Advertisement
ಹಾಗೆಂದು ಇದು ಹೊಟೇಲ್, ರೆಸ್ಟೋರೆಂಟ್ ಸೇರಿ ಆಯಾ ಆಹಾರ ತಯಾರಿಕೆ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ. ಒಂದು ವೇಳೆ ಅವರಿದನ್ನು ಅಳವಡಿಸಿಕೊಂಡರೆ ಗ್ರಾಹಕರ ಆರೋಗ್ಯದ ಕಾಳಜಿಯ ಜತೆ ಅವುಗಳ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸುತ್ತದೆ.
Related Articles
Advertisement
ಹಣ್ಣು ಮಾಗಿಸಲು ಕ್ಯಾಲ್ಶೀಯಂ ಕಾರ್ಬಡೈ ಬಳಕೆ ನಿಷೇಧಿಸಿ, ಇಥಿಲಿನ್ ಬಳಕೆಯ ಸಾಂದ್ರತೆಯನ್ನು 100 ಪಿಪಿಎಂ ಮಿತಿಯೊಳಗೆ ಬಳಕೆ ಮಾಡತಕ್ಕದ್ದು, ಆಹಾರದಲ್ಲಿ ಅಜಿನೋಮೋಟೋ ಅಥವಾ ಮಾನೋ ಸೋಡಿಯಂ ಗೊಟಾಮೇಟ್ ಬಳಸುವುದನ್ನು ನಿಷೇಧಿಸಲಾಗಿದೆ. ಇಲಾಖೆಯು ಧಾನ್ಯ, ಹಣ್ಣು, ತರಕಾರಿ ವ್ಯಾಪಾರಿಗಳು ಹಾಗೂ ಬೇಕರಿ- ಕೇಕ್ ತಯಾರಕರಿಗೆ ಕಡ್ಡಾಯವಾಗಿ ಇಲಾಖೆಯಿಂದ ನೋಂದಣಿ ಅಥವಾ ಪರವಾನಿಗೆ ಪಡೆಯುವಂತೆ ಸೂಚಿಸಿದೆ.
ಇಲಾಖೆ ಅಧಿಕಾರಿಗಳು, ಮಾಲ್ ಮಾಲಕರು, ಹೊಟೇಲ್, ತರಕಾರಿ, ಧಾನ್ಯ, ಹಣ್ಣು, ಬೇಕರಿ ಅಸೋಸಿಯೇಶನ್ ಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಆಹಾರ ಸುರಕ್ಷತಾ ಗುಣಮಟ್ಟದ ನಿಯಮಗಳನ್ನು ಪಾಲಿಸಲು ಒಪ್ಪಿಗೆ ಸೂಚಿಸಲಾಗಿದೆ. ಪ್ರಾಯೋಗಾಲಯದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.
ಟೆಸ್ಟಿಂಗ್ ಪ್ರಯೋಗಾಲಯ!
ಸಾರ್ವಜನಿಕರಿಗೆ ತಾವು ಸೇವಿಸುವ ಆಹಾರದಲ್ಲಿ ರಾಸಾಯನಿಕ ಅಂಶಗಳಿವೆ ಎನ್ನುವ ಬಗ್ಗೆ ಅನುಮಾನಗಳನ್ನು ಪರಿಶೀಲಿಸಲು ಹೊಟೇಲ್ ಹಾಗೂ ಮಾಲ್ ಸೇರಿದಂತೆ ವಿವಿಧೆಡೆ ಫುಡ್ ಟೆಸ್ಟಿಂಗ್ ಪ್ರಯೋಗಾಲಯ ಸ್ಥಾಪಿಸಲು ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಪ್ರಯೋಗಾಲಯ ಪ್ರಾರಂಭವಾಗಲಿದ್ದು, ಆಸಕ್ತರ ಆಹಾರ ಉದ್ದಿಮೆಗಳ ಮಾಲಕರಿಗೆ ಅಗತ್ಯವಿರುವ ಉಪಕರಣಗಳನ್ನು ಇಲಾಖೆಯ ಮೂಲಕ ನೀಡಲಾಗುತ್ತದೆ. ಅದರ ನಿರ್ವಹಣೆಯನ್ನು ಮಾಲಕರು ಮಾಡಬೇಕಾಗುತ್ತದೆ.
ನಿಷೇಧ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಆಹಾರ ಸೇವನೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ರಾಸಾಯನಿಕ ಪದಾರ್ಥ ಬಳಸುವ ಕಬಾಬ್, ಗೋಬಿ ಹಾಗೂ ಲಿಕ್ವಿಡ್ ನೈಟ್ರೋಜನ್ ನಿಷೇಧಿಸಲಾಗಿದೆ. “ಫುಡ್ ಟೆಸ್ಟಿಂಗ್ ಪ್ರಯೋಗಾಲಯ’ ಹಾಗೂ “ಫುಡ್ ಆಡಿಟಿಂಗ್’ನಿಂದ ಆಹಾರ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಗುಣಮಟ್ಟದ ಆಹಾರ ಜನರಿಗೆ ಸಿಗಲಿದೆ. – ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಹೈಜೆನಿಕ್ ಫುಡ್ ಆಡಿಟಿಂಗ್, ಸಿಬಂದಿಗೆ ನಿಯಮಿತ ತರಬೇತಿ, ಎಫ್ಸ್‌ಎಸ್‌ಎಐ ನಿಗದಿಪಡಿಸಿದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇತರ ಸಲಹೆಗಳನ್ನು ಇಲಾಖೆ ನೀಡಿದೆ. – ಪಿ.ಸಿ. ರಾವ್, ಹೊಟೇಲ್ ಅಸೋಸಿಯೇಶನ್, ಬೆಂಗಳೂರು
ತೃಪ್ತಿ ಕುಮ್ರಗೋಡು