Advertisement

ಪ್ರಾತಃಸ್ಮರಣೀಯರ ಬದುಕು ಅನುಸರಿಸಿ

12:38 PM Apr 09, 2018 | Team Udayavani |

ಮೈಸೂರು: ಪ್ರಸ್ತುತ ಕಾಲಘಟ್ಟದಲ್ಲಿ ಏನನ್ನು ತಮ್ಮದಾಗಿಸಿಕೊಳ್ಳುತ್ತಿ ದ್ದೀರಾ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಹಿಸ ಬೇಕಿದೆ ಎಂದು ನಟ ಸುಚೇಂದ್ರ ಪ್ರಸಾದ್‌ ಸಲಹೆ ನೀಡಿದರು.

Advertisement

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಪಠ್ಯೇತರ ಚಟು ವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ಜೀವನದಲ್ಲಿ ಅನು ಭವಿಸುವುದೆಲ್ಲವೂ ಪಠ್ಯವಾಗಿ ದ್ದರೂ, ತಮ್ಮ ಅನುಕೂಲಕ್ಕಾಗಿ ಪಠ್ಯೇತರ ಚಟುವಟಿಕೆ ಎಂದು ಹೆಸರಿಟ್ಟಿದ್ದೇವೆ.

ಇತಿಹಾಸ ಅರಿಯ ದವನು, ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ ಪಠ್ಯೇತರ ಚಟುವಟಿಕೆ ಎಂದು ಭಾವಿಸದೆ ಬದುಕಿನ ಭಾಗ ಎಂದು ಯೋಚಿಸ ಬೇಕಿದೆ. ಹೀಗಾಗಿ ಕೇಳುವುದು ಮುಖ್ಯವಲ್ಲದೆ, ಆಲಿಸುವಿಕೆ ಅಂತರ್ಗತವಾಗುವುದರಿಂದ ಆಲಿಸುವ ಪ್ರಕ್ರಿಯೆ ಬಹಳ ದೊಡ್ಡದಾಗಿದೆ ಎಂದು ಹೇಳಿದರು.

ಇಂದಿನ ಯುವಜನರಿಗೆ ತಮ್ಮ ತಲೆಮಾರಿನವರು ಸದೃಢ ಸಂಗತಿ ಕೊಟ್ಟಿದ್ದೇವೆಂದು ಅನಿಸುತ್ತಿಲ್ಲ, ತಮ್ಮ ತಲೆಮಾರಿನವರು ಬೇರು ಗಳನ್ನು ಹೆಚ್ಚು ಧೃಡ ಮಾಡಲಿಲ್ಲ, ಹೀಗಾಗಿ ನೀವು ಎಡವದೆ ತಮ್ಮ ಬೇರು ಗಟ್ಟಿ ಮಾಡಿಕೊಳ್ಳಿ. ನೀವು ಯಾವ ಕಾಲಘಟ್ಟದಲ್ಲಿದ್ದು, ಏನನ್ನು ತಮ್ಮದಾಗಿಸಿಕೊಳ್ಳುತ್ತಿದ್ದೀರಾ ಎಂಬುದರ ಬಗ್ಗೆ ಎಚ್ಚರವಹಿಸ ಬೇಕಿದೆ.

ಇದಕ್ಕೆ ಮಾತಿನ ನಡುವೆ ಮೌನದ ಕಲರವವನ್ನು ಆಲಿಸಿದರೆ, ಮನದ ಮಾತನ್ನು ಆಲಿಸಿ ಎಂದ ಅವರು, ಪ್ರಾತಃ ಸ್ಮರಣೀಯರು ಸಂಧ್ಯಾವಂದನೀಯರ ಬದುಕಿನ ಉಪಕ್ರಮಗಳನ್ನು ಅನುಸರಿಸಿ ಹಾಗೂ ಅನುಸರಿಸುವಿಕೆ ನಿರಂತರ ವಾಗಿರಲಿ ಎಂದರು.

Advertisement

ನಟಿ ಸೌಮ್ಯಲತಾ ಮಾತನಾಡಿ, ಬದುಕಿನಲ್ಲಿ ಆತ್ಮವಿಶ್ವಾಸ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಿದೆ. ಜತೆಗೆ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕಿದೆ. ಇದು ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.

ಪತ್ರಿಕೋದ್ಯಮ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಯೋಧ ಶಫೀಕ್‌ ಮಹಮ್ಮದ್‌ ಘೋರಿ ಹೆಸರಿನ ನಗದು ಬಹುಮಾನ ನೀಡಲಾಯಿತು. ಇದೇ ವೇಳೆ ಸೇವೆಯಿಂದ ನಿವೃತ್ತಿ ಹೊಂದಿರುವ ಮತ್ತು ಹೊಂದ ಲಿರುವ ಕಾಲೇಜಿನ ಪ್ರಾಧ್ಯಾಪಕ ರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಬಿ. ನಾಗರಾಜ ಮೂರ್ತಿ, ಆಡಳಿತಾಧಿ ಕಾರಿ ಡಾ.ಸಿ. ರಾಮಸ್ವಾಮಿ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕಿ ಡಾ. ಹಸೀನಾ ಬೇಗಂ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next