Advertisement
ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂಬಂತೆ ಆರೋಗ್ಯಯುತ ಆಹಾರ ಪದ್ಧತಿ ಅನುಸರಿಸಿಕೊಂಡರೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಕಣ್ಣಿನ ಆರೋಗ್ಯ ಹೆಚ್ಚಿಸಲು ಯಾವೆಲ್ಲಾ ಆಹಾರಗಳನ್ನು ದಿನನಿತ್ಯ ಸೇವಿಸಬೇಕು ಎಂದು ತಿಳಿದುಕೊಳ್ಳೋಣ.
Related Articles
Advertisement
ಕ್ಯಾರೆಟ್: ಕ್ಯಾರೆಟ್ನಲ್ಲಿನ ವಿಟಮಿನ್ ಎ ಮತ್ತು ಬೆಟಾ ಕ್ಯಾರೊಟೆನ್ ಕಣ್ಣಿನ ಅರೋಗ್ಯ ಕಾಪಾಡುತ್ತದೆ. ವಿಟಮಿನ್ ಎ ಮತ್ತು ಬೆಟಾ ಕ್ಯಾರೊಟಿನೆ ಕಣ್ಣಿನ ಸೋಂಕು ಮತ್ತು ಇತರೆ ಕಣ್ಣಿನ ಗಂಭೀರ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ತೀಕ್ಷ್ಣ ದೃಷ್ಟಿ ಬೇಕಾದರೆ ದಿನನಿತ್ಯ ಕ್ಯಾರೆಟ್ ತಿನ್ನವ ಅಭ್ಯಾಸ ಬೆಳೆಸಬೇಕು.
ಪಾಲಕ್ ಸೊಪ್ಪು: ಈ ಸೊಪ್ಪು ಕೂಡ ಕಣ್ಣುಗಳಿಗೆ ಉತ್ತಮ ಆಹಾರ. ಪಾಲಕ್ ಹಾಗೂ ಇತರ ಹಸಿರು ಸೊಪ್ಪುಗಳಲ್ಲಿರುವ ಲ್ಯೂಟೈನ್ ಅಂಶ ಕಣ್ಣುಗಳು ಬೇಗ ಮುಪ್ಪಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.
ಇತರ ಸಿಟ್ರಸ್ ಹಣ್ಣುಗಳು: ನಿಂಬೆ, ದ್ರಾಕ್ಷಿ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಕಣ್ಣಿನ ಹಾನಿಯನ್ನು ತಡೆಯುತ್ತದೆ. ವಿಟಮಿನ್ ಸಿ ಕಣ್ಣಿನ ಕಾರ್ಯ ನಿರ್ವಹಣೆ ಸುಧಾರಣೆ ಜೊತೆಗೆ ಕಣ್ಣಿನ ರಕ್ತದ ನರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ತುಪ್ಪ ಹಾಗೂ ಜೇನುತುಪ್ಪ: ಕಣ್ಣುಗಳು ಚೆನ್ನಾಗಿರಲು ತುಪ್ಪವನ್ನು ನಿಯಮಿತವಾಗಿ ಬಳಕೆ ಮಾಡಬೇಕು. ನಿಮ್ಮ ನಿಮ್ಮ ಜೀರ್ಣದ ಸಾಮರ್ಥ್ಯಕ್ಕೆ ತಕ್ಕಂತೆ ತುಪ್ಪ ಬಳಸುವುದು ಉತ್ತಮ. ತುಪ್ಪವನ್ನು ಬಳಸಿ ಹಲವು ವಿಧದ ಔಷಧಗಳನ್ನು ತಯಾರಿಸಲಾಗುತ್ತದೆ.
ಉತ್ತಮ ಜೇನುತುಪ್ಪ ಆಹಾರದಲ್ಲಿ ಬಳಸುವುದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ. ಕಲಬೆರಕೆ ಜೇನುತುಪ್ಪವನ್ನು ಬಳಕೆ ಮಾಡುವುದರಿಂದ ಕಣ್ಣುಗಳಿಗೆ ಹಾನಿ ಹೆಚ್ಚು ಎನ್ನಲಾಗುತ್ತದೆ.
ತ್ರಿಫಲಾ ಚೂರ್ಣ: ಇದನ್ನು ತುಪ್ಪ ಅಥವಾ ಜೇನುತುಪ್ಪದೊಂದಿಗೆ ರಾತ್ರಿ ಸಮಯ ಸೇವಿಸುವುದು ಉತ್ತಮ. ಇದರಿಂದ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ. ತ್ರಿಫಲಾ ಚೂರ್ಣದಲ್ಲಿ ಮೂರು ಕಾಯಿಗಳ ಪುಡಿಯನ್ನು ಬೆರೆಸಿ ತಯಾರಿಸಲಾಗುತ್ತದೆ. ಅವುಗಳೆಂದರೆ ನೆಲ್ಲಿಕಾಯಿ, ತಾರೇಕಾಯಿ ಹಾಗೂ ಅಳಲೆಕಾಯಿ. ಈ ಎಲ್ಲವುಗಳನ್ನು ಹೊಂದಿರುವ ಅತ್ಯುತ್ತಮ ಪದಾರ್ಥ ತ್ರಿಫಲಾ. ಇದರಿಂದ ಕಣ್ಣುಗಳಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮ.
ಮೊಟ್ಟೆ: ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಾಯಕವಾಗಿದೆ. ಮೊಟ್ಟೆಯಲ್ಲಿನ ಹಳದಿಯಲ್ಲಿ ವಿಟಮಿನ್ ಎ, ಲ್ಯೂಟಿನ್ ಅಂಶವಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಮೀನು: ಕಣ್ಣಿನ ಆರೋಗ್ಯಕ್ಕೆ ಮೀನು ಉತ್ತಮ ಆಹಾರಗಳಲ್ಲಿ ಒಂದು. ಮೀನಿನಲ್ಲಿರುವ ಸಲ್ಮೊನ್ ಅಂಶ ಉತ್ತಮ ಪರಿಣಾಮ ಬೀರುತ್ತದೆ. ಜೊತೆಗೆ ಇದರಲ್ಲಿನ ಒಮೆಗಾ- 3 ಫ್ಯಾಟಿ ಆಸಿಡ್ ಆರೋಗ್ಯಯುತ ಆಹಾರ ಪದ್ಧತಿಗೆ ಅಗತ್ಯವಾಗಿದೆ. ಒಮೆಗಾ-3 ಫ್ಯಾಟಿ ಆ್ಯಸಿಡ್ ದೃಷ್ಟಿ ಅಭಿವೃದ್ಧಿಗೆ ಸಹಾಯಕವಾಗುವುದರ ಜೊತೆಗೆ ಕಣ್ಣಿನ ದೃಷ್ಟಿ ಮರಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಾಮಾನ್ಯವಾದ ಕಣ್ಣಿನ ದೃಷ್ಟಿಗೆ ಈ ಮೇಲಿನ ವಸ್ತುಗಳು ಸಹಾಯ ಮಾಡಬಹುದು. ಆದರೆ, ಇದರ ಹೊರತಾಗಿ ಕಾಡುವ ಗಂಭೀರ ಕಣ್ಣಿನ ಸಮಸ್ಯೆಗೆ ವೈದ್ಯರ ಸಂಪರ್ಕಿಸುವುದು ಉತ್ತಮ. ಇಲ್ಲದೇ ಹೋದಲ್ಲಿ ಇವು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.
*ಕಾವ್ಯಶ್ರೀ