ಚನ್ನಪಟ್ಟಣ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಎದುರಿಸುತ್ತಿರುವ ಕೂಲಿಕಾರ್ಮಿಕರು, ನಿರ್ಗತಿ ಕರಿಗೆ ಬಿಜೆಪಿ ಕಾರ್ಯಕರ್ತರು ಪ್ರತಿದಿನಆಹಾರ ವಿತರಣೆ ಮಾಡುವ ಕಾರ್ಯಮಾಡಲಿದ್ದಾರೆ ಎಂದು ಪ್ರವಾಸೋದ್ಯಮಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಪಟ್ಟಣದ ಸಾತನೂರು ರಸ್ತೆಯಲ್ಲಿರುವ ಎಲ್.ಎನ್.ಕಲ್ಯಾಣ ಮಂಟಪದ ಸಮೀಪ ಬಿಜೆಪಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆಹಾರವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು.ಸಾರ್ವಜನಿಕರಿಗೆ ಯಾವುದೇಸಮಸ್ಯೆಯಾಗ ದಂತೆ ಸರ್ಕಾರದ ಜನತೆ ನಮ್ಮಪಕ್ಷ ಸಹ ಕೈಜೋಡಿಸುವಂತೆ ವರಿಷ್ಠರುನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮೊದಲಹಂತವಾಗಿ ಆಹಾರ ವಿತರಣೆಗೆ ಚಾಲನೆನೀಡಲಾಗುತ್ತಿದೆ ಎಂದರು.
ಉತ್ತರ ಕರ್ನಾಟಕ ಹಾಗೂ ವಿವಿಧಕಡೆಯಿಂದ ಕೂಲಿ ಕೆಲಸಕ್ಕಾಗಿ ಸಾವಿರಾರುಕಾರ್ಮಿಕರು ನಮ್ಮ ತಾಲೂಕಿನಲ್ಲಿ ಬಂದುನೆಲೆಸಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚುಕಾರ್ಮಿಕರು ಇಲ್ಲಿ ನೆಲೆಸಿದ್ದು, ಇವರಿಗೆಲ್ಲಾನೆರವು ನೀಡಬೇಕಿದೆ. ಇವರೊಂದಿಗೆನಿರ್ಗತಿಕರು ಹಾಗೂ ಐಸೋಲೇಷನ್‌ನಲ್ಲಿರುವ ಕೊರೊನಾ ರೋಗಿಗಳು ಆಹಾರವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದುಎಂದು ತಿಳಿಸಿದರು.
ಕೋವಿಡ್ ಕರಿನೆರಳು ಜನಜೀವನದಮೇಲೆ ಕರಿನೆರಳು ಚಾಚಿದೆ. ಆದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂಜುವುದುಬೇಕಿಲ್ಲ. ತಾಲೂಕಿನ ಜನತೆಗೆ ನಮ್ಮ ಪಕ್ಷದವತಿಯಿಂದ ಎಲ್ಲಾ ರೀತಿಯ ಸಹಕಾರನೀಡಲಾಗುವುದು. ತಾಲೂಕಿನ ಪ್ರತಿಮನೆಗೆಕೊರೊನಾದಿಂದ ತಮ್ಮ ಆರೋಗ್ಯಕಾಪಾಡಿಕೊಳ್ಳಲು ಸಹಕಾರಿಯಾಗುವಂತೆಹೆಲ್ತ್‌ಕಿಟ್ ನೀಡಲಾಗುವುದು. ಇದರೊಂದಿಗೆತಾಲೂಕಿನ ಪ್ರತಿಮನೆಗೂ ಒಂದು ಲಕ್ಷಕ್ಕೂಹೆಚ್ಚು ಮಾಸ್ಕ್ ವಿತರಿಸಲಾಗುವುದು ಎಂದುತಮ್ಮ ಪಕ್ಷದ ಯೋಜನೆಯನ್ನು ವಿವರಿಸಿದರು.
ಪ್ರತಿ ಮನೆಗೆ ಆಹಾರ ಕಿಟ್: ಲಾಕ್‌ಡೌನ್‌ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇಆದಲ್ಲಿ ಜನ ಜೀವನದ ಮೇಲೆ ಯಾವುದೇಗಂಭೀರ ಪರಿಣಾಮ ಬೀರಬಾರದು ಎಂಬಉದೇಶ ª ದಿಂದ ಮುಂದಿನ ದಿನಗಳಲ್ಲಿ ಜನರಿಗೆಆಹಾರದ ಕಿಟ್ ವಿತರಣೆ ಮಾಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವುದು.ಮುಂದಿನ ಹಂತದಲ್ಲಿ ಎಲ್ಲಾ ರೀತಿಯ ನೆರವನ್ನುನೀಡುವುದಾಗಿ ತಿಳಿಸಿದರು.
ಉತ್ತಮ ಚಿಕಿತ್ಸೆ ಸಿಗುತ್ತಿದೆ: ಜಿಲ್ಲೆಯಲ್ಲಿಕೊರೊನಾ ಪರಿಸ್ಥಿತಿಯನ್ನು ನಿರ್ವಹಿಸಲುಎಲ್ಲಾ ರೀತಿಯ ಸಿದ್ಧತೆಯನ್ನು ನಮ್ಮ ಸರ್ಕಾರಮಾಡಿಕೊಂಡಿದೆ. ರೋಗಿಗಳು ಉತ್ತಮ ಚಿಕಿತ್ಸೆದೊರೆಯುತ್ತಿದೆ. ನಾನು ಸಹ ಸಾರ್ವಜನಿಕಆಸ್ಪತ್ರೆಗ ಭೇಟಿನೀಡಿ ವೈದ್ಯರು ಮತ್ತುಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಆಕ್ಸಿಜನ್‌ಕೊರತೆ ಇಲ್ಲ.
ಸದ್ಯದಲ್ಲೇ ಜಿಲ್ಲಾ ಉಸ್ತುವಾರಿಸಚಿವರ ಜತೆಗೂಡಿ ಜಿಲ್ಲೆಯ ಆರೋಗ್ಯಅಗತ್ಯತೆಗಳ ಬಗ್ಗೆ ಸಭೆ ನಡೆಸಲಾಗುವುದುಎಂದು ತಿಳಿಸಿದರು.ಚನ್ನಪಟ್ಟಣ ಯೋಜನಾ ಪ್ರಾಧಿಕಾರದಅಧ್ಯಕ್ಷ ಆರ್.ಎಂ.ಮಲವೇಗೌಡ, ಬಿಜೆಪಿಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು,ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು,ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ಬಿಜೆಪಿಜಿಲ್ಲಾ ಉಪಾಧ್ಯಕ್ಷರಾದ ಜೆ.ಬ್ಯಾಡರಹಳ್ಳಿರಾಮಚಂದ್ರು, ಎಲೇಕೇರಿ ರವೀಶ್, ಜಿಪಂಮಾಜಿ ಸದಸ್ಯ ಕೃಷ್ಣಪ್ಪ, ಮುಖಂಡರಾದಶಿವಲಿಂಗಯ್ಯ(ಕುಳ್ಳಪ್ಪ) ಇದ್ದರು.