Advertisement

ಫ‌ುಟ್‌ಬಾಲ್‌ ಆಡುವಾಗಲೇ ದುರ್ಮರಣ

12:01 AM Dec 31, 2019 | Team Udayavani |

ಮಲಪ್ಪುರ: ಕೇರಳದ ಖ್ಯಾತ ಫ‌ುಟ್‌ಬಾಲ್‌ ಆಟಗಾರ ಆರ್‌. ಧನರಾಜನ್‌ (39) ಮಣಪ್ಪುರದಲ್ಲಿ ನಡೆದ ಫ‌ುಟ್‌ಬಾಲ್‌ ಪಂದ್ಯದಲ್ಲಿ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

Advertisement

7 ಮಂದಿ ಆಟಗಾರರುಳ್ಳ ಸ್ಥಳೀಯ ಫ‌ುಟ್‌ಬಾಲ್‌ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ಪಂದ್ಯದ 27ನೇ ನಿಮಿಷದಲ್ಲಿ ಧನರಾಜನ್‌ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next