ಬಳ್ಳಾರಿ: ರಂಗೋಲಿ, ಜಾನಪದ ಗಾಯನ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದಿನ ದಿನಮಾನಗಳಲ್ಲಿ ಗ್ರಾಮಗಳಲ್ಲಿ ಗೋವಿನ ಸಗಣಿ ಬಳೆದು ರಂಗೋಲಿ ಬಿಡಿಸುವುದು ಜಾನಪದ ಸಂಸ್ಕೃತಿಯನ್ನೂ ಜೀವಂತವಾಗಿದೆ ಎಂಬುದಕ್ಕೆ ಇಂದಿನ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರೇ ಸಾಕ್ಷಿ ಎಂದು ಕಲ್ಯಾಣ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗಡಿಭಾಗದ ಕಾರೇಕಲ್ಲು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರ ಘಟಕ, ಸನ್ಮಾರ್ಗ ಗೆಳೆಯರ ಬಳಗ ಹಾಗೂ ಕಾರೇಕಲ್ಲು ವೀರಭದ್ರೇಶ್ವರ ಯುವಕ ಸಂಘ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಹಾಗೂ ಜಾನಪದ ಗೀತಾ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಿವೃತ್ತ ಆಯುಕ್ತ ಷಾಷಾವಲಿ ಅವರು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು. ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಮಾತನಾಡಿ, ಜಾನಪದ ಕಲೆ ಉಳಿಸಿ ಬೆಳೆಸುವಲ್ಲಿ ಕಸಾಪ ಬಳ್ಳಾರಿ ಗ್ರಾಮೀಣ ಘಟಕ ಇಂಥ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಘಟಕದ ಅಧ್ಯಕ್ಷ ಎ.ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಂಸ್ಕೃತಿ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ತನ್ನ ಬದುಕಿನಲ್ಲಿ ಹಬ್ಬಗಳು, ಆಚರಣೆಗಳು, ಹಾಡು, ನೃತ್ಯ, ನಾಟಕ, ಕಥೆ, ಭಾಷೆ, ಸಾಹಿತ್ಯ, ಒಗಟು, ಪುರಾಣ, ಕಲೆ, ಸಂಪ್ರದಾಯ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ವಾತ್ಸಲ್ಯ ಅವರು ಗಾಯನ ಮಾಡಿದರೆ, ಜಡೆಪ್ಪ ಎಮ್ಮಿಗನೂರು ಜಾನಪದ ಗೀತೆಗಳಿಂದ ಜನರನ್ನು ರಂಜಿಸಿದರು. ಮೆಹತಾಬ್, ರವಿ ಚೇಳ್ಳಗುರ್ಕಿ, ಸತ್ಯನಾರಾಯಣ, ಹುಸೇನ್ ಭಾಷ, ಅಬ್ದುಲ್ ಹೈ, ತೇಜಪ್ಪನವರ ಪ್ರಕಾಶ, ವೀರಭದ್ರಾಚಾರಿ, ಶಕುಂತಲಾ ರೆಡ್ಡಿ, ಮಲ್ಲಮ್ಮ, ರಾಜೇಶ್ವರಿ ವಾಲಿ, ಲಕ್ಷ್ಮೀಬಾಯಿ, ಚಂದ್ರಪ್ಪ, ಅಶೋಕ, ಬಸವನಗೌಡ,
ಕಟ್ಟೇಬಸವನಗೌಡ, ಹಳೇಗೌಡ್ರ ಪಂಪನಗೌಡ, ಮಲ್ಲಿಕಾರ್ಜುನಗೌಡ ಇದ್ದರು.