Advertisement

Darshan: ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾ ರಿಲೀಸ್

09:23 AM Aug 30, 2024 | Team Udayavani |

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರದಿಂದ ಗುರುವಾರ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್ ಜೈಲಿನಲ್ಲಿ ಒಂದು ದಿನ ಕಳೆದಿದ್ದಾರೆ.
ಗುರುವಾರ ರಾತ್ರಿ ಊಟಕ್ಕೆ ರಾಗಿ ಮುದ್ದೆ ಜೊತೆಗೆ ಅನ್ನ ಸಾಂಬಾರ್ ನೀಡಲಾಗಿದ್ದು ಸ್ವಲ್ಪ ಮಾತ್ರ ಊಟ ಮಾಡಿದ್ದರಂತೆ,

Advertisement

ಹೊಸ ಸ್ಥಳವಾಗಿರುವ ಹಿನ್ನಲೆ ನಿದ್ದೆ ಸರಿಯಾಗಿ ಬಂದಿಲ್ಲ. ಅಲ್ಲದೆ ಜೈಲಿನಲ್ಲಿ ಸೊಳ್ಳೆಗಳು ಅಹಜವಾಗಿಯೇ ಇರುತ್ತವೆ, ಬೆಳಿಗ್ಗೆ ಬೇಗ ಎದ್ದಿದ್ದು ಅದರಂತೆ ಜೈಲು ಸಿಬಂದಿಗಳು 7.30ಗೆ ಉಪಹಾರ ನೀಡಿದ್ದಾರೆ.

ಬೆಳಗಿನ‌ ಉಪಹಾರಕ್ಕೆ ಚಿತ್ತನ್ನ, ಪುಳಿವೊಗರೆ, ಅವಲಕ್ಕಿ, ವಾಂಗಿ ಭಾತ್, ಟೊಮೆಟೊ ಬಾತ್, ಉಪ್ಪಿಟ್ಟು ಹೀಗೆ ಪ್ರತಿದಿನ ಒಂದೊಂದರಂತೆ ಮಾಡಲಾಗುತ್ತದೆ. ಅದೇ ರೀತಿ ಇಂದು ಮಧ್ಯಾಹ್ನದ ಊಟಕ್ಕೆ ಚಿಕನ್, ಚಪಾತಿ, ಮುದ್ದೆ, ಸಾಂಬಾರ್ ಮಜ್ಜಿಗೆ ಕೊಡಲಿದ್ದಾರೆ.

ಶಾಸ್ತ್ರಿ ಸಿನಿಮಾ ರಿಲೀಸ್:

ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಶಾಸ್ತ್ರಿ ಶುಕ್ರವಾರ ರಿಲೀಸ್ ಆಗುತ್ತಿದೆಯಂತೆ, ಅದರಂತೆ ಬಳ್ಳಾರಿಯ ರಾಘವೇಂದ್ರ ಟಾಕೀಸ್ ನಲ್ಲಿ ದರ್ಶನ್ ನಟನೆಯ ಸಿನಿಮಾ ಪ್ರದರ್ಶನ ಕಾಣಲಿದೆ. ಬೆಳಿಗ್ಗೆ 10.30ಕ್ಕೆ ಮೊದಲ ಶೋ ಆರಂಭವಾಗಲಿದ್ದು ನಿರೀಕ್ಷಿತ ಮಟ್ಟದಲ್ಲಿ ಅಭಿಮಾನಿಗಳು ಬರುತ್ತಾರೆಯೇ ಎಂದು ಕಾದು ನೋಡಬೇಕಿದೆ.

Advertisement

ಇದನ್ನೂ ಓದಿ: Renukaswamy Case: ಇಂದು (ಆ.30) ವಿಜಯಪುರ ದರ್ಗಾ ಜೈಲಿಗೆ ದರ್ಶನ್ ಸಹಚರ ವಿನಯ್

Advertisement

Udayavani is now on Telegram. Click here to join our channel and stay updated with the latest news.