Advertisement

ನಿರಾಶ್ರಿತರು, ಪ್ರಾಣಿ-ಪಕ್ಷಿಗಳಿಗೆ ಆಹಾರ

07:44 PM Mar 29, 2020 | Sriram |

ಉಡುಪಿ: ಕೋವಿಡ್-19ದಿಂದಾಗಿ ಎಲ್ಲೆಡೆ ಲಾಕ್‌ಡೌನ್‌ ಆಗಿದ್ದರಿಂದ ನಗರದಲ್ಲಿರುವ ವಿವಿಧ ಜಿಲ್ಲೆಯ ಕಾರ್ಮಿಕರಿಗೆ ಊಟದ ವ್ಯವಸ್ಥೆ ನೀಡುವ ಕೆಲಸವನ್ನು ಹಲವು ಸಂಘ-ಸಂಸ್ಥೆಗಳು ಮಾಡುತ್ತಿವೆ. ಬೀಡಿನಗುಡ್ಡೆಯಲ್ಲಿರುವ ಸುಮಾರು 700 ಮಂದಿ ಕಾರ್ಮಿಕರಿಗೆ, ಬೋರ್ಡ್‌ ಹೈಸ್ಕೂಲಿನಲ್ಲಿರುವ ಸುಮಾರು 35 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

Advertisement

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ, ಆಸರೆ ಸೇವಾ ಬಳಗ, ಅನ್ಸಾರ್‌ ಅಹಮ್ಮದ್‌ ಹಾಗೂ ಇತರ ಸೇವಾಕಾರ್ಯಕರ್ತರು ಊಟವನ್ನು ವಿತರಿಸುತ್ತಿದ್ದಾರೆ. ಇನ್ನು ರಸ್ತೆ ಬದಿ, ಬಸ್ಸು ತಂಗುದಾಣ ಸಹಿತ ಇತರ ಸ್ಥಳಗಳಲ್ಲಿ ಉಳಿದುಕೊಂಡಿ ರುವವರಿಗೂ ಹಲವಾರು ಮಂದಿ ಸಾಮಾಜಿಕ ಕಾರ್ಯಕರ್ತರು ಊಟ ನೀಡಿ ಸಹಕರಿಸುತ್ತಿದ್ದಾರೆ.

ಪ್ರಾಣಿ ಪಕ್ಕಿಗಳಿಗೂ ಆಹಾರ
ಹೊಟೇಲು, ಮೀನು, ತರಕಾರಿ ಮಾರುಕಟ್ಟೆ ಸಹಿತ ಎಲ್ಲವೂ ಬಂದ್‌ ಆದ ಕಾರಣ ಬೀದಿಬದಿಯ ಮೂಕ ಪ್ರಾಣಿಗಳಿಗೂ ಆಹಾರವಿಲ್ಲದಂತಾಗಿದೆ. ಇವುಗಳಿಗೆ ಆಹಾರ ಕಲ್ಪಿಸುವ ಸಲುವಾಗಿ ಮಧ್ವರಾಜ್‌ ಎನಿಮಲ್‌ ಕೇರ್‌ ಟ್ರಸ್ಟ್‌ ವತಿಯಿಂದ ಆಹಾರ ನೀಡಲಾಗುತ್ತಿದೆ. ಸುಮಾರು 20ರಿಂದ25 ಮಂದಿಯ ಕಾರ್ಯಕರ್ತರ ತಂಡವು ಮಣಿಪಾಲ, ಈಶ್ವರನಗರ, ಜಿಲ್ಲಾಧಿಕಾರಿ ಕಚೇರಿ ಬಳಿ, ಸಂತೆಕಟ್ಟೆ, ಮಲ್ಪೆ ಸಹಿತ ಹಲವಾರು ಭಾಗಗಳಲ್ಲಿ ಆಹಾರ ವಿತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next