Advertisement
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಬ್ಬೂರಿನ ಅಶೋಕ- ಸವಿತ ದಂಪತಿಯ ಮೊದಲ ಪುತ್ರ ಪ್ರದೀಪ್‌ಕುಮಾರ್(12) ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಈತನ ಸಹೋದರ ರಜತ್‌ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ.
ಹಬ್ಬದಂದು ಮಾಂಸದ ಅಡುಗೆ ಮಾಡಿದ್ದರು. ಮನೆಯವರೊಂದಿಗೆ ಸಹೋದದರು ಸಹ ಮಾಂಸದೂಟ ಸೇವಿಸಿದ್ದ ಪ್ರದೀಪ್‌ಕುಮಾರ್ ಮತ್ತು ರಜತ್‌ಕುಮಾರ್ ಸಹೋದರರಿಬ್ಬರಿಗೂ ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ನಡುವೆ ಮನೆಯಲ್ಲಿ ಮಾಡಿದ್ದ ಮಾಂಸದ(ಲಾಕಿ) ಅಡುಗೆ ತಿಂದಿದ್ದರಿಂದಾಗಿ ವಾಂತಿ-ಬೇಧಿ ಹೆಚ್ಚಾಗಿ ಜ್ವರ ಕಾಣಿಸಿಕೊಂಡು ನಿತ್ರಾಣಗೊಂಡು ಶನಿವಾರದಂದು ಹನಗೋಡು ಆಸ್ಪತ್ರೆಯ ವೈದ್ಯ ಡಾ. ಜೋಗೇಂದ್ರನಾಥ್ ಚಿಕಿತ್ಸೆ ನೀಡುತ್ತಿದ್ದ ವೇಳೆ ಪಿಟ್ಸ್ ಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ್ ಕುಮಾರ್ ಸಾವನ್ನಪ್ಪಿದ್ದು, ಈತನ ಸಹೋದರ ರಜತ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ. ಫುಡ್ ಪಾಯಿಸನ್ ಕಾರಣ ಟಿ.ಎಚ್.ಓ ಸ್ಪಷ್ಟನೆ:
ಮಾಂಸ ಆಹಾರ ಸೇವಿಸಿದ ನಂತರ ಫುಡ್ ಫಾಯಿಸನ್ ಆಗಿ ಪರಿವರ್ತನೆಯಾಗಿದ್ದು, ವಾಂತಿ- ಭೇದಿ ಜೊತೆಗೆ ನಿತ್ರಾಣಗೊಂಡು ತೀವ್ರಜ್ವರ ಕಾಣಿಸಿಕೊಂಡಿದೆ. ಅಕ್ವಿಟ್ ವೈರಲ್ ಎನ್ಫಲಾಟೀಸ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆಂದು ಟಿಎಚ್.ಓ.ಡಾ.ಕೀರ್ತಿಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
Related Articles
Advertisement