Advertisement
ಇದರೊಂದಿಗೆ ಬುಧವಾರ ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ.
ಸ್ಯಾಫ್ ಕಪ್‌ನಲ್ಲಿ ಭಾರತ- ಪಾಕಿಸ್ಥಾನ ತಂಡಗಳು 5 ವರ್ಷಗಳ ಬಳಿಕ ಮುಖಾಮುಖೀ ಯಾಗುತ್ತಿವೆ. 2013ರಲ್ಲಿ ಕಠ್ಮಂಡುವಿನಲ್ಲಿ ನಡೆದ ಪಂದ್ಯದಲ್ಲಿ ಇತ್ತಂಡಗಳು ಕೊನೆಯ ಸಲ ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಪಾಕಿಸ್ಥಾಕ್ಕೆ ಸೋಲುಣಿಸಿತ್ತು. ಮಾಲ್ಡೀವ್ಸ್ ವಿರುದ್ಧದ ಗೆಲುವಿನೊಂದಿಗೆ ಭಾರತ ಒಟ್ಟು 6 ಅಂಕಗಳೊಂದಿಗೆ “ಬಿ’ ವಿಭಾಗದ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಮಾಲ್ಡೀವ್ಸ್‌ವಿರುದ್ಧ ನಿಖೀಲ್ ಪೂಜಾರಿ (36ನೇ ನಿಮಿಷ) ಹಾಗೂ ಮನ್ವೀರ್ ಸಿಂಗ್ (45ನೇ ನಿಮಿಷ) ಗೋಲು ದಾಖಲಿಸಿದರು. ಇವರಿಬ್ಬರಿಗೂ ಇದು ಮೊದಲ ಅಂತಾರಾಷ್ಟ್ರೀಯ ಗೋಲು ಎನ್ನುವುದು ವಿಶೇಷ.