Advertisement

Football ಪಂದ್ಯದಲ್ಲಿ ಸೋತ ಸಿಟ್ಟಿಗೆ ತಲೆಗೂದಲು ಎಳೆದಾಡಿ ವಿದ್ಯಾರ್ಥಿಗಳಿಗೆ ಥಳಿಸಿದ ಶಿಕ್ಷಕ

12:07 PM Aug 16, 2024 | Team Udayavani |

ತಮಿಳುನಾಡು: ಫುಟ್ಬಾಲ್ ಪಂದ್ಯಾಟದಲ್ಲಿ ಕಳಪೆ ಪ್ರದರ್ಶನ ನೀಡಿ ಸೋತ ಸಿಟ್ಟಿಗೆ ದೈಹಿಕ ಶಿಖಕರೊಬ್ಬರು ಫುಟ್ಬಾಲ್ ಆಟಗಾರರನ್ನು ಮನಬಂದಂತೆ ಥಳಿಸಿರುವ ಅಮಾನುಷ ಘಟನೆ ಯೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

Advertisement

ವೈರಲ್ ವೀಡಿಯೊ ಸೇಲಂ ಜಿಲ್ಲೆಯ ಮೆಟ್ಟೂರು ನಗರದ ಬಳಿಯ ಶಾಲೆಯದ್ದು ಎನ್ನಲಾಗಿದ್ದು. ದೈಹಿಕ ಶಿಕ್ಷಕರ ಹೆಸರು ಅಣ್ಣಾಮಲೈ ಎಂದು ಹೇಳಲಾಗಿದ್ದು ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳ ಪ್ರದರ್ಶನ ಶಿಕ್ಷಕರಿಗೆ ಇಷ್ಟವಾಗಲಿಲ್ಲ ಎಂದು ಹೇಳಲಾಗುತ್ತಿದ್ದು ಇದರಿಂದ ಕೋಪಗೊಂಡ ಶಿಕ್ಷಕರು ವಿದ್ಯಾರ್ಥಿಗಳ ಕೂದಲು ಎಳೆದಾಡಿ, ಕಪಾಳಕ್ಕೆ ಹೊಡೆದು ಹಿಂಸೆ ನೀಡಿದ್ದಾರೆ ಅಲ್ಲದೆ ಬೂಟು ಕಾಲಿನಿಂದ ವಿದ್ಯಾರ್ಥಿಗಳಿಗೆ ಒದೆ ನೀಡಿದ್ದಾರೆ. ಸದ್ಯ ಶಿಕ್ಷಕನ ಕ್ರೌರ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಜಿಲ್ಲಾ ಶಿಕ್ಷಣಾಧಿಕಾರಿ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದು ಅಲ್ಲದೆ ಘಟನೆ ಬಗ್ಗೆ ತನಿಖೆ ನಡೆಸಲು ತಂಡ ರಚಿಸಿದೆ ಎಂದು ಶಿಕ್ಷಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next