Advertisement
ಇಂದಿನ ಯುಗದಲ್ಲಿ ಮಾರುಕಟ್ಟೆಯಲ್ಲಿ ವಿವಿಧ ಶೈಲಿಯ ಪಾತ್ರೆಗಳು ಲಭ್ಯ. ಸ್ಟೀಲ್, ನಾನ್ ಸ್ಟಿಕ್, ಫೈಬರ್, ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವವರ ಸಂಖ್ಯೆಯೆ ಹೆಚ್ಚು. ಮಣ್ಣಿನ ಪಾತ್ರೆಗಳೊಂದಿಗೆ ತಾಮ್ರ, ಅಲ್ಯುಮಿನಿಯಂ ಪಾತ್ರೆಗಳು ಕೂಡಾ ಇಂದು ಮೂಲೆ ಸೇರಿವೆ.
Related Articles
Advertisement
ಹೆಚ್ಚಿನ ಪೋಷಕಾಂಶ:
ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆಯಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ. ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಬಳಸುವ ಮಣ್ಣಿನಲ್ಲಿ ಕೆಲವೊಂದು ಒಳ್ಳೆಯ ಗುಣಮಟ್ಟದ ಪೋಷಕಾಂಶಗಳಾದ ವಿಟಮಿನ್ ಬಿ12, ಕ್ಯಾಲ್ಸಿಯಂ, ಫೋಸ್ಪರಸ್, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಇದೆ. ಹಾಗಾಗಿ ಬೇರೆ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆ ಆಯ್ಕೆ ಒಳ್ಳೆಯದು ಎಂಬುದು ಸಲಹೆ.
ಮಣ್ಣಿನ ಪಾತ್ರೆಗಳು ದೀರ್ಘಕಾಲದ ತನಕ ಆಹಾರ ಬಿಸಿಯಾಗಿರುವಂತೆ ಮಾಡುತ್ತದೆ. ಇದರಿಂದಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಾಶವಾಗದೆ ಹಾಗೆ ಉಳಿಯುತ್ತದೆ. ದೀರ್ಘಕಾಲದ ತನಕ ಆಹಾರದಲ್ಲಿರುವ ಬಿಸಿ ಹಾಗೇ ಉಳಿಯುವ ಕಾರಣದಿಂದಾಗಿ ಪದೇ ಪದೇ ಆಹಾರ ಬಿಸಿ ಮಾಡಬೇಕೆಂದಿರುವುದಿಲ್ಲ.
ಕೆಲವೊಂದು ಆಹಾರ ಪದಾರ್ಥಗಳು ಕೆಲವೊಂದು ನಿರ್ದಿಷ್ಟ ರೋಗಗಳನ್ನು ಗುಣಪಡಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಅದಕ್ಕೆ ಸೂಕ್ತವಾದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಏನೇ ಇರಲಿ ಆದರೆ ಮಣ್ಣಿನ ಪಾತ್ರೆಯಲ್ಲಿಆಹಾರ ತಯಾರಿಸುವಾಗ ಬರುವಂತಹ ಹಬೆಯನ್ನು ಕೂಡ ಮಣ್ಣಿನ ಪಾತ್ರೆಗಳು ಹೀರಿಕೊಳ್ಳುವುದು. ಈ ಕಾರಣದಿಂದಾಗಿ ಆಹಾರಕ್ಕೆ ಮತ್ತಷ್ಟು ಪೋಷಕಾಂಶಗಳು ಸಿಗುತ್ತದೆ. ಇತರ ಪಾತ್ರೆಗಳಿಗಿಂತ ಇದು ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ.
ಆಹಾರದ ಪೌಷ್ಠಿಕಾಂಶದ ಮೌಲ್ಯವು 100%ನಷ್ಟು ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸ್ಟೀಲ್, ಅಲ್ಯುಮೀನಿಯಂ ಇತರ ಪಾತ್ರೆಗಳಲ್ಲಿ, ಪೌಷ್ಠಿಕಾಂಶದ ಮೌಲ್ಯವು 7-13% ರಷ್ಟು ಮಾತ್ರ ಉಳಿದಿರುತ್ತದೆ ಎನ್ನಲಾಗುತ್ತದೆ.
ಖನಿಜಾಂಶ ಹೆಚ್ಚಿಸುತ್ತದೆ:
ಮಣ್ಣಿನ ಪಾತ್ರೆಗಳು 16 ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು, ಅದು ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರಸ್ತುತ ಜನರ ಆರೋಗ್ಯ ಸಮಸ್ಯೆಯ ಕಾರಣಗಳಲ್ಲಿ ಖನಿಜ ಅಂಶದ ಕೊರತೆ ಕೂಡ ಒಂದು ಕಾರಣ.
ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ಪೋಷಕಾಂಶಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸೇರಲು ಸಹಾಯ ಮಾಡುತ್ತದೆ. ಆದ್ದರಿಂದ ಮಣ್ಣಿನ ಮಡಕೆಗಳಲ್ಲಿ ಆಹಾರವನ್ನು ತಯಾರಿಸುವುದು ಅದರ ಖನಿಜಾಂಶದಿಂದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಇದು ಬ್ರಾಂಕೈಟಿಸ್, ಆಸ್ತಮಾ ಮತ್ತು ಕ್ಯಾನ್ಸರ್ ನಂತಹ ವಿವಿಧ ರೋಗಗಳ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ಬ್ಯಾಕ್ಟೀರಿಯಾ ನಾಶ:
ಕೆಲವು ವಿಧದ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಜೇಡಿಮಣ್ಣು ಅಡ್ಡವಾಗುತ್ತದೆ. ಅದರ ಪಾತ್ರೆಗಳು ಬ್ಯಾಕ್ಟೀರಿಯಾಗಳಿಗೆ ತಡೆಗೋಡೆಯಾಗಿ ಆಹಾರ ಹಾಳು ಮಾಡುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಸೇರದಂತೆ ತಡೆದು, ಆರೋಗ್ಯ ಕಾಪಾಡುತ್ತದೆ.
ಆಹಾರ ಹೆಚ್ಚು ರುಚಿಕರ:
ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುವುದರಿಂದ ಆಹಾರ ಹೆಚ್ಚು ರುಚಿಕರವಾಗಿರುತ್ತದೆ. ಮಣ್ಣಿನ ನೈಸರ್ಗಿಕ ಸುವಾಸನೆ ಮತ್ತು ನಿಧಾನ ಅಡುಗೆ ಪ್ರಕ್ರಿಯೆಯು ಇತರ ಅಡುಗೆ ತಯಾರಿಸುವ ಪಾತ್ರೆಗಳಿಗೆ ಹೋಲಿಸಿದರೆ ಆಹಾರದಲ್ಲಿ 10 ಪಟ್ಟು ಉತ್ತಮ ರುಚಿ ನೀಡುತ್ತದೆ ಎಂಬುದು ಹಿರಿಯರ ಅಭಿಪ್ರಾಯ.ಮಾರುಕಟ್ಟೆಯಲ್ಲಿ ಮಣ್ಣಿ ಪಾತ್ರೆ ಖರೀದಿಸುವಾಗ ಪರೀಕ್ಷಿಸಿ ಪಡೆದುಕೊಳ್ಳಿ. ಸೆರಾಮಿಕ್ ಕೋಟಿಂಗ್ ಮಾಡಿರುವ ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸಬಾರದು.
*ಕಾವ್ಯ