ದೇವನಹಳ್ಳಿ: ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿರುವ ತಾಲೂಕಿನ 143 ಆಶಾ ಕಾರ್ಯಕರ್ತೆಯರಸೇವೆ ಶ್ಲಾಘನೀಯ ಎಂದು ಶಾಸಕ ಎಲ್. ಎನ್.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಶಾಸಕರು ವೈಯಕ್ತಿಕವಾಗಿಸುಮಾರು143 ಆಶಾಕಾರ್ಯಕರ್ತೆಯರಿಗೆ ಉಚಿತ ದಿನಸಿ ಕಿಟ್ ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದರು. ಸೇವೆ ಗಮನಿಸಿದ್ದೇನೆ: ಆಶಾ ಕಾರ್ಯಕರ್ತೆಯರನ್ನು ಈ ಮೊದಲೇ ಅಭಿನಂದಿಸುವ ಕಾರ್ಯಕ್ರಮ ಮಾಡಿಕೊಳ್ಳಬೇಕಿತ್ತು. ಹಗಲು ರಾತ್ರಿ ಎನ್ನದೆ ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಈ ಕುರಿತು ತಾನೂ ಖುದ್ದು ಗಮನಿಸಿದ್ದೇನೆಂದು ತಿಳಿಸಿದರು.
ದೂರುಗಳು ಕೇಳಿ ಬಂದಿವೆ: ಆರೋಗ್ಯದಲ್ಲಿ ಎಂಎಲ್‌ಎ, ಎಪಿ, ಮಾಜಿ ಮಂತ್ರಿಗಳಿಗೆ, ಐಎ ಎಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು ಬಂದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾರೆ.ಆದರೆ,ಆಶಾಕಾರ್ಯಕರ್ತೆಯರಿಗೆ ಸರಿಯಾದ ರೀತಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ. ಹೀಗಾಗಿ ತನ್ನ ಕೈಲಾದ ಸಹಾಯ ವನ್ನು ಮಾಡುತ್ತಿದ್ದೇನೆಂದು ತಿಳಿಸಿದರು.
ಬೇಡಿಕೆ ಈಡೇರಿಕೆಗೆ ಸರ್ಕಾರ ವಿಫಲ: ಸರ್ಕಾರ ಆಶಾಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲರ ಮಧ್ಯೆ ಅವರ ಕಷ್ಟಗಳನ್ನು ಕೇಳುತ್ತಿಲ್ಲವೆಂಬ ನೋವು ತನಗಿದೆ. ಹಲವು ಹೋರಾಟ ಮಾಡಿದರೂ ಸರ್ಕಾರ ಗಮನ ಹರಿಸದಿರುವುದು ವಿಪರ್ಯಾಸವೆಂದರು.
ಕುಮಾರಸ್ವಾಮಿ ಅವರ ಸರ್ಕಾರ ಇದ್ದಿದ್ದರೆ ಆಶಾ ಕಾರ್ಯಕರ್ತೆಯರಿಗೆ ಸಮಸ್ಯೆ ಆಗುತ್ತಿರಲಿಲ್ಲ. ಅವರಿಗೆ ಹೆಣ್ಣು ಮಕ್ಕಳ ಮೇಲೆ ಗೌರವ, ಕಾಳಜಿಯಿದೆ. ಇಲ್ಲಿಯ ತನಕ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರೆ ಯಾರಿಗೂ ಕಷ್ಟಗಳು ಬಾರದಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಹಾಗೆಯೇ ಕೊರೊನಾ ಸೋಂಕಿನಿಂದ ಪಾರಾದ ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಅನಿತಾ, ಸ್ವಪ್ನಾ ಅವರಿಗೆ ತಲಾ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಕೋವಿಡ್ ವಾರಿಯರ್ಸ್ ಗಳನ್ನು ಗುರ್ತಿಸಲು ವೇದಿಕೆ ಕಲ್ಪಿಸಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಇದ್ದಿದ್ದರೇ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಿದ್ದರು ಎಂದು ಹೇಳಿದರು. ಪಿಕಾರ್ಡ್‌ಬ್ಯಾಂಕ್‌ಅಧ್ಯಕ್ಷ ಮುನಿರಾಜು,ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ,ಟಿಎಪಿಸಿಎಂಎಸ್ ಅಧ್ಯಕ್ಷ ಮಂಡಿಬೆಲೆರಾಜಣ್ಣ, ಆರೋಗ್ಯಾಧಿಕಾರಿ ಸಂಜಯ್, ಟೌನ್ ಅಧ್ಯಕ್ಷ ಮುನಿನಂಜಪ್ಪ, ಮುಖಂಡಎ.ಸಿ.ನಾಗರಾಜು, ಆಶಾಕಾರ್ಯ ಕರ್ತೆಯರು, ಮುಖಂಡರು ಉಪಸ್ಥಿತರಿದ್ದರು.