Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹೋಟೆಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್‌ಗಳು ಸೇರಿದಂತೆ ವಿವಿಧ ಮನರಂಜನೆ,ವಾಣಿಜ್ಯ ಸೇವೆಯ ಸಂಸ್ಥೆಗಳ ಮಾಲೀಕರ,ವ್ಯವಸ್ಥಾಪಕರೊಂದಿಗೆ ಜರುಗಿದ ಸಭೆಯಲ್ಲಿಮಾತನಾಡಿದ ಅವರು, ಈ ಮಾರ್ಗಸೂಚಿ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಜರುಗಿಸಿ ಪ್ರಕರಣ ದಾಖಲಿಸಲಾಗುವುದು. ಅವರ ಲೈಸನ್ಸ್ ತಕ್ಷಣ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
Related Articles
Advertisement
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾತನಾಡಿ, ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಸನದ್ದುದಾರರಿಗೆ ಹೊಸ ವರ್ಷಾಚರಣೆ ನೆಪದಲ್ಲಿ ನಿಯಮಗಳ ಉಲ್ಲಂಘನೆ ಆಗದಂತೆಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಡಿ.30ರಿಂದ ಜನವರಿ 2ರವರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಹಂತದ ಪೊಲೀಸ್ ಸಿಬ್ಬಂದಿ ಗ್ರಾಮೀಣ ಪ್ರದೇಶದ ನಗರ, ಪಟ್ಟಣ, ಹೆಚ್ಚು ಜನ ಸಂಖ್ಯೆ ಇರುವ ಗ್ರಾಮಗಳು ಸೇರಿದಂತೆ ಎಲ್ಲ ಕಡೆಗೆ ಸಂಚರಿಸಿ, ನಿಗಾವಹಿಸಲಿದ್ದಾರೆ. ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು, ಸನದ್ದುದಾರರು ಸರಕಾರದ ಮಾರ್ಗಸೂಚಿಗಳ ಪಾಲನೆಗೆ ಸಹಕರಿಸಬೇಕು ಎಂದರು.
ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಮರಾಜನ್.ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿದರು. ಎಸಿ ಡಾ| ಗೋಪಾಲಕೃಷ್ಣ.ಬಿ, ಮಹಾನಗರದ ಅಪರಾಧಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತ ಆರ್.ಬಿ.ಬಸರಗಿ, ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಯಶವಂತ ಮದೀನಕರ, ತಹಶೀಲ್ದಾರ್‌ರಾದ ಡಾ| ಸಂತೋಷ ಬಿರಾದಾರ, ಶಶಿಧರಮಾಡ್ಯಾಳ ಸೇರಿದಂತೆ ಅಗ್ನಿಶಾಮಕ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ, ಪಪಂ ಮುಖ್ಯಾಧಿಕಾರಿಗಳು, ಜಿಲ್ಲೆಯ ಹೋಟೆಲ್, ಬಾರ್,ರೆಸ್ಟೋರೆಂಟ್, ಕ್ಲಬ್, ಜಿಮಾಖಾನಾ ಸೇರಿದಂತೆ ವಿವಿಧ ಸನದ್ದುಗಳ ಮಾಲೀಕರು ಇದ್ದರು.
ಪ್ರತಿಸಲದಂತೆ ಹೊಸ ವರ್ಷಾಚರಣೆಗೆ ಯಾವುದೇ ಹೋಟೆಲ್, ಕ್ಲಬ್, ಬಾರ್, ಪಬ್ ರೆಸ್ಟೋರೆಂಟ್‌ಗಳು ರಿಯಾಯಿತಿಯಲ್ಲಿ ಊಟ, ಮದ್ಯ ಸರಬರಾಜುಗಳಿಗೆ ವಿಶೇಷ ಪ್ಯಾಕೇಜ್ ನೀಡುವುದು, ಫ್ಯಾಮಿಲಿ ಪ್ಯಾಕೆಜ್, ಸಂಗೀತ ಕಾರ್ಯಕ್ರಮ, ಡಿಜೆ ನೃತ್ಯ, ಆಯೋಜನೆ ಮುಂತಾದವುಗಳನ್ನುಸಂಪೂರ್ಣ ನಿಷೇಧಿಸಲಾಗಿದೆ. ಆದರೆ ಅಬಕಾರಿ, ಪೊಲೀಸ್, ಮಹಾನಗರಪಾಲಿಕೆಯಿಂದ ಲೈಸೆನ್ಸ್ ಪಡೆದಿರುವವರು ಅದರಲ್ಲಿ ಸೂಚಿಸಿರುವ ನಿಯಮಗಳಂತೆ ಮತ್ತು ಪ್ರತಿ ನಿತ್ಯದಂತೆ ತಮ್ಮ ವ್ಯವಹಾರ ನಿರ್ವಹಿಸಬಹುದು. – ನಿತೇಶ ಪಾಟೀಲ, ಡಿಸಿ, ಧಾರವಾಡ
ಹುಬ್ಬಳ್ಳಿ ಹಾಗೂ ಧಾರವಾಡ ನಗರ ಮತ್ತು ಹೊರ ವಲಯದ ಕೆಲವುರೆಸ್ಟೋರೆಂಟ್, ಬಾರ್, ಕ್ಲಬ್‌ಗಳು ಹೊಸವರ್ಷಾಚರಣೆ ಅಂಗವಾಗಿ ವಿಶೇಷಪ್ಯಾಕೇಜ್, ಕಾರ್ಯಕ್ರಮ ಆಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಗ್ರಾಹಕರಿಗೆ, ಸಾರ್ವಜನಿಕರಿಗೆ ಆಹ್ವಾನನೀಡುತ್ತಿರುವ ಮಾಹಿತಿ ಬಂದಿದೆ.ದಯವಿಟ್ಟು ಅಂತ ಯೋಜನೆ, ಯೋಚನೆ,ಕಾರ್ಯಕ್ರಮಗಳ ತಯ್ನಾರಿ ಇದ್ದರೆಈಗಲೇ ಕೈಬಿಡಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಲಾಭೂರಾಮ, ಹು-ಧಾ ಪೊಲೀಸ್ ಆಯುಕ್ತ