Advertisement
ಮಾಂಸ, ಕೋಳಿಮಾಂಸ, ಮೊಟ್ಟೆ, ಮೀನು, ಬೀಜಗಳು ಮತ್ತು ದ್ವಿದಳ ಧಾನ್ಯಗಳು ಕಬ್ಬಿಣಾಂಶ ಮತ್ತು ಪ್ರೊಟೀನ್‌ನ ಉತ್ತಮ ಮೂಲಗಳು. ನಮ್ಮ ದೇಹದೊಳಗೆ ಆಮ್ಲಜನಕದ ಸರಬರಾಜು ನಡೆಸುವ ಕೆಂಪು ರಕ್ತಕಣಗಳು ಉತ್ಪಾದನೆಯಾಗಲು ಕಬ್ಬಿಣಾಂಶ ಅತ್ಯಂತ ಅಗತ್ಯ. ಬಾಲಕಿಯರು ಹದಿಹರಯದಲ್ಲಿ ಋತುಸ್ರಾವ ಆರಂಭವನ್ನು ಅನುಭವಿಸುತ್ತಾರೆ; ಆಗ ಕಬ್ಬಿಣಾಂಶ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತದೆ. ಆಗ ದೇಹಕ್ಕೆ ಕಬ್ಬಿಣಾಂಶವು ಸಾಕಷ್ಟು ಪೂರೈಕೆ ಆಗದಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದರಿಂದ ದಣಿವು, ತಲೆ ಸುತ್ತುವುದು, ಉಸಿರು ಹಿಡಿದುಕೊಳ್ಳುವುದು ಇತ್ಯಾದಿ ತೊಂದರೆಗಳು ಕಂಡುಬರುತ್ತವೆ. ನಮ್ಮ ದೇಹ ಬೆಳವಣಿಗೆ ಹೊಂದಲು ಮತ್ತು ಸ್ನಾಯುಗಳು ಆರೋಗ್ಯಪೂರ್ಣವಾಗಿರಲು ಪ್ರೊಟೀನ್ ಬೇಕೇಬೇಕು. ಬೆಳೆಯುತ್ತಿರುವ ಸಮಯದಲ್ಲಿ ಅಥವಾ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಹೊತ್ತಿನಲ್ಲಿ ದೇಹಕ್ಕೆ ಪ್ರೊಟೀನ್ ಸರಿಯಾದ ಪ್ರಮಾಣದಲ್ಲಿ ಪೂರೈಕೆ ಆಗದೆ ಇದ್ದಲ್ಲಿ ತೂಕ ಕಡಿಮೆಯಾಗುತ್ತದೆ, ಬೆಳವಣಿಗೆ ಕುಂಠಿತವಾಗುತ್ತದೆ. ಕಠಿಣ ಪಥ್ಯಾಹಾರದಲ್ಲಿ ತೊಡಗಿಕೊಂಡರೆ ಪ್ರೊಟೀನ್ ಪೂರೈಕೆ ಕಡಿಮೆಯಾಗುತ್ತದೆ. ಮಾಂಸ, ಕೋಳಿಮಾಂಸ, ಮೀನು ಅಥವಾ ಮೊಟ್ಟೆಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಮಿದುಳು, ಕಣ್ಣುಗಳು ಮತ್ತು ಚರ್ಮದ ಆರೋಗ್ಯಕ್ಕೆ ಮೀನು ಉತ್ತಮ. ವಾರಕ್ಕೆ ಎರಡು ಮೂರು ಬಾರಿಯಾದರೂ ಮೀನು ನಿಮ್ಮ ಆಹಾರವಾಗಿರಲಿ.
Related Articles
Advertisement
ನಮ್ಮ ದೈನಿಕ ಆಹಾರದ ಭಾಗವಾಗಿ ದ್ರವಾಹಾರಗಳೂ ಇರಬೇಕು. ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ದ್ರವಾಂಶವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ. ಇದರಿಂದ ಬಾಯಾರಿಕೆ, ದಣಿವು ಉಂಟಾಗದು. ಇದು ಮಲಬದ್ಧತೆಯನ್ನು ಕೂಡ ದೂರ ಇರಿಸುತ್ತದೆ.
ಹದಿಹರಯದವರು ಎದುರಿಸುವ ಪೌಷ್ಟಿಕಾಂಶ ಸಮಸ್ಯೆಗಳೇನು?ಬೊಜ್ಜು: ದೈಹಿಕ ಚಟುವಟಿಕೆ ಕಡಿಮೆ ಪ್ರಮಾಣದಲ್ಲಿರುವುದು ಮತ್ತು ಕಳಪೆ ಆಹಾರಾಭ್ಯಾಸ ಹೊಂದಿರುವುದರಿಂದ ಹದಿಹರಯದವರಲ್ಲಿ ದೇಹ ತೂಕ ಹೆಚ್ಚಳವಾಗಿ ಬೊಜ್ಜು ಬೆಳವಣಿಗೆಯಾಗುತ್ತದೆ. ಹೆಚ್ಚು ಕ್ಯಾಲೊರಿ ಮತ್ತು ಅಧಿಕ ಕಾಬೊìಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸುವ ಹದಿಹರಯದವರು ಅಧಿಕ ದೇಹತೂಕ ಅಥವಾ ಬೊಜ್ಜು ಬೆಳೆಸಿಕೊಳ್ಳುತ್ತಾರೆ. ಮನೆಯ ಊಟ ತಪ್ಪಿಸಿಕೊಳ್ಳುವುದು ಮತ್ತು ಜಂಕ್ ಹಾರವನ್ನು ಸೇವಿಸುವುದು ಕೂಡ ಅಧಿಕ ದೇಹ ತೂಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಹದಿಹರಯದವು ಊಟಗಳ ನಡುವೆ ಆಗಾಗ ತಿನಿಸುಗಳನ್ನು ಸೇವಿಸಬಹುದು. ಅತಿಯಾಗಿ ಸಿಹಿಕಾರಕಗಳನ್ನು ಬೆರೆಸಿದ ಪಾನೀಯಗಳನ್ನು ಕುಡಿಯಬಹುದು. ದೈನಿಕ ಆಹಾರದಲ್ಲಿ ಹಣ್ಣು – ತರಕಾರಿ ಇತ್ಯಾದಿಗಳನ್ನು ಸೇರಿಸಿಕೊಳ್ಳದಿರಬಹುದು. ಹೆಚ್ಚು ಗ್ಲೆ„ಸೇಮಿಕ್ ಸೂಚ್ಯಂಕ ಹೊಂದಿರುವ ಆಹಾರಗಳನ್ನು ಸೇವಿಸಿದರೆ ಅತಿ ಆಹಾರ ಸೇವನೆಗೆ ಕಾರಣವಾಗಬಲ್ಲ ಹಾರ್ಮೋನ್ ಮತ್ತು ಚಯಾಪಚಯ ಬದಲಾವಣೆಗಳು ಉಂಟಾಗಬಹುದು. -ಮುಂದುವರಿಯುವುದು