Advertisement

ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

06:51 PM May 11, 2019 | Sriram |

ಮುಂದುವರಿದುದು- ಹದಿಹರಯದವರು ಎದುರಿಸುವ ಆರೋಗ್ಯ ಸಮಸ್ಯೆಗಳೇನು?
ಬೊಜ್ಜು

Advertisement

ಅನಾರೋಗ್ಯಕರ ಆಹಾರ ಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಎರಡೂ ಜತೆಯಾದಾಗ ಹದಿಹರಯದವರಲ್ಲಿ ಅಧಿಕ ದೇಹತೂಕ ಮತ್ತು ಬೊಜ್ಜು ಉಂಟಾಗುತ್ತದೆ. ಹೆಚ್ಚು ಕ್ಯಾಲೊರಿ ಮತ್ತು ಹೆಚ್ಚು ಕೊಬ್ಬು ಹೊಂದಿರುವ ಹದಿಹರಯದವರು ಅಧಿಕ ದೇಹತೂಕ ಉಳ್ಳವರಾಗಿ ಬೊಜ್ಜು ಬೆಳೆಸಿಕೊಳ್ಳುತ್ತಾರೆ. ಮನೆಯಲ್ಲಿ ಊಟ ಉಪಾಹಾರಗಳನ್ನು ತಪ್ಪಿಸಿಕೊಳ್ಳುವುದು ಮತ್ತು ಹೆಚ್ಚು ಉಪ್ಪು, ಕೊಬ್ಬು, ಸಕ್ಕರೆ ಹೊಂದಿರುವ ಜಂಕ್‌ ಆಹಾರಗಳನ್ನು ಸೇವಿಸುವುದು ಕೂಡ ಬೊಜ್ಜು ಉಂಟಾಗುವುದಕ್ಕೆ ಕೊಡುಗೆ ನೀಡುತ್ತದೆ. ಹೆಚ್ಚು ಗ್ಲೆ„ಸೇಮಿಕ್‌ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಹಾರ್ಮೋನ್‌ ಮತ್ತು ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳು ಉಂಟಾಗಿ,ಮಿತಿಮೀರಿ ಆಹಾರ ಸೇವಿಸುವಂತೆ ಪ್ರಚೋದಿಸುತ್ತದೆ.

ಹದಿಹರಯದವರು ತೂಕ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುವ ನೃತ್ಯ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ಸುಕತೆ ತೋರಿಸದೆ ಇರಬಹುದು; ವ್ಯಾಯಾಮ ಮಾಡದೆ ಇರಬಹುದು, ಸುಮ್ಮನೆ ಕುಳಿತು ದೀರ್ಘ‌ ಕಾಲ ಟಿವಿ ನೋಡುತ್ತಿರಬಹುದು, ಶಾಲೆ ಅಥವಾ ಕಾಲೇಜಿಗೆ ವಾಹನದ ಮೂಲಕ ತೆರಳಬಹುದು. ಕೆಲವೊಮ್ಮೆ ದೀರ್ಘ‌ಕಾಲ ಅಭ್ಯಾಸದಲ್ಲಿ ತೊಡಗುವುದರಿಂದಲೂ ಜಡ ಜೀವನ ಶೈಲಿ ರೂಢಿಯಾಗುತ್ತದೆ. ದೈಹಿಕವಾಗಿ ಚಟುವಟಿಕೆಯಿಂದ ಇರುವಂತೆ ಮತ್ತು ಆರೋಗ್ಯಯುತ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವಂತೆ ಹೆತ್ತವರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು.

– ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next