Advertisement

ಥಾಯ್ಲೆಂಡ್‌: ಆಹಾರವಿಲ್ಲದೇ ಆನೆಗಳ ಆಕ್ರಂದನ

01:24 PM Apr 23, 2020 | sudhir |

ಬ್ಯಾಂಕಾಕ್‌: ದಿನದಿಂದ ದಿನಕ್ಕೆ ಕೋವಿಡ್‌-19 ದಾಳಿ ಹೆಚ್ಚಾಗುತ್ತಿದ್ದು, ಸೋಂಕಿನ ಕಿಚ್ಚಿನ ಕಾವು ಮೃಗಾಲಯಗಳನ್ನೂ ಬಿಟ್ಟಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಅಭಯಾರಣ್ಯಗಳ ಕೂಗು ಕೇಳಿಸತೊಡಗಿದೆ. ಈಗ ಥಾಯ್ಲೆಂಡ್‌ ಮೃಗಾಲಯಗಳ ಆನೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ.

Advertisement

ಲಂಡನ್‌ ಮೂಲದ ವರ್ಲ್ಡ್ ಅನಿಮಲ್‌ ಪ್ರೊಟೆಕ್ಷನ್‌ (ಡಬ್ಲೂಎಪಿ) ಪ್ರಕಾರ ಥಾಯ್ಲೆಂಡ್‌ ಶಿಬಿರ ಮತ್ತು ಅಭಯಾರಣ್ಯಗಳಲ್ಲಿರುವ 2 ಸಾವಿರಕ್ಕೂ ಹೆಚ್ಚು ಆನೆಗಳು ತೊಂದರೆ ಯಲ್ಲಿವೆ. ಪ್ರವಾಸಿಗರ ಕೊರತೆ ಮತ್ತು ಸರಕಾರದ ನಿರ್ಬಂಧಗಳಿಂದ ಆನೆ ಶಿಬಿರಗಳು ಮುಚ್ಚುವ ಹಂತವನ್ನು ತಲು ಪಿದ್ದು, ಆನೆಗಳು ಹಸಿವಿ ನಿಂದ ಬಳಲುತ್ತಿವೆ. ಮೃಗಾಲಯದಲ್ಲಿರುವ ಆನೆಗಳು ಕೋವಿಡ್‌-19ಗೆ ತುತ್ತಾಗುತ್ತಾವೋ ಇಲ್ಲವೋ ಗೊತ್ತಿಲ್ಲ. ಆದರೆ ಅವು ಅಪಾಯಕ್ಕೆ ಸಿಲುಕಿವೆ ಎಂದು ಸಂರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್‌ ಮಧ್ಯದಿಂದ ನಮ್ಮ ಶಿಬಿರಕ್ಕೆ ಯಾವುದೇ ಆದಾಯವಿಲ್ಲ. ಮುಂದಿನ ಆರು ತಿಂಗಳು ಯಾವುದೇ ಆದಾಯವಿರದು.

ಪರಿಸ್ಥಿತಿ ಹೀಗಿರುವಾಗ ಪ್ರಾಣಿಗಳ ಮತ್ತು ಅವುಗಳ ಉಸ್ತುವಾರಿಗಳ ಜೀವನೋಪಾಯಕ್ಕೆ ಏನು ಮಾಡುವುದೆಂದು ತೋಚುತ್ತಿಲ್ಲ ಆನೆ ಅಭಯಾರಣ್ಯದ ಚಾಂಗ್‌ಚಿಲ್‌ನ ನಿರ್ದೇಶಕರಾದ ಸುಪಕಾರ್ನ್ ತನಸೇತ್‌ ಮಾಧ್ಯಮ ಗಳಿಗೆ ತಿಳಿಸಿದ್ದಾರೆ.

ಥಾಯ್ಲೆಂಡ್‌ ಅಭಯಾ ರಣ್ಯಗಳು ಮತ್ತು ಏಷ್ಯಾದ ಇತರ ಆನೆ ಶಿಬಿರಗಳು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು, ಪ್ರವಾಸಿಗರಿಲ್ಲದೇ ಈ ಎಲ್ಲ ಶಿಬಿರಗಳು ಸಂಕಷ್ಟದಲ್ಲಿವೆ.

ವಿಶ್ವ ಪ್ರಾಣಿ ಸಂರಕ್ಷಣೆಯ ಅಂದಾಜಿನ ಪ್ರಕಾರ, ಉತ್ತರ ಥಾಯ್ಲೆಂಡ್‌ನ‌ಲ್ಲಿ ಸುಮಾರು 85ಕ್ಕೂ ಹೆಚ್ಚು ಆನೆ ಶಿಬಿರಗಳು ಬಾಗಿಲು ಮುಚ್ಚಿವೆ. ಕ್ಯಾಂಪ್‌ ಮಾಲಕರು ಪ್ರಾಣಿಗಳಿಗೆ ಆಹಾರ ಖರೀದಿಗೆ ಹೆಚ್ಚುವರಿ ಹಣಕ್ಕಾಗಿ ಪರದಾಡುತ್ತಿದ್ದಾರೆ. ಆನೆಯೊಂದಕ್ಕೆ ಪ್ರತಿದಿನ ಸುಮಾರು 300 ಅಥವಾ 400 ಕಿಲೋಗ್ರಾಂಗಳಷ್ಟು (660 ರಿಂದ 880 ಪೌಂಡ್‌) ಆಹಾರ ಅಗತ್ಯವಿದೆ. ಪ್ರತಿ ಆನೆಗೆ ಆಹಾರಕ್ಕಾಗಿ ಸರಾಸರಿ ಮಾಸಿಕ ಖರ್ಚು 10,000 ಟಿಎಚ್‌ಬಿ ಆಗಲಿದೆ. ಸ್ವತಃ ಕೊಹ್‌ಲಂಟಾದ ಫಾಲೋಯಿಂಗ್‌ ಜೈಂಟ್ಸ… ಆನೆ ಅಭಯಾರಣ್ಯದ ನಿರ್ದೇಶಕ ಚರೇ ಸಾಂಗಾRವ್‌ ಅವರೂ ಸಂಕಷ್ಟದಲ್ಲಿದ್ದು, ಆನೆಗಳ ಮತ್ತು ಮಾಲಕರ ಸ್ಥಿತಿ ಶೋಚನೀಯವಾಗಿದೆ.ನೈಸರ್ಗಿಕವಾಗಿ ಸಿಗುವ ಆಹಾರವನ್ನು ಆನೆಗಳು ತಿನ್ನಲಿ ಎಂದು ಬಿಡಲೂ ಅವಕಾಶವಿಲ್ಲ. ಕಾರಣ ಥಾಯ್ಲೆಂಡ್‌ನ‌ಲ್ಲಿ ಈ ವೇಳೆ ವಾತಾವರಣ ತುಂಬಾ ಬಿಸಿಯಾಗಿದೆ. ಜತೆಗೆ ಆನೆಗಳು ಸಂಚರಿಸುವಷ್ಟು ಪ್ರದೇಶವೂ ಇಲ್ಲ ಎಂಬುದು ಶಿಬಿರಗಳ ಮಾಲಕರ ಅಳಲು.

Advertisement
Advertisement

Udayavani is now on Telegram. Click here to join our channel and stay updated with the latest news.

Next