Advertisement

ಕೃಷಿ ಕಾಯಕಕ್ಕಿಳಿದ ಫುಟ್ಬಾಲ್‌ ಆಟಗಾರ : ಅಂದು ಫುಟ್ಬಾಲ್‌ ಆಟಗಾರ ಇಂದು ಕಲ್ಲಂಗಡಿ ಬೆಳೆಗಾರ

11:48 AM Mar 10, 2022 | Team Udayavani |

ಕಟಪಾಡಿ : ಈ ಬಾರಿಯ ಬೇಸಗೆಯ ಬಿಸಿಲ ಬೇಗೆಯನ್ನು ತೀರಿಸಲು ಮಾರುಕಟ್ಟೆ ಪ್ರವೇಶಿಸುತ್ತಿದೆ ಮಟ್ಟು ಪ್ರದೇಶದಲ್ಲಿ ಮಾಜಿ ಫ‌ುಟ್ಬಾಲ್‌ ಆಟ ಗಾರ ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣು.
ಸದಾ ಪ್ರಯೋಗಶೀಲ ಪ್ರವೃತ್ತಿಯ ಯುವ ಕೃಷಿಕ ಯಶೋಧರ ಕೋಟ್ಯಾನ್‌ ಮಟ್ಟು ಅವರು ಕಳೆದ 10 ವರ್ಷದಿಂದಲೂ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಿದ್ದಾರೆ. ಈ ಬಾರಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಸಿ ಯಶಸ್ವಿಯಾಗುತ್ತಿದ್ದು, ಈ ಋತುವಿನ ಕಲ್ಲಂಗಡಿ ಹಣ್ಣು 70 ದಿನಗಳ ಸೂಕ್ತ ಆರೈಕೆಯ ಬಳಿಕ ಈಗಾಗಲೇ ಉಡುಪಿ ಮತ್ತು ಮಂಗಳೂರು ಭಾಗದ ಮಾರುಕಟ್ಟೆಯನ್ನು ಪ್ರವೇಶಿಸಿವೆ.

Advertisement

ಇಚ್ಛಾ ಶಕ್ತಿ ಇದ್ದರೆ ಸಾಧನೆಗೆ ಯಾವತ್ತೂ ಅಡ್ಡಿಯಾಗಲಾರದು ಎಂಬ ಧ್ಯೇಯ ಅವ ರದು. ಕಲ್ಲಂಗಡಿ ಹಣ್ಣಿನ ಕೃಷಿಗೆ ಹೆಚ್ಚಿನ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಹಟ್ಟಿಗೊಬ್ಬರ ಮತ್ತು ಎರೆಹುಳ ಗೊಬ್ಬರವನ್ನು ಬಳಸುತ್ತಿದ್ದಾರೆ.

ಪ್ರತಿಕೂಲ ವಾತಾವರಣದ ಹೊಡೆತ
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಶೋಧರ ಕೋಟ್ಯಾನ್‌ ಕೃಷಿಗೆ ಮಾರು ಹೋಗಿದ್ದಾರೆ. ಒಂದು ಎಕರೆ ಗದ್ದೆಯಲ್ಲಿ ಸುಮೋ ತಳಿಯ ವಾಟರ್‌ ಮೆಲನ್‌ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಪ್ರತಿಕೂಲ ವಾತಾವರಣದಿಂದಾಗಿ ಸಮರ್ಪಕ ಬೆಳೆಯನ್ನು ತೆಗೆಯಲು ಕಷ್ಟ ವಾ ಗು ತ್ತಿದೆ. 50 ಸಾವಿರ ರೂ. ಹಣವನ್ನು ತೊಡಗಿಸಿಕೊಂಡಿದ್ದು, ಸುಮಾರು ಒಂದೂವರೆ ಲಕ್ಷದಷ್ಟು ಆದಾಯ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕೋಟ್ಯಾನ್‌ ತಿಳಿಸಿದ್ದಾರೆ.

ಎರವಲು ಗದ್ದೆಯಲ್ಲಿ ಸಾಧನೆ
ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಭತ್ತದ ಬೇಸಾಯವನ್ನು ನಡೆಸಿದ್ದು, ಬಳಿಕ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳವನ್ನು ಬೆಳೆದಿದ್ದಾರೆ.
ಸಮಗ್ರ ಕೃಷಿಕನಾಗಿ ವರ್ಷವಿಡೀ ಕೃಷಿ ಮಣ್ಣಿನ ನಂಟಿನೊಂದಿಗೆ ಗಾಢವಾದ ಬಾಂಧವ್ಯವನ್ನು ಬೆಸೆದುಕೊಂಡಿರುವ ಯಶೋಧರ ಮಟ್ಟು ಅವರು, ಈ ಬಾರಿಯ ಕಲ್ಲಂಗಡಿ ಬೆಳೆಗೆ ಗೊಬ್ಬರ, ಮಲ್ಚಿಂಗ್  ಶೀಟ್‌ ಬಳಸುತ್ತಿದ್ದಾರೆ. ಇವರು ಎರವಲು ಗದ್ದೆಯಲ್ಲಿ ಬೆಳೆಯನ್ನು ಬೆಳೆದಿದ್ದಾರೆ.

ಸಮರ್ಪಕ ನೀರು ಇಲ್ಲದ ಪ್ರದೇಶದಲ್ಲಿಯೂ ಕೃಷಿಯ ಸಾಧನೆ ಅವರ ಅದಮ್ಯ ಉತ್ಸಾಹದ ಪ್ರತೀಕ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಎರವಲು ಭೂಮಿ ಪಡೆದು ಕೃಷಿ ನಡೆಸಬೇಕೆಂಬ ಉತ್ಸಾಹ ಇವರಲ್ಲಿದೆ.

Advertisement

ಒಂದು ಹಣ್ಣಿನ ತೂಕ 10-16 ಕೆ.ಜಿ.
ಒಂದು ಕಲ್ಲಂಗಡಿ ಸರಿಸುಮಾರು 10ರಿಂದ 16 ಕಿಲೋ ತೂಗುತ್ತಿದೆ. ಸ್ವತಃ ಹೋಲ್‌ಸೇಲ್‌ ವ್ಯಾಪಾರಸ್ಥರೇ ಪ್ರಯೋಗಶೀಲನ ಕ್ಷೇತ್ರಕ್ಕೆ ಬಂದು ಕಲ್ಲಂಗಡಿ ಬೆಳೆಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

ಅಂದು ಫುಟ್ಬಾಲ್‌ ಆಟಗಾರ ಇಂದು ಕಲ್ಲಂಗಡಿ ಬೆಳೆಗಾರ
ಯಶೋಧರ ಕೋಟ್ಯಾನ್‌ ಬಾಲ್ಯದಲ್ಲಿ ಮುಂಬಯಿಯಲ್ಲಿ ಶಿಕ್ಷಣ ಪಡೆದು ಉದ್ಯೋಗಿ ಯಾದರು. ಫುಟ್‌ಬಾಲ್‌ ದಂತಕತೆಯಾಗಿದ್ದ ಮರಡೋನಾ ಆಟಕ್ಕೆ ಮರುಳಾಗಿ ಫುಟ್ಬಾಲ್‌ ಸಾಧಕನಾಗುವ ಕನಸು ಚಿಗುರೊಡೆದಿತ್ತು. ಮಹಾರಾಷ್ಟ್ರದ ಬಾಂಬೆ ಪೋರ್ಟ್‌ ಫುಟ್‌ಬಾಲ್‌ ಜೂನಿಯರ್‌ ತಂಡವನ್ನು ಪ್ರತಿನಿಧಿಸಿದ್ದ ಯಶೋಧರ ಫಾರ್ವರ್ಡ್‌ ಆಟಗಾರನಾಗಿ ಮಿಂಚಿದ್ದರು. ಪರಿಸ್ಥಿತಿಯ ಕೈಗೊಂಬೆಯಾಗಿ ತಾಯ್ನಾಡಿಗೆ ಮರಳಿದ ಅನಂತರ ಕೃಷಿಯೇ ಜೀವನವಾಯಿತು. ಕೃಷಿಯ ಛಲದ ಬಲವೇ ದಾರಿದೀಪವಾಯಿತು. “ಇದ್ದ ಕೃಷಿಯನ್ನು ಬೆಳೆಸಿದಲ್ಲಿ ದೇಶ ಸುಭಿಕ್ಷವಾಗುತ್ತದೆ. ಮಣ್ಣಿನ ಒಡನಾಟದಿಂದ ಆರೋಗ್ಯ ಸಬಲವಾಗುತ್ತದೆ ಎನ್ನುತ್ತಾರೆ.

ದರ ಕುಸಿತ- ಕಳವಳ
ಈ ಬಾರಿ ರಾಜ್ಯದ ಇತರೆಡೆಗಳಿಂದ ಯಥೇತ್ಛ ಪ್ರಮಾಣದ ಕಲ್ಲಂಗಡಿ ಹಣ್ಣು ಮಾರುಕಟ್ಟೆ ಪ್ರವೇಶ ಪಡೆದಿರುವುದರಿಂದ ಮಟ್ಟು ಭಾಗದ ಸಿಹಿಯಾದ ಕಲ್ಲಂಗಡಿ ಹಣ್ಣು ಖರೀದಿಗೆ ದರ ಕುಸಿತ ಬಾಧಿ ಸುತ್ತಿದೆ. ಇಳುವರಿ ಕುಂಠಿತವಿದ್ದರೂ ಸುಮಾರು ಒಂಬತ್ತು ಟನ್‌ ಕಲ್ಲಂಗಡಿ ಹಣ್ಣುಗಳನ್ನು ಪಡೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next