Advertisement
ಈ ಬಗ್ಗೆ ಟ್ರಾಫಿಕ್ ಪೊಲೀಸರಿಂದ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಮೀನು ಸಾಗಾಟ ವಾಹನಗಳು ತ್ಯಾಜ್ಯ ನೀರನ್ನು ರಸ್ತೆಗೆ ಚೆಲ್ಲುತ್ತಾ ಸಾಗುತ್ತಿದ್ದು, ಅವುಗಳ ವಿರುದ್ಧ ಕ್ರಮ ಜರಗಿಸ ಬೇಕೆಂದು ಸತತವಾಗಿ ಮೂರನೇ ಬಾರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಒತ್ತಾಯ ಕೇಳಿ ಬಂತು. ಅಲ್ಲದೆ ಮೀನು ಸಾಗಿಸುವ ವಾಹನಗಳ ಸಂಚಾರ ರಾತ್ರಿ 11 ಗಂಟೆ ಅನಂತರ ಇರುವಂತೆ ನಿಗದಿ ಪಡಿಸಬೇಕು; ಸಣ್ಣ ಲಾರಿಗಳ ಬದಲು ಕಂಟೈನರ್ ಮೂಲಕ ಮೀನು ಸಾಗಿಸಲು ಸೂಚನೆ ನೀಡಬೇಕು ಎಂದು ನಾಗರಿಕರೊಬ್ಬರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಸಂದೀಪ್ ಪಾಟೀಲ್, ಕೇರಳದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುತ್ತಿದೆ. ಅದೇ ಆದೇಶವನ್ನು ಮಂಗಳೂರಿಗೂ ಆನ್ವಯಿಸಲು ತೀರ್ಮಾನಿಸಿದ್ದು, ಈಗಾಗಲೇ ವಾಹನ ಮಾಲಕರ ಸಭೆ ಕರೆದು ಮೀನು ತಾಜ್ಯ ಸೋರಿಕೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿಗೊಳಿಸಿ, ತಿಂಗಳ ಗಡುವು ವಿಧಿಸಲಾಗಿದೆ. ಅಲ್ಲದೆ ಈಗಾಗಲೇ 8 ಮೀನು ಸಾಗಾಟ ಲಾರಿಗಳ ವಿರುದ್ಧ ಕೇಸು ದಾಖಲಿಸಿದ್ದು, ಶುಕ್ರವಾರ ಮತ್ತೆ 5 ಲಾರಿಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೂಲ್ಕಿ- ಕಾರ್ನಾಡ್ ಬೈಪಾಸ್ ರಸ್ತೆಯಲ್ಲಿ ಸಂಜೆ ವೇಳೆ ಬಸ್ ಸಂಚಾರ ಕಡಿಮೆ ಆಗಿದ್ದು, ಸಾರ್ವಜ ನಿಕರಿಗೆ ತೊಂದರೆ ಆಗಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಮುಡಿಪು- ದೇರಳಕಟ್ಟೆ ಮಾರ್ಗವಾಗಿ ಮಂಗಳೂರು ಕಡೆಗೆ ಆಗಮಿಸುವ ಕೆಲವು ಬಸ್‌ಗಳು ಪಂಪ್‌ವೆಲ್, ಕಂಕನಾಡಿ ವರೆಗೆ ಮಾತ್ರ ಪರವಾನಿಗೆಯನ್ನು ಹೊಂದಿದ್ದರೂ ಬಸ್ ನಿರ್ವಾಹಕರು ಸ್ಟೇಟ್‌ಬ್ಯಾಂಕ್, ರೈಲು ನಿಲ್ದಾಣ ಎಂದು ಕರೆದು ಹತ್ತಿಸಿಕೊಳ್ಳುತ್ತಾರೆ. ಬಳಿಕ ಪಂಪ್‌ವೆಲ್‌ನಲ್ಲಿ ಬೇರೆ ಬಸ್‌ಗೆ ಕಳುಹಿಸುತ್ತಾರೆ. ಇದರಿಂದಾಗಿ ರೋಗಿಗಳು ಸಹಿತ ವೃದ್ಧರು, ಮಹಿಳೆಯರಿಗೆ ಪಂಪ್‌ವೆಲ್‌ನಲ್ಲಿ ಬಸ್ ಇಳಿದು ಇನ್ನೊಂದು ಬಸ್ ಹತ್ತಲು ಅನನುಕೂಲ ಆಗುತ್ತಿದೆ. 10 ವರ್ಷಗಳಿಂದಲೂ ಈ ಸಮಸ್ಯೆ ಇದೆ. ಇದನ್ನು ಸರಿಪಡಿಸಬೇಕು ಎಂದು ದೇರಳಕಟ್ಟೆ ನಿವಾಸಿ ಯೊಬ್ಬರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದರು.
Related Articles
ನಗರದ ಕೆಲವು ಶಾಲಾ ಕಾಲೇಜುಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತಿದೆ. ಉಳಿದ ವಿದ್ಯಾರ್ಥಿಗಳನ್ನು ಕಡೆಗಣಿ ಸಲಾಗುತ್ತಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಶಿಕ್ಷಣ ಸಂಸ್ಥೆಗಳ ಈ ನಿಲುವಿನಿಂದಾಗಿ ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಕಡಿಮೆ ಅಂಕ ಗಳಿಸಿದ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಜಿಲ್ಲಾ ಡಳಿತದ ಗಮನ ಸೆಳೆಯಬೇಕು ಎಂಬ ಆಗ್ರಹ ಕೇಳಿಬಂತು. ಪರಿಸರ ಸಂರಕ್ಷಣೆಯ ದೃಷ್ಟಿಡಯಿಂದ ಮಳೆಗಾಲದಲ್ಲಿ ಜೂನ್ ವೇಳೆಗೆ ಸಸಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು.
Advertisement
ಇದು 112ನೇ ಫೋನ್ ಇನ್ ಕಾರ್ಯಕ್ರಮ ವಾಗಿದ್ದು, ಒಟ್ಟು 27 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷಿ$¾à ಗಣೇಶ್, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಸಿ.ಎನ್. ದಿವಾಕರ್, ಹರೀಶ್ ಕೆ. ಪಟೇಲ್, ಕೃಷ್ಣಾನಂದ ನಾಯಕ್, ಅಶೋಕ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ತಾರತಮ್ಯ ಸರಿಯಲ್ಲದ್ವಿಚಕ್ರ ವಾಹನ ಸವಾರರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರೆ ಪೊಲೀಸರು ಸಿ.ಸಿ. ಕೆಮರಾ ಫುಟೇಜ್ ವೀಕ್ಷಿಸಿ ಕೇಸು ಹಾಕುತ್ತಾರೆ. ಆದರೆ ಬಸ್ ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಲಿಯಸಿದರೆ ಪೊಲೀಸರು ಕ್ರಮ ವಹಿಸುತ್ತಿಲ್ಲ. ಈ ತಾರತಮ್ಯ ಸರಿಯಲ್ಲ. ಪ್ರಯಾಣಿಕರು ಬಸ್ ಚಾಲಕನ ಫೋಟೋ ತೆಗೆದು ದೂರು ನೀಡಲು ಮುಂದಾದರೆ, ಗಲಾಟೆಗೆ ಕಾರಣವಾಗುತ್ತದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ನಿಗಾ ವಹಿಸಬೇಕು ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಬಗ್ಗೆ, ಬಸ್ ನಂಬರನ್ನು ಟ್ರಾಫಿಕ್ ಪೊಲೀಸರ ವಾಟ್ಸಾಪ್ (9480802300) ನಂಬರ್‌ಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.