Advertisement

ವಿಕಲಚೇತನರಿಗೆ ಫುಡ್‌ಕಿಟ್‌ ವಿತರಣೆ

11:00 PM Jul 09, 2021 | Team Udayavani |

ಮದ್ದೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಸಡ್ಡೆ ಮನೋಭಾವ ಹೊಂದದೆಕೋವಿಡ್‌ ಮಾರ್ಗಸೂಚಿ ಗಳನ್ನು ಪಾಲಿಸಬೇಕೆಂದು ಶಾಸಕ ಡಿ.ಸಿ. ತಮ್ಮಣ್ಣ ಮನವಿಮಾಡಿದರು.

Advertisement

ಪಟ್ಟಣದ ಎಚ್‌.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ 250 ಮಂದಿ ವಿಕಲಚೇತನರಿಗೆ ಆಹಾರದ ಕಿಟ್‌ ವಿತರಿಸಿ ಮಾತನಾಡಿದ ಅವರು, ಲಾಕ್‌ಡೌನ್‌ ತೆರವಾದಹಿನ್ನೆಲೆಯಲ್ಲಿ ಜನರು ಮೈ ಮರೆತಿದ್ದು, ಇದರಿಂದಾಗಿ ಸೋಂಕು ಪ್ರಕರಣ ಮತ್ತಷ್ಟು ಹೆಚ್ಚಳವಾಗುವ ಆತಂಕ ವ್ಯಕ್ತಪಡಿಸಿದರು.

ತಾಲೂಕಿನಾದ್ಯಂತ ಕೋವಿಡ್‌ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ರೈತರು, ನೌಕರರು, ಪೌರಕಾರ್ಮಿಕರು,ಆಶಾ,ಅಂಗನವಾಡಿಕಾರ್ಯಕರ್ತೆ ಯರೂ ಸೇರಿದಂತೆ ಕೊರೊನಾವಾರಿ ಯರ್ಸ್‌ಗಳಿಗೆ 10 ಸಾವಿರಕ್ಕೂ ಅಧಿಕಮಂದಿಗೆ ಆಹಾರದ ಕಿಟ್‌ ವಿತರಿಸಿದ್ದು, ವಿಕಲಚೇತನರಿಗೂ ಆಹಾರದ ಕಿಟ್‌ ವಿತರಿಸುವಮೂಲಕ ನೆರವಾಗಿರುವು ದಾಗಿ ತಿಳಿಸಿದರು.ಆರೋಗ್ಯ ಇಲಾಖೆ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸು ತ್ತಿದ್ದು ಇತರೆಇಲಾಖೆ ಅಧಿಕಾರಿಗಳು ಕೈಜೋಡಿಸುವ ಜತೆಗೆಅಂಗನವಾಡಿ, ಆಶಾ ಕಾರ್ಯಕರ್ತೆಯರುಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕುವಮೂಲಕ ಉತ್ತಮ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ವಿಕಲ ಚೇತನರಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷಎಸ್‌.ಸಿ. ರಮೇಶ್‌, ಸಂಯೋಜಕ ಮಹತೇಶ್‌ಹೀರೇಮs…, ಜನಪದ ಪರಿಷತ್‌ನ ಜಿಲ್ಲಾಧ್ಯಕ್ಷಡಿ.ಪಿ.ಸ್ವಾಮಿ, ವಿದ್ಯಾಸಂಸ್ಥೆ ಕಾರ್ಯದರ್ಶಿಅಪೂರ್ವಚಂದು, ಪ್ರಾಂಶುಪಾಲರಾದ ಯು.ಎಸ್‌.ಶಿವ ಕುಮಾರ್‌, ಶೆಂಡಿಗೆ, ಉಪನ್ಯಾಸಕರಾದ ಪ್ರಕಾಶ್‌, ಪಂಚಲಿಂಗೇಗೌಡ, ರೇವಣ್ಣಇದ್ದರು

Advertisement

Udayavani is now on Telegram. Click here to join our channel and stay updated with the latest news.

Next