ಕಲಬುರಗಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ತಿಳಿಸಿದ್ದಾರೆ. ಪ್ರತಿ ಕಾರ್ಡಿಗೆ ನಿಗದಿಪಡಿಸಿದ ಆಹಾರಧಾನ್ಯ ಪ್ರಮಾಣದ ವಿವರ ಇಂತಿದೆ.
ಅಂತ್ಯೋದಯ ಅನ್ನ (ಎಎವೈ): ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡಿಗೆ 35 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಇದಲ್ಲದೇ 1 ಕೆ.ಜಿ. ಸಕ್ಕರೆಯನ್ನು ಕೆ.ಜಿಗೆ 15ರೂ. ದರದಂತೆ, 1ಲೀಟರ್ ತಾಳೆಎಣ್ಣೆಯನ್ನು 25ರೂ.ದರದಂತೆ, 1ಕೆ.ಜಿ. ಉಪ್ಪನ್ನು ಕೆ.ಜಿಗೆ 2 ರೂ. ದರದಂತೆ ಹಾಗೂ 1 ಕೆ.ಜಿ. ಹೆಸರುಕಾಳು ಕೆ.ಜಿ.ಗೆ ರೂ. 33 ದರದಂತೆ ವಿತರಿಸಲಾಗುತ್ತಿದೆ.
ಬಿಪಿಎಲ್ ಏಕಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಇದಲ್ಲದೇ 1 ಕೆ.ಜಿ. ಸಕ್ಕರೆಯನ್ನು ಕೆ.ಜಿ.ಗೆ 15ರೂ. ದರದಂತೆ, 1ಲೀಟರ್ ತಾಳೆಎಣ್ಣೆಯನ್ನು 25ರೂ. ದರದಂತೆ, 1ಕೆ.ಜಿ. ಉಪ್ಪನ್ನು ಕೆ.ಜಿಗೆ 2 ರೂ. ದರದಂತೆ ಹಾಗೂ 1 ಕೆ.ಜಿ. ಹೆಸರುಕಾಳು ಕೆ.ಜಿ.ಗೆ 33ರೂ. ದರದಂತೆ ವಿತರಿಸಲಾಗುತ್ತಿದೆ.
ಒಂದನೇ ತಾರೀಖೀನಿಂದ ತಿಂಗಳ ಕೊನೆಯ ದಿನದವರೆಗೆ ಮಂಗಳವಾರ ಮತ್ತು ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆ ವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 8:00 ಗಂಟೆವರೆಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೂಪನ್ ವ್ಯವಸ್ಥೆ ಜಾರಿಯಲ್ಲಿರುವ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಕೂಪನ್ ಇರುವ ಪ್ರಮಾಣದಲ್ಲಿ ಆಹಾರಧಾನ್ಯ ಪಡೆಯಬೇಕು. ಒಂದು ವೇಳೆ ಅಂಗಡಿಯವರು ನಿರಾಕರಿಸಿದಲ್ಲಿ ಆಯಾ ತಾಲೂಕಿನ ತಹಶೀಲ್ದಾರರಿಗೆ, ಪಡಿತರ ಪ್ರದೇಶಕ್ಕೆ ಸಂಬಂಧಿಧಿ ಸಿದಂತೆ ಕಲಬುರಗಿ ಪಡಿತರ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.