ಕೊಟ್ಟಿಗೆಹಾರ : ಜಾವಳಿಯ ಹೇಮಾವತಿ ನದಿಮೂಲದಲ್ಲಿ ನೂತನ ಗಣಪತಿ ದೇವಸ್ಥಾನದ ಗುದ್ದಲಿಪೂಜೆ ಸೋಮವಾರ ನೆರವೇರಿತು.
ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಭೀಮೇಶ್ವರ ಜೋಷಿಯವರು ಗುದ್ದಲಿಪೂಜೆ ನೆರವೇರಿಸಿದರು. ಹೇಮಾವತಿ ನದಿಮೂಲದ ನೂತನ ಗಣಪತಿ ದೇವಸ್ಥಾನದ ನಿರ್ಮಾಣದ ಅಂಗವಾಗಿ ಶನಿವಾರ ಸುದರ್ಶನ ಹೋಮ, ಭಾನುವಾರ ಭೂಮಿ ಪೂಜೆ ನಡೆದಿದ್ದು ಸೋಮವಾರ ಗುದ್ದಲಿ ಪೂಜೆ ನೆರವೇರಿತು.
ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಭೀಮೇಶ್ವರ ಜೋಷಿಯವರು, ಹೇಮಾವತಿ ನದಿ ಮೂಲಸ್ಥಾನದಲ್ಲಿ ನದಿಮೂಲವನ್ನು ಸಂರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಗುದ್ದಲಿಪೂಜೆ ನೆರವೇರಿದ್ದು ನಿರ್ಮಾಣ ಕಾರ್ಯ ಸುಲಲಿತವಾಗಿ ಸಾಗಲಿ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ನದಿಮೂಲ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರವೀಣ್ ಗುರ್ಜರ್, ಯಶವಂತ್ ಗುರ್ಜರ್, ಕಾರ್ಯದರ್ಶಿ ಎಂ.ವಿ.ಜಗದೀಶ್, ಸದಸ್ಯರಾದ ಶಶಿಧರ್, ಸುರೇಶ್‌ಗೌಡ, ಪ್ರದೀಪ್, ನಾರಾಯಣಗೌಡ, ಕೇಶವೇಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಪರೀಕ್ಷಿತ್ ಜಾವಳಿ, ಗುತ್ತಿಗೆದಾರರಾದ ರವಿ, ಶ್ರೀನಾಥ್ ವಾಟೆಖಾನ್, ದಾನಿಗಳಾದ ಬಲಿಗೆ ನಾರಾಯಣಗೌಡ, ಜಯಲಕ್ಷ್ಮಿ, ಸತೀಶ್ ಮಲೆಮನೆ, ಸಂಜೀವ್ ಕೋಟ್ಯಾನ್, ಉಮೇಶ್‌ಗೌಡ, ಶ್ರೀಕಂಠ,ಶಶಿಕುಮಾರ್, ಚಂದ್ರಶೇಖರ್, ಸುಮನ್, ಅಣ್ಣಾಪಾಚರ‍್ಮ ಯಮುನಮ್ಮ, ಅರ್ಚಕರಾದ ಅವಿನಾಶ್ ಇದ್ದರು.
ಇದನ್ನೂ ಓದಿ : ಸ್ಮಾರ್ಟ್ ಸಿಟಿಯ ಸ್ಮಾರ್ಟ್‌ನೆಸ್ ಹೆಚ್ಚಿಸಲು ಭೂಗತ ವಿದ್ಯುತ್ ಕೇಬಲ್