ಕಲಬುರಗಿ: ಶರಣಬಸವೇಶ್ವರ ಉದ್ಯಾನವನದಲ್ಲಿ ಪೋಷಣಾ ಅಭಿಯಾನ ಹಾಗೂ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗರ್ಭಿಣಿಯರಿಗಾಗಿ ಬುತ್ತಿ ಜಾತ್ರೆ ಕಾರ್ಯಕ್ರಮವನ್ನು ಮೇಯರ್ ಮಲ್ಲಮ್ಮ ವಳಕೇರಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಶರಣಬಸವೇಶ್ವರ ಸಂಸ್ಥಾನದ ದ್ರಾಕ್ಷಾಯಣಿ ಎಸ್. ಅಪ್ಪ ಮಾತನಾಡಿ, ವನಭೋಜನದಂತಹ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯದು. ಗರ್ಭಿಣಿ ಆಗಿದ್ದಾಗ ಮಹಿಳೆಯರಿಗೆ ಅನೇಕ ರೀತಿಯ ಭಕ್ಷ್ಯಗಳನ್ನು ಸವಿಯಬೇಕು ಎನ್ನುವ ಆಸೆ ಇರುತ್ತದೆ. ಅದೇ ರೀತಿ ಸರ್ಕಾರ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕಿ ಅರುಣಾ ಸಿ. ಪಾಟೀಲ ಮಾತನಾಡಿ, ಗರ್ಭಿಣಿಯರು ಪೋಷಕಾಂಶಯುಕ್ತ ಆಹಾರ ತೆಗೆದುಕೊಳ್ಳುವ ಮೂಲಕ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮಾ ಕಲಬುರಗಿ, ರೇಣುಕಾ ಕಟ್ಟಿ, ಶೋಭಾ ಜೋಶಿ, ಶಿವಲೀಲಾ ಡೆಂಗಿ, ಅಶ್ವಿನಿ ಭದ್ರಶೆಟ್ಟಿ,
ಶೋಭಾ, ಗೀತಾ, ಶಿಲ್ಪಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.