Advertisement

ಬೀದಿ ವ್ಯಾಪಾರಿಗಳಿಗೆ ಆಹಾರ ಕಿಟ್‌

04:28 PM May 31, 2021 | Team Udayavani |

ಚಂದಾಪುರ: ಕೊರೊನಾ ಸಂಕಷ್ಟದಸಮಯದಲ್ಲಿ ಜನರನ್ನು ರಕ್ಷಿಸುವಲ್ಲಿ ಬಿಜೆಪಿಆಡಳಿತ ವಿಫಲಗೊಂಡಿದೆ ಎಂದು ರಾಜ್ಯ ಕೆಪಿಸಿಸಿಕಾರ್ಯಾಧ್ಯಕ್ಷ ಸಲೀಂ ಅಹಮದ್‌ಆರೋಪಿಸಿದರು.

Advertisement

ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಎಚ್‌.ಎಸ್‌.ಆರ್‌ ಬಡಾವಣೆಯಲ್ಲಿ ಕೂಲಿ ಕಾರ್ಮಿಕರಿಗೆ, ಬೀದಿ ವ್ಯಾಪಾರಿಗಳಿಗೆ ಹಾಗೂಕಟ್ಟಡ ಕಾರ್ಮಿಕರಿಗೆ ಯುವ ಕಾಂಗ್ರೆಸ್‌ವತಿಯಿಂದ ನಡೆಯುತ್ತಿರುವ 30ನೇ ದಿನದಅನ್ನದಾಸೋಹ ಅಂಗವಾಗಿ 2 ಸಾವಿರಬಿರಿಯಾನಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಇಂಥ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಬಿಜೆಪಿಸರ್ಕಾರವು ಕೂಲಿ ಕಾರ್ಮಿಕರ, ಬೀದಿವ್ಯಾಪಾರಿಗಳು,ವಲಸೆ ಕಾರ್ಮಿಕರ ಹಾಗೂಬಡವರಿಗೆ ಊಟವನ್ನು ಕಲ್ಪಿಸಿಕೊಡಬೇಕಾಗಿತ್ತುಆದರೆ ಇದುವರೆಗೂ ಒಂದು ಹಿಡಿ ಅನ್ನವನ್ನುಯಾವ ಕಾರ್ಮಿಕರಿಗೂ ಕೊಟ್ಟಿಲ್ಲ. ಇದರ ಬಗ್ಗೆಸರ್ಕಾರಕ್ಕೆ ಇದರ ಪರಿವೇ ಇಲ್ಲ, ಕಿಂಚಿತ್ತುಬಡವರ ಬಗ್ಗೆ ಕಾಳಜಿ ಕಳಕಳಿಯೇ ಇಲ್ಲ. ಆದರೆಇಂತಹ ಸಂದರ್ಭಗಳಲ್ಲಿ ನಮ್ಮ ಕಾಂಗ್ರೆಸ್‌ ಮತ್ತುಯುವ ಕಾಂಗ್ರೆಸ್‌ ಸಮಿತಿಯು ಪ್ರತಿಯೊಂದು ಜಿಲ್ಲೆ, ತಾಲೂಕು ಹೋಬಳಿ ಹಾಗೂ ಹಳ್ಳಿಯಲ್ಲಿಯೂ ಕೂಡ ಅನ್ನದಾನ ಹಾಗೂ ಆಹಾರ ಕಿಟ್‌ವಿತರಣೆ ಮಾಡುತ್ತಿದ್ದಾರೆ ಇದನ್ನು ನೋಡಿ ಬಿಜೆಪಿಕಲಿಯಲಿ ಎಂದು ಕುಟುಕಿದರು.

ಬೊಮ್ಮನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ವಾಸುದೇವ ರೆಡ್ಡಿ, ಬೊಮ್ಮನಹಳ್ಳಿ ಯುವಕಾಂಗ್ರೆಸ್‌ ಅಧ್ಯಕ್ಷ ಅನಿಲ್‌ ರೆಡ್ಡಿ, ಕಾಂಗ್ರೆಸ್‌ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್‌ಸದಸ್ಯ ಬಿ.ಕೆ.ಹರಿಪ್ರಸಾದ್‌, ಕಾಂಗ್ರೆಸ್‌ ಜಿಲ್ಲಾಅಧ್ಯಕ್ಷ ಕೃಷ್ಣಪ್ಪ, ಕೆಪಿಸಿಸಿ ಮಾಜಿ ಪ್ರಧಾನಕಾರ್ಯದರ್ಶಿ ಆರಾಧ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next