Advertisement
ಕುಟುಂಬ ನಿರ್ವಹಣೆಗೆ ಸಂಕಷ್ಟ: ಹೌದು, ರಾಜ್ಯದ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಇರುವ ಆಹಾರ ಇಲಾಖೆಯ ಕಚೇರಿಯಲ್ಲಿ ಹೊಸ ಪಡಿತರ ಚೀಟಿವಿತರಣೆ, ತಿದ್ದುಪಡಿ ಮತ್ತು ಆಹಾರ ಇಲಾಖೆಯ ಅಧಿಕೃತ ತಂತ್ರಾಂಶದಲ್ಲಿ ಇಲಾಖಾ ಅಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ಕ್ರಮ ಬದ್ಧವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ ಒಂದೂವರೆ ವರ್ಷದಿಂದ ವೇತನವಿಲ್ಲದೇ ಕನಿಷ್ಠ ಸೇವಾ ಭದ್ರತೆಯೂ ಇಲ್ಲದೇ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುವಂತಾಗಿದೆ.
Related Articles
Advertisement
ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲ : ಕೋವಿಡ್19 ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿಷ್ಠೆ ಮೆರೆದಿರುವ ಡಾಟಾಎಂಟ್ರಿ ಆಪರೇಟರ್‌ಗಳು, ವೇತನ ಪಾವತಿಸಬೇಕೆಂದು ಇಲಾಖಾ ಸಚಿವರು ಅಧಿಕಾರಿಗಳಿಗೆ ಸುಮಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮೌಖೀಕ ಆದೇಶ ನಂಬಿ ಸೇವೆ ಸಲ್ಲಿಸಿರುವ ಡಾಟಾಎಂಟ್ರಿ ಆಪರೇಟರ್‌ಗಳು ವೇತನ ಮತ್ತು ಸೇವಾ ಭದ್ರತೆ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕಾಗಿದೆ.
ಕ್ಷಣ ಕ್ಷಣದ ಬೆಳವಣಿಗೆ ಅಪ್ಡೇಟ್ : ಹೊಸ ಪಡಿತರ ಚೀಟಿ ವಿತರಣೆ, ತಿದ್ದುಪಡಿ, ಸಕಾಲ ಅರ್ಜಿಗಳ ನಿರ್ವಹಣೆ ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡುವುದು, ಪಡಿತರ ಚೀಟಿಗಳಿಗೆ ಆಧಾರ್‌ಕಾರ್ಡ್ ಲಿಂಕ್ ಮಾಡುವುದು ಹಾಗೂ ಪಡಿತರ ಚೀಟಿಗಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಮತ್ತು ನ್ಯಾಯಬೆಲೆ ಅಂಗಡಿಗಳ ಆಹಾರ ಧಾನ್ಯ, ಅಂತಿಮ ಶುಲ್ಕ ನಿರ್ವಹಣೆ, ಐಎಮ್‌ಪಿಡಿಎಸ್ ಅನ್ನವಿತನ್ ಪೋರ್ಟಲ್‌ನಲ್ಲಿಕ್ಷಣ ಕ್ಷಣದ ಮಾಹಿತಿ ಮತ್ತು ಬೆಳವಣಿಗೆಗಳನ್ನು ಅಪ್‌ಡೇಟ್ ಮಾಡುವುದು.
ಅನುದಾನ ನಿಗದಿಗೆ ಕೋರಿಕೆ : ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆ ಗುರುತಿಸಿರುವ ಇಲಾಖೆಯ ಆಯುಕ್ತರು23/10/2019ರಂದು ಇಲಾಖೆಯ ಪ್ರದಾನ ಕಾರ್ಯದರ್ಶಿಗಳಿಗೆ ಪತ್ರಬರೆದು 2019-2020ನೇ ಆರ್ಥಿಕ ಸಾಲಿನ5ತಿಂಗಳಿಗೆ(ಮಾರ್ಚ್ 2020ವರೆಗೆ) ಅಂದಾಜು 2,64,19,060 ರೂ. ಅನುದಾನ ಅವಶ್ಯಕತೆಯಿದ್ದು, ಈ ಅನುದಾನವನ್ನು ಲೆಕ್ಕಶೀರ್ಷಿಕೆ2408-01-102-0-04-059 ರಡಿ ಮಂಜೂರು ಮಾಡುವಂತೆಕೋರಿದ್ದಾರೆ. ಅದೇ ರೀತಿ 2020-21 ನೇ ಸಾಲಿಗೆ ಸುಮಾರು6,34,05,744ರೂಗಳ ಅನುದಾನ ನಿಗದಿಗೊಳಿಸಬೇಕೆಂದು ಕೋರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಗಳ ಹಳೇ ಬಾಕಿ ವೇತನ (ಫೆಬ್ರವರಿಯಿಂದ ಅಕ್ಟೋಬರ್ ವರೆಗೆ) ಮಂಜೂರಾಗಿದೆ.ಹೊರಗುತ್ತಿಗೆ ಆಧಾರದ ಮೇರೆಗೆಕೆಲಸ ಮಾಡುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಯಾವುದೇ ರೀತಿಯ ಸೇವಾ ಭದ್ರತೆ ಇರುವುದಿಲ್ಲ.ಆಹಾರ ಇಲಾಖೆ ಆಯುಕ್ತರು ಮೌಖೀಕವಾಗಿ ನೀಡಿರುವ ಆದೇಶದ ಕುರಿತು ಯಾವುದೇ ಮಾಹಿತಿಇಲ್ಲ. -ಪಿ.ಸವಿತಾ, ಉಪನಿರ್ದೇಶಕಿ, ಆಹಾರ ಇಲಾಖೆ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ 239ಮಂದಿ ಡಾಟಾ ಎಂಟ್ರಿ ಆಪರೇಟರ್‌ಗಳುಕೆಲಸ ನಿರ್ವಹಿಸಿದ್ದಾರೆ. ಅವರಿಗೆ ವೇತನ ಮತ್ತು ಸೇವಾಭದ್ರತೆ ಇಲ್ಲ ದಂತಾಗಿದೆ.ಇದರಿಂದ ಕುಟುಂಬ ನಿರ್ವಹಣೆ ಮಾಡಲು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಆಪರೇಟರ್‌ಗಳು ಅನುಭವಿಸುತ್ತಿರುವ ಕಷ್ಟಗಳನ್ನು ಇಲಾಖೆಯ ಸಚಿವರು-ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. -ಹನುಮಂತ ಬೋವಿ, ರಾಜ್ಯಾಧ್ಯಕ್ಷ, ಡಾಟಾಎಂಟ್ರಿ ಆಪರೇಟರ್ಗಳ ಸಂಘ
– ಎಂ.ಎ.ತಮೀಮ್ಪಾಷ