Advertisement
ಈ ಹಿಂದೆ ನಡೆದ ಫುಟ್‌ಪಾತ್ ಹಾಗೂ ಪಾರ್ಕಿಂಗ್ ಸ್ಥಳ ಅತಿಕ್ರಮಣತೆರವು ಕಾರ್ಯಾಚರಣೆ ಅನಂತರದ ಸ್ಥಿತಿ ಗಮನಿಸಿದರೆ ಜನತೆಗೆ ಇಂತಹ ಅನುಮಾನ ಬರುವುದು ಸಹಜ.
Related Articles
Advertisement
ಇದು ಮೊದಲಲ್ಲ-ಕೊನೆಯಲ್ಲ: ಅವಳಿನಗರದಲ್ಲಿ ಫುಟ್‌ಪಾತ್ ತೆರವುಕಾರ್ಯಾಚರಣೆ ಇದು ಮೊದಲಲ್ಲ,ಕೊನೆಯಂತೂ ಅಲ್ಲವೇ ಅಲ್ಲ. ಫುಟ್‌ಪಾತ್‌ಹಾಗೂ ಪಾರ್ಕಿಂಗ್ ಅತಿಕ್ರಮಣ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಆಗಿರುವುದಕ್ಕೆ ಲೆಕ್ಕವೇ ಇಲ್ಲ. ಜನಪ್ರತಿನಿಧಿಗಳ ಸಭೆಯಲ್ಲಿ ನೀಡಿದ ಸೂಚನೆಗಳು ಸಾಕಷ್ಟುಆದರೂ ನಿರೀಕ್ಷಿತ ಫಲ ಮಾತ್ರ ದೊರಕಿಲ್ಲ ಎನ್ನಬಹುದು.
ಈ ಹಿಂದೆ ಮಣಿವಣ್ಣನ್ ಅವರು ಪಾಲಿಕೆ ಆಯುಕ್ತರಾಗಿದ್ದಾಗ ರಸ್ತೆ ಅಗಲೀಕರಣ,ಫುಟ್‌ಪಾತ್ ತೆರವು ಕಾರ್ಯಾಚರಣೆ ದೊಡ್ಡಸದ್ದು ಮಾಡಿತ್ತು. ಅದಾದ ಕೆಲ ದಿನಗಳಲ್ಲಿ ಮತ್ತದೇ ಯಥಾಸ್ಥಿತಿ ರೂಪುಗೊಂಡಿತ್ತು. ಡಾ|ಅಜಯ ನಾಗಭೂಷಣ ಅವರು ಆಯುಕ್ತರಾಗಿದ್ದಾಗಲೂ ಫುಟ್‌ಪಾತ್‌ತೆರವು ಕಾರ್ಯಾಚರಣೆ ನಡೆದಿತ್ತು. ಡಾ| ತ್ರಿಲೋಕಚಂದ್ರ ಅವರು ಆಯುಕ್ತರಾಗಿದ್ದಾಗಫುಟ್‌ಪಾತ್ ಹಾಗೂ ಪಾರ್ಕಿಂಗ್ ಅತಿಕ್ರಮಣತೆರವು ಅಭಿಯಾನ ಕೈಗೊಳ್ಳಲಾಗಿತ್ತು.ಅನೇಕ ಒತ್ತಡ, ಅಡೆತಡೆಗಳ ನಡುವೆಯೂ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆಂದು ಇದ್ದ ಜಾಗವನ್ನು ಕಟ್ಟಡ ಮಾಲಿಕರು ವಾಣಿಜ್ಯಮಳಿಗೆಗಳಾಗಿಸಿ ಬಾಡಿಗೆ ನೀಡುವ, ಮಾರಾಟ ಮಾಡುವ ಕಾರ್ಯ ಮಾಡಿದ್ದರು.
ಅವುಗಳ ತೆರವು ಕಾರ್ಯ ನಡೆದಿತ್ತಾದರೂ ಅನಂತರದಲ್ಲಿ ಬಂದ ಆಯುಕ್ತರು ಅದಕ್ಕೆ ಹೆಚ್ಚು ಗಮನ ನೀಡದ್ದರಿಂದ ಅದೆಷ್ಟೋ ಕಟ್ಟಡಗಳ ಪಾರ್ಕಿಂಗ್ ಜಾಗ ಮತ್ತದೇ ಹಳೇ ಸ್ಥಿತಿಗೆ ಮರಳಿದೆ.
ಅವಳಿನಗರದ ಅನೇಕ ಕಲ್ಯಾಣ ಮಂಟಪಗಳಿಗೆ ಪಾರ್ಕಿಂಗ್ ವ್ಯವಸ್ಥೆಯೇಇಲ್ಲವಾಗಿದೆ. ಮದುವೆ ಸಂದರ್ಭದಲ್ಲಿರಸ್ತೆಯಲ್ಲಿಯೇ ವಾಹನಗಳ ನಿಲುಗಡೆಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದರೂ ಹೇಳುವವರು-ಕೇಳುವವರು ಇಲ್ಲದ ಸ್ಥಿತಿ ಇದೆ.ಇನ್ನು ರಸ್ತೆಗಳಲ್ಲಿ ಪಾದಚಾರಿಮಾರ್ಗಗಳನ್ನು ವ್ಯಾಪಾರಸ್ಥರು,ಮಾರಾಟಗಾರರು ಅತಿಕ್ರಮಿಸಿದ್ದರೆ,ರಸ್ತೆ ಬದಿಯಲ್ಲಿ ಆಟೋರಿಕ್ಷಾದವರು ತಿರುವು, ವೃತ್ತ, ವಾಹನ ದಟ್ಟಣೆ ಇದ್ದರೂನಮಗೇನು ಸಂಬಂಧವಿಲ್ಲ ಎನ್ನುವಂತೆ ಗಾಂಭೀರ್ಯದಿಂದ ನಿಂತಿರುತ್ತಾರೆ.
ಜನಪ್ರತಿನಿಧಿಗಳ ಗಟ್ಟಿ ನಿಲುವು ಅವಶ್ಯ: ಫುಟ್‌ಪಾತ್, ಪಾರ್ಕಿಂಗ್ ಜಾಗ ಅತಿಕ್ರಮಣ ತೆರವು ವಿಚಾರದಲ್ಲಿ ಅವಳಿನಗರದಜನಪ್ರತಿನಿಧಿಗಳು ಪಕ್ಷಭೇದ ಮರೆತು ಗಟ್ಟಿ ನಿಲುವು ತಾಳಬೇಕಿದೆ. ಅಧಿಕಾರಿಗಳು ತೆರವು ಕಾರ್ಯಾರಣೆಗೆಮುಂದಾಗುತ್ತಿದ್ದಂತೆಯೇ ಯಾರಧ್ದೋಒತ್ತಡ ಬರುತ್ತದೆ. ಇರಿಸಿದ ಹೆಜ್ಜೆ ಹಿಂದೆಸರಿಯುತ್ತದೆ. ಜನಪ್ರತಿನಿಧಿಗಳ ಪರೋಕ್ಷಬೆಂಬಲ ಪ್ರತಿಭಟನೆ ರೂಪ ತಾಳುತ್ತದೆ.ಅಲ್ಲಿಗೆ ಉದ್ದೇಶಿತ ಕಾರ್ಯಾಚರಣೆಯೇಅರ್ಥ ಕಳೆದುಕೊಳ್ಳುವಂತಾಗುತ್ತದೆ. ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂಪಾಯಿ ತಂದು ನಗರ ಸುಂದರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಯೋಜನೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಅವಮಾನಿಸುವ ರೀತಿಯಲ್ಲಿ ಜಾಗದ ಅತಿಕ್ರಮಣ ಆಗಿರುತ್ತದೆ. ಸುಂದರನಗರ ನಿರ್ಮಾಣ ನಿಟ್ಟಿನಲ್ಲಿ ಇಂತಹದ್ದನ್ನುತಡೆಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳುರಾಜಕೀಯ ಲೆಕ್ಕಾಚಾರ ಬದಿಗಿರಿಸಿ ಅಭಿವೃದ್ಧಿಗೆ ಪಕ್ಷಾತೀತ ನಿಲುವು ತಾಳಬೇಕಿದೆ.
ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಆಯಾ ಪ್ರದೇಶದಲ್ಲಿ ಒಂದು ಜಾಗ ಗುರುತಿಸಿ ಅಲ್ಲಿಯೇ ಅವರೆಲ್ಲರೂ ವ್ಯಾಪಾರಕ್ಕೆ ಮುಂದಾಗುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಜನರಿಗೂ ದೂರವಾಗದಂತೆ, ವ್ಯಾಪಾರಿ ಗಳಿಗೂ ತೊಂದರೆ ಆಗದಂತೆ ಒಂದಡೆ ಬೀದಿ ಬದಿ ವ್ಯಾಪಾರಿಗಳಿಗೆವ್ಯವಸ್ಥಿತ ರೀತಿಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.
ಅಧಿಕಾರಿಗಳು ಮೂರು ವರ್ಷಕ್ಕೊಮ್ಮೆ, ಆರು ವರ್ಷಕ್ಕೊಮ್ಮೆ ತೆರವು ಕಾರ್ಯಾಚರಣೆ ಮಾಡುವ ಬದಲು ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರೂ ಒಂದು ದಿನ ನಿಗದಿಗೊಳಿಸಿ ಎಲ್ಲ ಕಡೆಗೂ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಳ್ಳಬೇಕಿದೆ. ಮುಖ್ಯವಾಗಿ ಆಯಾ ವಲಯಗಳಲ್ಲಿ ಅತಿಕ್ರಮಣಕ್ಕೆವಲಯ ಅಧಿಕಾರಿ-ಸಿಬ್ಬಂದಿಯನ್ನುಜವಾಬ್ದಾರರನ್ನಾಗಿಸಿದರೆ, ಅತಿಕ್ರಮಣ ಹಾವಳಿಗೆ ಒಂದಿಷ್ಟು ಕಡಿವಾಣ ಹಾಕಬಹುದಾಗಿದೆ ಎಂಬುದು ಅನೇಕರ ಅನಿಸಿಕೆ.
ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿ.. :
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿಅತ್ರಿಕಮಣ ತೆರವು ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಜತೆಗೆಸೋಮವಾರಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಧಿಕಾರಿಗಳ ಸಭೆ ನಡೆಸಿ ಅವಳಿನಗರದಲ್ಲಿ ಏಕಕಾಲಕ್ಕೆ ಫುಟ್‌ಪಾತ್ ತೆರವು ಕಾರ್ಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಫುಟ್ ಪಾತ್ ತೆರವು ಜತೆಗೆ ಕನ್ನಡಕ್ಕೆ ಆದ್ಯತೆ ನೀಡದ ಬೋರ್ಡ್‌ಗಳ ತೆರವು ಕಾರ್ಯವನ್ನು ಕನ್ನಡ ಜಾಗೃತಿ ಸಮಿತಿ ಕೈಗೊಂಡಿದೆ.
ಅಮರೇಗೌಡ ಗೋನವಾರ