಡೆಯಲು ಮುಂದಾಗಿದ್ದಾರೆ. ಗಮನಾರ್ಹ ಅಂಶವೆಂದರೆ ಇಂಥ ನಿರ್ಧಾರ ಕೈಗೊಳ್ಳಲೂ ಕಾರಣವಿದೆ. ತೈಲ ಆರ್ಥಿಕತೆಯನ್ನೇ ಇದುವರೆಗೆ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ನಂಬಿಕೊಂಡಿತ್ತು. ಪ್ರಾಕೃತಿಕವಾಗಿ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಕೊರತೆ ಕಂಡುಬಂದಿರುವುದರಿಂದ ದೊರೆ ಮೊಹಮ್ಮದ್‌ ಇಂಥ ನಿರ್ಣಯಕ್ಕೆ ಬಂದಿದ್ದಾರೆ.  

“ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದಸರಕಾರದ ಬೊಕ್ಕಸಕ್ಕೂ ಅನುಕೂಲವಾಗಿ ಆರ್ಥಿಕಾಭಿವೃದ್ಧಿ ಆಗುತ್ತದೆ. ಜತೆಗೆ ಸಾಂಸ್ಕೃತಿಕ ವೈವಿಧಿÂàಕರಣಕ್ಕೂ ಅವಕಾಶ ಮಾಡಿದಂತಾಗುತ್ತದೆ’ ಎಂದು ಅಲ್ಲಿನ ಸಾಂಸ್ಕೃತಿಕ ಮತ್ತು ಮಾಹಿತಿ ಸಚಿವ ಅವ್ವದ್‌ ಬಿನ್‌ ಸಲೇಹ್‌ ಅಲ್ವದ್‌ ತಿಳಿಸಿದ್ದಾರೆ. 2030ರ ಒಳಗಾಗಿ 2 ಸಾವಿರ ಸ್ಕ್ರೀನ್‌ಗಳನ್ನು ಒಳಗೊಂಡಿರುವ 300 ಚಿತ್ರಮಂದಿರಗಳನ್ನು ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next