ವಾಷಿಂಗ್ಟನ್: ಜಾಲತಾಣಗಳಲ್ಲಿ ಖರೀದಿಸಿದ್ದನ್ನು ಡ್ರೋನ್ ಮೂಲಕ ರವಾನಿಸಿದ್ದಾಯ್ತು. ಈಗ ಆಹಾರವನ್ನೂ ಹೋಟೆಲ್‌ಗಳಿಂದ ನೇರವಾಗಿ ಗ್ರಾಹಕರ ಮನೆಗೆ ಸಾಗಿಸುವ ಕಲ್ಪನೆಯೊಂದು ಡ್ರೋನ್ ಮೂಲಕ ಜಾರಿಗೆ ಬರಲಿದೆ.
ಮುಂದಿನ ವರ್ಷದಿಂದ ಡ್ರೋನ್ ಮೂಲಕ ಡೆಲಿವರಿ ನೀಡುವ ವ್ಯವಸ್ಥೆಯನ್ನು ಊಬರ್ ಈಟ್ಸ್ ಜಾರಿಗೆ ತರಲಿದೆ. ಸ್ಯಾನ್‌ಡಿಯಾಗೋದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಕನಿಷ್ಠ ಇಬ್ಬರು ವ್ಯಕ್ತಿಗಳಿಗೆ ಡ್ರೋನ್ ಮೂಲಕ ಆಹಾರ ರವಾನೆ ಮಾಡಬಹುದು. ಆರು ಪ್ರೊಫೆಲ್ಲರ್‌ಗಳುಳ್ಳ ಡ್ರೋನ್‌ಗಳು ಇವಾಗಿವೆ. ಆರಂಭದಲ್ಲಿ ಕಡಿಮೆ ದೂರಕ್ಕೆ ಆಹಾರ ಪೂರೈಕೆ ನಡೆಯಲಿದೆ. 8 ನಿಮಿಷ ಹಾರಾಟ ನಡೆಸಿ ಡೆಲಿವರಿ ನಡೆಸಲಿವೆ. ಮುಂದಿನ ಭಾಗದಲ್ಲಿ ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳನ್ನು ಪರಿಚಯಿಸಲು ಊಬರ್ ನಿರ್ಧರಿಸಿದೆ.
ಈ ಡ್ರೋನ್‌ಗಳು ಸುಮಾರು 23 ಕಿ.ಮೀ.ವರೆಗೆ ಹಾರಾಟ ನಡೆಸಬಲ್ಲವು. ಕಂಪೆನಿಯ ಕೌÉಡ್ ನಿಯಂತ್ರಣ ವ್ಯವಸ್ಥೆಯ ಮೂಲಕ ಡ್ರೋನ್‌ಗಳು ಕಾರ್ಯನಿರ್ವಹಿಸಲಿವೆ.
ಗ್ರಾಹಕರು ಆಹಾರ ಬುಕ್ ಮಾಡಿದ ತಕ್ಷಣ ಹೋಟೆಲ್‌ನವರು ಆಹಾರ ತಯಾರು ಮಾಡಿ ಡ್ರೋನ್‌ಗೆ ಲೋಡ್ ಮಾಡುತ್ತಾರೆ. ಅದು ಪೂರ್ವ ನಿರ್ಧರಿತ ಜಾಗದಲ್ಲಿ ಗ್ರಾಹಕರಿಗೆ ತಲುಪಿಸುತ್ತದೆ.
ಡ್ರೋನ್ ಮೂಲಕ ವೇಗವಾಗಿ ಗ್ರಾಹಕರಿಗೆ ಆಹಾರ ತಲುಪಿಸಬಹುದು ಎಂಬುದು ಊಬರ್ ಈಟ್ಸ್ ಲೆಕ್ಕಾಚಾರ. ಆದ್ದರಿಂದ ಈ ಮೊದಲೇ ಗ್ರಾಹಕರಿಗೆ ಪಾರ್ಸೆಲ್‌ಗಳನ್ನು ತಲುಪಿಸುತ್ತಿರುವ ಅಮೆಜಾನ್‌ನೊಂದಿಗೆ ಅದು ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲೂ ಝೊಮೊಟೊ ಡ್ರೋನ್ ಮೂಲಕ ಆಹಾರ ಪೂರೈಕೆಗೆ ವ್ಯವಸ್ಥೆಗೆ ಉದ್ದೇಶಿಸಿದೆ. ಕಳೆದ ವರ್ಷ ಟೆಕ್ ಈಗಲ್ ಕಂಪೆನಿಯೊಂದಿಗೆ ಅದು ಒಪ್ಪಂದ ಮಾಡಿಕೊಂಡಿತ್ತು. ಜತೆಗೆ 80 ಕಿ.ಮೀ. ವೇಗದಲ್ಲಿ, 5 ಕಿ.ಮೀ.ವರೆಗೆ ಸಾಗುವ ಡ್ರೋನ್ ಅನ್ನು ಡೆಲಿವರಿಗೆ ನಿಯೋಜಿಸುವುದಾಗಿ ಅದು ಹೇಳಿತ್ತು.