Advertisement

ಅನುದಾನ ಮೀಸಲಿಟ್ಟು ಕಲೆ ಪ್ರೋತ್ಸಾಹಿಸಿ

01:48 PM Mar 03, 2021 | Team Udayavani |

ಕನಕಪುರ: ಕೋವಿಡ್ ದಿಂದ ಕಲೆಯನ್ನೇನಂಬಿ ಬದುಕುತ್ತಿರುವ ಕಲಾವಿದರ ಜೀವನ ಅತಂತ್ರವಾಗಿದೆ. ಹಾಗಾಗಿ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಾಂಸ್ಕೃತಿಕ ಚಿಂತಕ ಡಾ. ಎಂ.ಚಂದ್ರ ತಿಳಿಸಿದರು.

Advertisement

ತಾಲೂಕಿನ ಹಾರೋಹಳ್ಳಿ ಹೋಬಳಿ ಮುಡೇನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಪ್ಪಾಜಿ ಸ್ವಾಮಿ ಚಾರಿಟಬಲ್‌ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದೊಂದಿಗೆ ಏರ್ಪಡಿಸಿದ್ದ ಜಾನಪದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಸರ್ಕಾರ ಬಜೆಟ್‌ನಲ್ಲಿ ಕಲಾವಿದರ ಮೂಲಸೌಕರ್ಯಒಳಗೊಂಡಂತೆ ಜೀವವಿಮೆ ಆರೋಗ್ಯ ವಿಮೆ ಸೇರಿದಂತೆ ಹೆಚ್ಚಿನ ಆರ್ಥಿಕ ಸಹಕಾರ ನೀಡಿ ಕಲೆ ಮತ್ತು ಕಲಾವಿದರ ಸಂರಕ್ಷಣಾಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ತರಬೇತಿ ನೀಡಿ: ವೈಭವ ಕರ್ನಾಟಕ ಜಿಲ್ಲಾಧ್ಯಕ್ಷ ಎಚ್‌. ಸಿ. ಪುಟ್ಟಲಿಂಗಯ್ಯ ಮಾತನಾಡಿ, ಅಳಿವಿನಂಚಿನಲ್ಲಿರುವ ಅಸಂಘಟಿತ ಕಲಾವಿದ ರನ್ನು ಗುರುತಿಸಿ ಅವರಲ್ಲಿರುವ ಮೌಲ್ಯ ಯುತ ಕಲೆಗಳನ್ನು ದಾಖಲೀಕರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರ ಬೇತಿ ನೀಡುವ ಕಾರ್ಯವಾಗಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್‌ರವಿಕುಮಾರ್‌, ಸಮಾಜ ಸೇವಕ ಡಿ.ಚಿಕ್ಕಲಿಂಗಯ್ಯ, ರಮೇಶ್‌, ನಾರಾಯಣಸ್ವಾಮಿ, ಪ್ರದೀಪ್‌ ಟ್ರಸ್ಟ್‌ ಅಧ್ಯಕ್ಷಅಂದಾನಯ್ಯ, ಕಾರ್ಯದರ್ಶಿ ಮುಡೇನಹಳ್ಳಿ ಬೈರಾಜು, ಖಜಾಂಚಿ ಗೋಪಿ,ಅರ್ಚಕ ಕೆಂಪರಾಜು, ಟ್ರಸ್ಟ್ ಪದಾಧಿಕಾರಿ ರವಿ, ರಾಜೇಶ್‌, ವೆಂಕಟೇಶ್‌, ಸಿದ್ದರಾಜು, ಲೋಕೇಶ್‌ ಇದ್ದರು.

ರಾಜ್ಯಮಟ್ಟದ ಗಾಯಕ ಪ್ರಶಾಂತ್‌ ಮತ್ತು ತಂಡ ಡೊಳ್ಳು ಕುಣಿತ, ಬಾನಂದೂರು ಕುಮಾರ್‌ ಮತ್ತು ತಂಡತಮಟೆ ವಾದನ, ಚಾಮರಾಜ ಮತ್ತು ತಂಡ ಸೋಮನ ಕುಣಿತ, ಪೂಜಾ ಕುಣಿತ,ವೀರಗಾಸೆ, ಬಸವನ ಮೆರವಣಿಗೆ,ಗಾಯಕ ವೆಂಕಟಾಚಲ, ನಗೆಮಳೆರಾಜ ಸಿ ಚಂದ್ರಾಜು, ನಾಗೇಶ್‌, ಶ್ರಿನಿವಾಸ್‌ ಚಿಕ್ಕ ಮುತ್ತಯ್ಯ ಸಂಗಡಿಗರಿಂದ ಜಾನಪದ ಗಾಯನ ನಡೆಸಿಕೊಟ್ಟರು.

Advertisement

10 ಲಕ ಅನುದಾನ ಮೀಸಲಿಡಿ :

ಕನಕಪುರ: ಪ್ರಸಕ್ತ ಸಾಲಿನ ನಗರಸಭೆ ಬಜೆಟ್‌ನಲ್ಲಿ ತಾಲೂಕುಪತ್ರಕರ್ತರ ಕ್ಷೇಮಾಭಿವೃದ್ಧಿಗೆ 10 ಲಕ್ಷ ರೂ.ಮೀಸಲಿರಸಬೇಕು ಎಂದು ತಾಲೂಕು ಪತ್ರಕರ್ತರು ನಗರಸಭೆ ಅಧ್ಯಕ್ಷ ಮಕ್ಬೂಲ್‌ ಪಾಷಾ ಅವರಿಗೆ ಮನವಿ ಸಲ್ಲಿಸಿದರು.

ಹಿರಿಯ ಪರ್ತಕರ್ತ ಶಿವಲಿಂಗಯ್ಯ ಮಾತನಾಡಿ, ಸಮಾಜದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ವರದಿಗಾರರಿಗೆ ಸರ್ಕಾರದಿಂದ ಯಾವುದೇ ಭದ್ರತೆ ಇಲ್ಲ. ಸಮಾಜದ ಏಳಿಗೆಗಾಗಿ ದುಡಿಯುವ ಪತ್ರಕರ್ತರಿಗೆ ಅನಾರೋಗ್ಯ, ಅಪಘಾತ, ವೈದ್ಯಕೀಯ ವೆಚ್ಚಕ್ಕಾಗಿ 10 ಲಕ್ಷ ರೂ.ಮೀಸಲಿಡುವಂತೆ ಮನವಿ ಮಾಡಿದರು. ಕಾ.ಪ್ರಕಾಶ್‌, ಟಿ.ಸಿ. ವೆಂಕಟೇಶ, ಮನು, ಗಿರೀಶ್‌, ರಾಜು, ರಾಘವೇಂದ್ರ, ಜಯರಾಮು, ಸ್ಟುಡಿಯೋ ಚಂದ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next