Advertisement
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ 2018-19ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು, ಜನಪದ ಎಂದರೆ ಮೆರವಣಿಗೆ. ಮೆರವಣಿಗೆ ಇಲ್ಲದಿದ್ದರೆ ಜನಪದ ಇಲ್ಲ. ಜನಪದಕ್ಕೀಗ ಬರವಣಿಗೆ ಬಂದಿದೆ. ಆದರೆ ಇನ್ನೂ ಶಾಸ್ತ್ರೋಕ್ತವಾಗಿಲ್ಲ ಎಂದರು.
Related Articles
Advertisement
ಇದಾದರೆ, ಜನಪದರೆಲ್ಲ ಜಾನಪದರಾಗುತ್ತಾರೆ ನಂತರ, ಜಾಣಪದರಾಗುತ್ತಾರೆ. ಜಾಣಪದರೆಲ್ಲ ವಿಜ್ಞಾನಿಪದರೂ ಆಗುತ್ತಾರೆ. ಜನಪದ ವಿವಿಯನ್ನು ಗಟ್ಟಿ ಮಾಡೋಣ ಎಂದು ಅವರು ಹೇಳಿದರು.
ಕಂಸಾಳೆ ನಾಡು ಚಾಮರಾಜನಗರ: ಚಾಮರಾಜಗರವನ್ನು ಕಂಸಾಳೆ ನಾಡು ಚಾಮರಾಜನಗರ ಎಂದು ಕರೆಯೋಣ. ಈ ಹಬ್ಬ ಜನಪದ ರತ್ನಗಳಿಗೆ ಸನ್ಮಾನ ಮಾಡಿ ಅಭಿನಂದಿಸುವ ಹಬ್ಬ. ಈ ಹಬ್ಬ ನಡೆಯುವುದಕ್ಕೆ ಬಹಳ ಜನಪದ ತಜ್ಞರು ಕನಸು ಕಂಡಿದ್ದರು. ಇವತ್ತು ಈ ಸ್ಥಿತಿಗೆ ಅವರ ಶ್ರಮ ಕಾರಣ. 1967ರಲ್ಲಿ ತರೀಕೆರೆಯಲ್ಲಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಕನ್ನಡ ನಾಡಿಗೆ ಜನಪದ ವಿಶ್ವವಿದ್ಯಾನಿಲಯವಾಗಬೇಕು ಎಂಬ ಮಾತು ಹೊರಡಿತು. ಅದಾದ 6-7 ದಶಕದ ನಂತರ ಅದು ಈಡೇರಿತು. ಬಿಎಸ್‌ವೈ ಸರ್ಕಾರದಲ್ಲಿ ಜನಪದ ವಿಶ್ವ ವಿದ್ಯಾಲಯ ದೊರಕಿತು. ಅದು ಭಾರತದ ಪ್ರಥಮ ಜನಪದ ವಿಶ್ವವಿದ್ಯಾಲಯ ಎಂದು ಅವರು ತಿಳಿಸಿದರು.
ಜನಪದದ ಪುನರುತ್ಥಾನ ಮಾಡುವುದೇ ಪ್ರತಿ ಸರ್ಕಾರಗಳ ಕರ್ತವ್ಯವಾಗಬೇಕು ಎಂಬುದು ಸಾಹಿತಿ ಡಾ.ದೇಜಗೌ ಅವರ ಆಶಯವಾಗಿತ್ತು. ಜನಪದ ವಿ.ವಿ. ಮ್ಯೂಸಿಯಂ, ಕಲಾಶಾಲೆಗಳಾಗಿವೆ. ಯಾವುದೇ ಸರ್ಕಾರವಿರಲಿ, ಜನಪದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು.
ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಜಿ.ಪಂ. ಅಧ್ಯಕ್ಷೆ ಎಂ. ಅಶ್ವಿನಿ, ನಗರಸಭಾಧ್ಯಕ್ಷೆ ಆಶಾ ನಟರಾಜು, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿ.ಪಂ, ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಎಸ್ಪಿ ದಿವ್ಯಾ ಸಾರಾ ಥಾಮಸ್ ಮತ್ತಿತರರು ಇದ್ದರು.
ಚಾ.ನಗರದಲ್ಲಿ ಕಾರ್ಯಕ್ರಮ ನಡೆಯಲು ಸಿಎಂ ನರಸಿಂಹಮೂರ್ತಿ ಕಾರಣ: ಈ ಕಾರ್ಯಕ್ರಮ ನಡೆಯಲು ಅಕಾಡೆಮಿ ಸದಸ್ಯ ಚಾಮರಾಜನಗರದವರಾದ ಸಿ.ಎಂ. ನರಸಿಂಹಮೂರ್ತಿ ಕಾರಣ ಎಂದು ಡಾ. ಹಂಸಲೇಖ ಪ್ರಶಂಸಿಸಿದರು.
15 ವರ್ಷಗಳ ಹಿಂದೆ ದೇಸಿ ಶಾಲೆಗೆ ಹಾಡುವ ಗಾಯಕರು ಬೇಕು ಎಂದು ಹುಡುತ್ತಿದ್ದಾಗ ಚಾಮರಾಜನಗರದಲ್ಲಿ ಸಿಕ್ಕಿದ ಪ್ರತಿಭೆ ನರಸಿಂಹಮೂರ್ತಿ. ಈಗ ಜಾನಪದ ಅಕಾಡೆಮಿ ಸದಸ್ಯರಾಗಿದ್ದಾರೆ. ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟಣೆ ಮಾತ್ರವಲ್ಲದೇ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಚಲುವ ಚಾಮರಾಜನಗರದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ ಸಲುವಾಗಿ ಅದು ಇಲ್ಲಿ ನಡೆಯುತ್ತಿದೆ ಎಂದು ಅವರು ಶ್ಲಾಘಿಸಿದರು.
ಇದನ್ನೂ ಓದಿ:ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್ ಮೀಡಿಯಾ ಪಾಠ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ
ನಾಡಿನ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ(ಫೆ.7) ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಗಣ್ಯರು ನಾಡಿನ ವಿವಿಧ ಕಲಾವಿದರಿಗೆ ಪ್ರದಾನ ಮಾಡಿದರು.
ಡಾ. ಜೀಶಂಪ ಜಾನಪದ ತಜ್ಞ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರಿಗೆ, ಡಾ. ಬಿ.ಎಸ್. ಗದ್ದಗೀಮಠ ಪ್ರಶಸ್ತಿಯನ್ನು ಕಲಬುರಗಿ ಜಿಲ್ಲೆಯ ಡಾ. ಬಸವರಾಜ ಸಬರದ ಅವರಿಗೆ ಪ್ರದಾನ ಮಾಡಲಾಯಿತು.
2018ನೇ ಸಾಲಿನ ಪುಸ್ತಕ ಬಹುಮಾನವನ್ನು, ಜನಪದ ಸಾಹಿತ್ಯದಲ್ಲಿ ತವರು ಮನೆ ಕೃತಿಗೆ ಡಾ. ಮುಮ್ತಾಜ್ ಬೇಗಂ ಅವರಿಗೆ, 2019ನೇ ಸಾಲಿನ ಪುಸ್ತಕ ಬಹುಮಾನವನ್ನು ಜಾನಪದ ಜ್ಞಾನ ವಿಜ್ಞಾನ ಕೃತಿಗೆ ಡಾ. ಎಚ್.ಡಿ. ಪೋತೆ ಅವರಿಗೆ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ:ಭಾರತದ ಚಹಾದ ಹೆಸರನ್ನು ಕೆಡಿಸಲು ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆದಿದೆ: ಪ್ರಧಾನಿ ಮೋದಿ
2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪಡೆದ ಕಲಾವಿದರು:
ಬೆಂಗಳೂರು ಜಿಲ್ಲೆಯ ಜನಪದ ಗಾಯಕ, ಎಂ.ಕೆ. ಸಿದ್ಧರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಬಾನೆ ಪದದ ಹೊನ್ನಗಂಗಮ್ಮ, ರಾಮನಗರ ಜಿಲ್ಲೆಯ ತಮಟೆ ವಾದನದ ತಿಮ್ಮಯ್ಯ, ಕೋಲಾರ ಜಿಲ್ಲೆಯ ತತ್ವಪದ ಭಜನೆ ಕಲಾವಿದ ಕೆ.ಎನ್. ಚೆಂಗಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಕೀಲುಕುದುರೆ ಕಲಾವಿದ ನಾರಾಯಣಪ್ಪ, ತುಮಕೂರು ಜಿಲ್ಲೆಯ ವೀರಭದ್ರನ ಕುಣಿತದ ಸಿ.ವಿ. ವೀರಣ್ಣ, ದಾವಣೆಗೆರೆ ಜಿಲ್ಲೆಯ ಸೋಬಾನೆ ಪದದ ಭಾಗ್ಯಮ್ಮ, ಚಿತ್ರದುರ್ಗ ಜಿಲ್ಲೆಯ ಮದುವೆ ಹಾಡಿನ ಕೆಂಚಮ್ಮ, ಶಿವಮೊಗ್ಗ ಜಿಲ್ಲೆಯ ಜಾನಪದ ಗಾಯಕ ಕೆ. ಯುವರಾಜ್, ಮೈಸೂರು ಜಿಲ್ಲೆಯ ಕಂಸಾಳೆ ಕಲಾವಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಕೋಲಾಟ ಕಲಾವಿದ ಭೂಮಿಗೌಡ, ಚಿಕ್ಕಮಗಳೂರು ಜಿಲ್ಲೆಯ ಚೌಡಿಕೆ ಪದದ ಎಂ.ಸಿ. ಭೋಗಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಗೊಂಬೆ ಕುಣಿತದ ಗೋಪಾಲಕೃಷ್ಣ ಬಂಗೇರಾ, ಉಡುಪಿ ಜಿಲ್ಲೆಯ ಕರಗ ಕೋಲಾಟದ ರಮೇಶ್ ಕಲ್ಮಾಡಿ, ಕೊಡಗು ಜಿಲ್ಲೆಯ ಬಾಳೋಪಾಟ್‌ನ ಕೆ.ಕೆ. ಪೊನ್ನಪ್ಪ, ಚಾಮರಾಜನಗರ ಜಿಲ್ಲೆಯ ಸೋಬಾನೆ ಕಲಾವಿದೆ ಬಿ. ಹೊನ್ನಮ್ಮ. ಹಾಸನ ಜಿಲ್ಲೆಯ ಹಾಡುಗಾರಿಕೆ ಕಲಾವಿದ ಗ್ಯಾರಂಟಿ ರಾಮಣ್ಣ, ಬೆಳಗಾವಿ ಜಿಲ್ಲೆಯ ತತ್ವಪದ ಕಲಾವಿದ ಮುತ್ತಪ್ಪ ಅಲ್ಲಪ್ಪ ಸವದಿ, ಧಾರವಾಡ ಜಿಲ್ಲೆಯ ತತ್ವಪದ ಕಲಾವಿದ ಮಲ್ಲೇಶಪ್ಪ ತಡಸದ, ವಿಜಯಪುರದ ಡೊಳ್ಳು ಕುಣಿತದ ಸುರೇಶ್ ರಾಮಚಂದ್ರ ಜೋಶಿ, ಬಾಗಲಕೋಟೆ ಜಿಲ್ಲೆಯ ಭಜನೆ ಕಲಾವಿದ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ, ಹಾವೇರಿ ಜಿಲ್ಲೆಯ ತತ್ವಪದ ಕಲಾವಿದ ಬಸವರಾಜ ಶಿಗ್ಗಾಂವಿ, ಗದಗ ಜಿಲ್ಲೆಯ ಮುತ್ತಪ್ಪ ರೇವಣ್ಣಪ್ಪ ರೋಣ, ಹಲಗೆ ಸಾಹೇಬಣ್ಣ, ಕೊಪ್ಪಳ ಜಿಲ್ಲೆಯ ಗೋಂದಳಿ ತಿಪ್ಪಣ್ಣ, ಬಳ್ಳಾರಿ ಜಿಲ್ಲೆಯ ಗೋಂದಳಿ ರಾಮಣ್ಣ, ಯಾದಗಿರಿ ಜಿಲ್ಲೆಯ ಮದುವೆಹಾಡು ಬಸವಲಿಂಗಮ್ಮ ಮತ್ತು ಲಾವಣಿ ಕಲಾವಿದ ಸಹದೇವಪ್ಪ ಈರಪ್ಪ ನಡಗೇರ ಅವರಿಗೆ ನೀಡಿ ಗೌರವಿಸಲಾಯಿತು.