Advertisement

ಕಾಶ್ಮೀರದಲ್ಲಿ ಅಟಲ್‌ ಮಾದರಿ ಅನುಸರಿಸಿ

03:45 AM Apr 25, 2017 | Team Udayavani |

ನವದೆಹಲಿ: ಕಣಿವೆ ರಾಜ್ಯದಲ್ಲಿ ದಿನಕಳೆದಂತೆ ಪರಿಸ್ಥಿತಿ ಕೈಮೀರುತ್ತಿದ್ದು, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

Advertisement

“ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾದರಿಯನ್ನು ಅನುಸರಿಸಿ’ ಎನ್ನುವ ಮೂಲಕ ಮೆಹಬೂಬಾ ಅವರು, ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆಗೆ ವೇದಿಕೆ ಸಿದ್ಧಧಿಪಡಿಸಿದ್ದಾರೆ. 

ಅಟಲ್‌ಜೀ ಪ್ರಧಾನಿಯಾಗಿ, ಆಡ್ವಾಣಿ ಅವರು ಉಪಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕವಾದಿ ಹುರಿಯತ್‌ ಕಾನ್ಫರೆನ್ಸ್‌ ನಾಯಕರೊಂದಿಗೆ ಮಾತುಕತೆ ನಡೆದಿದ್ದನ್ನು ಸ್ಮರಿಸಿದ ಅವರು, “ಕಲ್ಲುತೂರಾಟ ಮತ್ತು ಗುಂಡು ಹಾರಾಟಗಳ ನಡುವೆ ಮಾತುಕತೆ ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸೂಕ್ತ ವಾತಾವರಣ ಸೃಷ್ಟಿಯಾಗಬೇಕು. ಎಷ್ಟು ದಿನಗಳವರೆಗೆ ಈ ರೀತಿಯ ಮುಖಾಮುಖೀ ನಡೆಸುವುದು? ಎಲ್ಲದಕ್ಕೂ ಮಾತುಕತೆಯೇ ಪರಿಹಾರ,’ ಎಂದು ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. 20 ನಿಮಿಷಗಳ ಚರ್ಚೆಯ ಬಳಿಕ ಪ್ರಧಾನಿ ಮೋದಿ ಅವರೂ, ಕಾಶ್ಮೀರವನ್ನು ಸಹಜ ಸ್ಥಿತಿಗೆ ಮರಳಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

2-3 ತಿಂಗಳಲ್ಲಿ ಸುಧಾರಣೆ: ಪ್ರಧಾನಿ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ರೊಂದಿಗೂ ಮಾತನಾಡಿದ ಮೆಹಬೂಬಾ, “ಮಾತುಕತೆ ಆರಂಭವಾದ ಬಳಿಕ ಜಮ್ಮು-ಧಿಕಾಶ್ಮೀರದ ಸ್ಥಿತಿ 2-3 ತಿಂಗಳಲ್ಲಿ ಸುಧಾರಿಸಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ, ಯಾವಾಗ, ಯಾರೊಂದಿಗೆ ಮಾತು ಕತೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ಹೆಚ್ಚು ಉಗ್ರರ ಸೃಷ್ಟಿ ಎಚ್ಚರಿಕೆ: ಏತನ್ಮಧ್ಯೆ, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕ್ರೌರ್ಯವು ಕಣಿವೆ ರಾಜ್ಯದಲ್ಲಿ ಹೆಚ್ಚು ಹೆಚ್ಚು ಉಗ್ರವಾದಿಗಳ ಹುಟ್ಟಿಗೆ ಕಾರಣವಾಗುತ್ತಿದೆ. ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೆಜ್ಜೆಯಿಡಬೇಕಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಸೋಮವಾರದ ಸಂಪಾದಕೀಯದಲ್ಲಿ ಹೇಳಿದೆ. 

Advertisement

ಪೊಲೀಸರು-ವಿದ್ಯಾರ್ಥಿಗಳ ಘರ್ಷಣೆ
5 ದಿನಗಳ ಬಳಿಕ ಸೋಮವಾರ ಕಣಿವೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಮೊದಲ ದಿನವೇ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಶ್ರೀನಗರದ ಎಸ್‌ಪಿ ಕಾಲೇಜು ಮತ್ತು ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದು, ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ಆರಂಭವಾಗಿದೆ. ನಂತರ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಾರೆ. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಪಿಡಿಪಿ ನಾಯಕನ ಗುಂಡಿಕ್ಕಿ ಹತ್ಯೆ
ಅತ್ತ ಮೆಹಬೂಬಾ ಅವರು ಪ್ರಧಾನಿ ಭೇಟಿಗಾಗಿ ದೆಹಲಿಗೆ ತೆರಳಿದ್ದರೆ, ಇತ್ತ ಪುಲ್ವಾಮಾದಲ್ಲಿ ಪಿಡಿಪಿ ನಾಯಕ ಅಬ್ದುಲ್‌ ಗನಿ ದರ್‌ರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ದರ್‌ ಅವರು ಪಿಡಿಪಿ ಜಿಲ್ಲಾಧ್ಯಕ್ಷರಾಗಿದ್ದರು. ಪಿಂಗ್ಲೆàನಾ ಪ್ರದೇಶದಲ್ಲಿ ಮಧ್ಯಾಹ್ನ ದುಷ್ಕರ್ಮಿಗಳು ಎಕೆ ರೈಫ‌Ç …ನಿಂದ ಗುಂಡು ಹಾರಿಸಿದ್ದು, ಅವರ ಎದೆ ಮತ್ತು ಭುಜಕ್ಕೆ ಗುಂಡುಗಳು ಹೊಕ್ಕಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಹತ್ಯೆಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತು ಕೊಂಡಿಲ್ಲ. ಇದು ಒಂದೇ ವಾರದಲ್ಲಿ ನಡೆದ 2ನೇ ರಾಜ ಕೀಯ ನಾಯಕರ ಕೊಲೆ. ಏ.17ರಂದು ನ್ಯಾಷನಲ್‌ ಕಾನ್ಫ ರೆನ್ಸ್‌ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next