Advertisement
ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಸಂಚಾರ ಉತ್ತರ ವಿಭಾಗ ಹಾಗೂ ಸಂಚಾರ ಈಶಾನ್ಯ ಉಪವಿಭಾಗ ಹಾಗೂ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರ ಸಂಪರ್ಕ ದಿನದ ಅಂಗವಾಗಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಮನೆಯಿಂದ ಹೊರಗೆ ಹೋದವರು ತಮಗಾಗಿ ಕುಟುಂಬಸ್ಥರು ಕಾಯುತ್ತಾರೆ. ಜೀವ ತುಂಬಾ ಮುಖ್ಯ ಎಂದು ಅರಿತುಕೊಂಡು ಜಾಗ್ರತೆಯಿಂದ ಚಾಲನೆ ಮಾಡಬೇಕು. ವಾಹನ ಸವಾರರು ಸುರಕ್ಷಾ ನಿಯಮ ಅನುಸರಿಸಬೇಕು ಎಂದರು.
Related Articles
Advertisement
ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಣ್ ನಾಯಕ್ ಮಾತ ನಾಡಿ, ಕನ್ನಮಂಗಲ ಗೇಟ್‌ನಲ್ಲಿ ಹೆಚ್ಚು ಅಪಘಾತಗಳು ಆಗುತ್ತಿದ್ದವು. ಅಲ್ಲಿ ರಸ್ತೆ ಮುಚ್ಚಿದ ಮೇಲೆ ಅಪಘಾತ ಪ್ರಕರಣ ಕಡಿಮೆಯಾಗಿದೆ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಸುರಕ್ಷಿತ ಪ್ರಯಾಣ ಮಾಡುವಂತೆ ಆಗಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿ ವರ್ಗ ಹಾಗೂ ಜನಪ್ರತಿನಿಧಿಗಳು ಇದ್ದರು.
ಜನಸಂದಣಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಜನರ ಕುಂದುಕೊರತೆ ಆಲಿಸಲಾಗಿದೆ. ಮುಂದೆ ಇವುಗಳ ಸಮಸ್ಯೆಗೆ ಆದ್ಯತೆ ನೀಡಲಾಗುವುದು. ಎಲ್ಲಿ ಪರ್ಯಾಯ ಮಾರ್ಗಗಳನ್ನು ಸಂಚಾರಕ್ಕೆ ಹುಡುಕಬೇಕಾಗುತ್ತದೆ. ಪುರಸಭೆಗೆ ಪಾರ್ಕಿಂಗ್ ವ್ಯವಸ್ಥೆ ಸಂಬಂಧಪಟ್ಟಂತೆ ಇದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜನಸಂದಣಿ ಇರುವ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಚಾರ ಪೊಲೀಸ್ ಠಾಣೆಯ ಡಿಸಿಪಿ ಸವಿತಾ ಹೇಳಿದರು.
ರಸ್ತೆ ಗುಂಡಿ ಮುಚ್ಚಲು ಆಗ್ರಹ: ಪಟ್ಟಣದಲ್ಲಿ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಅವುಗಳನ್ನು ಮುಚ್ಚುವ ಕೆಲಸ ಆಗಬೇಕು. ಭಾರೀ ವಾಹನಗಳು ಪಟ್ಟಣದಲ್ಲಿ ಸಂಚಾರ ಮಾಡುತ್ತಿರುವುದರಿಂದ ಧೂಳು ಹೆಚ್ಚು ಬರುತ್ತಿರುವುದರಿಂದ ವಾಹನ ಸವಾರರು ಓಡಿಸಲು ಕಷ್ಟಪಡುತ್ತಿದ್ದಾರೆ ಎಂದು ಹಿರಿಯ ನಾಗರಿಕ ಡಾ. ಮೂರ್ತಿ ಹೇಳಿದರು.