Advertisement
ಆರಂಭದಲ್ಲಿ ಈ ಸೇವೆಯನ್ನು ದೇಶದ ಆಯ್ದ ರೈಲ್ವೇ ನಿಲ್ದಾಣಗಳಿಂದ ಮಾತ್ರ ಪ್ರಾರಂಭಿಸಲಾಗುತ್ತದೆ. ಕೋವಿಡ್ ಪೂರ್ವದಲ್ಲಿ ಐಆರ್‌ಟಿಸಿ 20 ಸಾವಿರ ಆರ್ಡರ್‌ಗಳನ್ನು ಪ್ರತೀ ದಿನ ಪಡೆಯುತ್ತಿತ್ತು.
ರೈಲ್ ರೆಸ್ಟ್ರೊ ಈ ತಿಂಗಳ ಅಂತ್ಯದಿಂದ ಕೆಲಸವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದಕ್ಕಾಗಿ ಕಂಪೆನಿಯು ಕಾರ್ಯಾಚರಣೆಯ ಸಮಯದಲ್ಲಿ ವಿವಿಧ ಸಮಯಗಳಲ್ಲಿ ರೆಸ್ಟೋರೆಂಟ್ ಸಿಬಂದಿ ಮತ್ತು ವಿತರಣಾ ಸಿಬಂದಿಯ ಥರ್ಮಲ್ ಸ್ಕ್ಯಾನಿಂಗ್, ಅಡುಗೆ ಮನೆಗಳ ಸ್ವಚ್ಛತೆ, ಎಲ್ಲ ಸಿಬಂದಿಗೆ ಮಾಸ್ಕ್‌ಗಳು ಅಥವಾ ಫೇಸ್‌ಶೀಲ್ಡ್‌ಗಳನ್ನು ಬಳಸಲು ಕಠಿನ ಮಾರ್ಗಸೂಚಿಗಳನ್ನು ನೀಡಿದೆ. ಆರಂಭದಲ್ಲಿ 30 ರೈಲು ನಿಲ್ದಾಣಗಳಲ್ಲಿ ಇದು ದೊರೆಯಲಿದ್ದು, 250 ರೈಲುಗಳಲ್ಲಿ ಇದು ಲಭಿಸಲಿದೆ.
Related Articles
ಐಆರ್‌ಸಿಟಿಸಿ ಅನೇಕ ಪ್ರಸಿದ್ಧ ಆಹಾರ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೈಲು ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರು ಎಂಟಿಆರ್, ಐಟಿಸಿ, ಡುಕೆನ್, ಟೈಗರ್ ಗೋಟ್, ಆರ್‌ಕೆ ಕ್ಯಾಟರರ್, ಹಲ್ದಿರಾಮ್ ಸೇರಿದಂತೆ ಅನೇಕ ಪ್ರಸಿದ್ಧ ಕಂಪೆನಿಗಳಿಂದ ಆಹಾರ ಪಡೆಯಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಈ ಸಮಯದಲ್ಲಿ ವಿಶೇಷ ರೈಲುಗಳು ಮಾತ್ರ ಓಡುತ್ತಿವೆ. ಹೀಗಾಗಿ ಹಳೆಯ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
Advertisement
ecatering.irctc.com ಮೂಲಕ ಪ್ರಯಾಣಿಕರು ಇ-ಕ್ಯಾಟರಿಂಗ್ ಸೇವೆಯ ಪ್ರಯೋಜನ ಪಡೆಯಬಹುದು. ಇದಲ್ಲದೆ ಫೋನ್ ಮೂಲಕ ಇ-ಕ್ಯಾಟರಿಂಗ್ ಸೇವೆಯನ್ನು ಸಹ ಪಡೆಯಬಹುದು. ಪ್ರಯಾಣಿಕರು ಐಆರ್‌ಟಿಸಿ ಇ-ಕ್ಯಾಟರಿಂಗ್ ಅಪ್ಲಿಕೇಶನ್ ʼಫುಡ್ ಆನ್ ಟ್ರ್ಯಾಕ್ʼ ಅನ್ನು ಡೌನ್ಲೋಡ್ ಮಾಡಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಸಹ ನೀಡಲಾಗುವುದು.