Advertisement

ಮಕ್ಕಳ ಆರೋಗ್ಯಕ್ಕೆ ಇರಲಿ ಆಹಾರದ ಕಾಳಜಿ

12:39 AM Nov 05, 2019 | mahesh |

ಉತ್ತಮ ಆಹಾರ ಸೇವನೆಯಿಂದ ನಮ್ಮ ದೇಹ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಂಕ್‌ಫ‌ುಡ್‌ ಆಬಾಲ ವೃದ್ಧರವರೆಗೂ ನೆಚ್ಚಿನ ಆಹಾರವಾಗಿದೆ. ಇದರ ನಿರಂತರ ಸೇವನೆಯೂ ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತದೆ. ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸುವ ಬಹುತೇಕ ಹೆತ್ತವರಿಗೆ ಆಹಾರ ಕ್ರಮದ ಸೂಕ್ತ ಮಾಹಿತಿ ಅಗತ್ಯ ಎನಿಸುತ್ತದೆ.

Advertisement

ಮಕ್ಕಳಲ್ಲಿ ಜೀರ್ಣಪ್ರಕ್ರಿಯೇ ನಿಧಾನಗತಿಯಲ್ಲಿ ಇರುವುದರಿಂದ ಅತೀ ಬೇಗ ಜೀರ್ಣವಾಗುವ ಆಹಾರಗಳನ್ನು ಒದಗಿಸಲು ಹೆತ್ತವರು ಗಮನಹರಿಸಬೇಕು. ಹಾಗಾದರೆ ಯಾವ ಆಹಾರವನ್ನು ವಯಸ್ಸಿನ ಆಧಾರದಲ್ಲಿ ಸೇವಿಸಿದರೆ ಉತ್ತಮ ಎಂಬ ವಿಚಾರದ ಕುರಿತು ಇಲ್ಲಿ ತಿಳಿಸಲಾಗಿದೆ.

ಮಳೆಗಾಲದಲ್ಲಿ ತಂಪಿನ ಆಹಾರ ಬೇಡ
ಬೇಸಗೆ ಕಾಲಕ್ಕೆ ಹೋಲಿಸಿದರೆ ಮಳೆ ಮತ್ತು ಚಳಿಗಾಲದಲ್ಲಿ ಮಕ್ಕಳ ಬೆಳವಣಿಗೆ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಅತೀ ತಂಪಿನ ತಿನಿಸ್ಸನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ. ಅದರಂತೆ ಚಾಕೋಲೇಟ್‌ ಸೇವನೆ ಮಾಡುವ ಕೆಲವು ಮಕ್ಕಳು ರಾತ್ರಿ ಸಂದರ್ಭದಲ್ಲಿ ಕಫ‌ಕಟ್ಟುವ ಸಮಸ್ಯೆ ಇರುತ್ತದೆ. ಮೊಸರಿನ ಸೇವನೆಗಿಂತ ಮಜ್ಜಿಗೆ ಸೇವಿಸಿದರೆ ದೇಹದಲ್ಲಿ ಜೀರ್ಣಪ್ರಕ್ರೀಯೆಯ ದೃಷ್ಟಿಯಿಂದ ಉತ್ತಮವಾಗಿದೆ. ಮಳೆಗಾಲದಲ್ಲಿ ಸೊಪ್ಪಿನ ಆಹಾರ ಅಷ್ಟು ಕಡಿಮೆ ಮಾಡಿದರೆ ನೆಗಡಿ, ಕಫ‌ ಕಟ್ಟುವಿಕೆಯ ಸಮಸ್ಯೆಯಿಂದ ಪಾರಾಗಬಹುದು.

6ರಿಂದ 12ವರ್ಷರ ಮಕ್ಕಳಿಗೆ ಮೂಳೆಗಟ್ಟಿಯಾಗುವ ಹಂತ ಇದಾಗಿದ್ದು ಸಾಮಾನ್ಯವಾಗಿ ಒಣ ಹಣ್ಣುಗಳ ಸೇವಿಸಲು ನೀಡಬೇಕಾಗಿದೆ. ನೆಲಗಡಲೆಯೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆಗೆ ಉಪಯುಕ್ತವಾಗಿದ್ದು ವೈದ್ಯರೂ ಕೂಡ ಇದರ ಸೇವನೆ ಮಾಡಲು ತಿಳಿಸುತ್ತಾರೆ. ಬಾದಾಮಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ಮೆದುಳಿನ ವಿಕಾಸದೊಂದಿಗೆ ದೇಹದ ಬೆಳವಣಿಗೆಯೂ ಸಾಧ್ಯವಾಗುತ್ತದೆ. ತಂಪು ಪಾನೀಯವನ್ನು ಆದಷ್ಟು ಮನೆಯಲ್ಲಿಯೇ ತಯಾರಿಸಿ ಸೇವಿಸಿದರೆ ನ್ಯೂಟ್ರಿಷನ್‌ ದೊರೆಯುತ್ತದೆ. ಆಲಿವ್‌ ಎಣ್ಣೆಯಿಂದ ಅಡುಗೆ ಮಾಡಿದರೆ ಬಿಪಿ, ಅನೇಮಿಯಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಹಾಲಿನ ಜತೆಗೆ ಇರಲಿ ಪೌಷ್ಟಿಕ ಆಹಾರ ಮಕ್ಕಳಿಗೆ ಹಾಲಿನ ಜತೆಗೆ ಬೇರೆ ಆಹಾರವನ್ನು ನೀಡಬೇಕು. ಮಕ್ಕಳಿಗೆ ದಿನದ ಮೂರು ಅವಧಿಯಲ್ಲಿ ಹಾಲು ಮಾತ್ರ ನೀಡದೇ ಹಣ್ಣು- ಹಂಪಲ, ನವಧಾನ್ಯಗಳು ಮತ್ತು ಇತರ ಪೌಷ್ಟಿಕ ಆಹಾರ ನೀಡುವುದರ ಕಡೆಗೆ ಹೆತ್ತವರು ಗಮನಹರಿಸಬೇಕು. ಅಲ್ಲದೇ ಆಲೂಗಡ್ಡೆ, ಬೀಟ್ರೂಟ್‌, ಕ್ಯಾರೆಟ್‌ನಲ್ಲಿ ಕಾಬ್ರೋ ಹೈಡ್ರೇಡ್‌ ಅಧಿಕವಿದ್ದು ಮಕ್ಕಳು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಲು ಸಹಾಯಕವಾಗಿದೆ. ಕಡಲೆ ಕಾಳು, ಹೆಸರು ಕಾಳು, ಉದ್ದಿನ ಬೇಳೆ ಇವುಗಳನ್ನು ನೆನೆಸಿ ಅಥವಾ ನೆನೆಸಿಹಾಕಿದ್ದನ್ನು ಬೇಯಿಸಿ ತಿನ್ನುವುದರಿಂದ ದೇಹದಲ್ಲಿ ಪ್ರೊಟೀನ್‌ ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗಿದೆ.

- ರಾಧಿಕಾ, ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next