Advertisement

ಜಾನಪದ ಸಂಸ್ಕೃತಿ ಉಳಿವಿಗೆ ಕೈಜೋಡಿಸಿ: ರಮೇಶ್‌

11:44 AM Apr 02, 2021 | Team Udayavani |

ವಿಜಯಪುರ: ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಜಾನಪದ ಕಲೆ ಬಗ್ಗೆ ಅಧ್ಯಯನ ಮಾಡುವ ಮೂಲಕ ಅನೇಕರುಕಟ್ಟಿಕೊಟ್ಟಿರುವ ಜಾನಪದ ಸಂಸ್ಕೃತಿಉಳಿವಿಗೆ ಶ್ರಮಿಸಿ, ಕೈಜೋಡಿಸಬೇಕು ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿ.ಎನ್‌.ರಮೇಶ್‌ ತಿಳಿಸಿದರು.

Advertisement

ಪಟ್ಟಣದ ಜ್ಞಾನಗಂಗಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಪನಹಳ್ಳಿ ಪರಿರ್ವತನಾ ಟ್ರಸ್ಟ್‌ನಿಂದ ನಡೆದ 2021ನೇ ಜಾನಪದ ಉತ್ಸವದಲ್ಲಿಡೋಲು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯಾವುದೇ ಸುಶಿಕ್ಷಿತಭಾಷೆಗೆ ಜೋತು ಬೀಳದೆ ತಮ್ಮದೇಶೈಲಿಯಲ್ಲಿ ಹಾಡು ಕಟ್ಟಿ ಹಾಡಿ ಇಂದಿನಪೀಳಿಗೆವರೆಗೂ ಉಳಿಸಿ ಹೋಗಿದ್ದಾರೆ. ಇಂದಿನ ನಾಗರಿಕರ ಅಕ್ಷರ ಜಗತ್ತಿನಲ್ಲಿಯೂ ಜಾನಪದ ಹಾಡುಗಳು ಅವುಗಳ ಶ್ರೇಷ್ಠತೆ ಉಳಿಸಿಕೊಂಡಿವೆ ಎಂದರು.

ಕಲೆಗೆ ಸಾವಿಲ್ಲ: ಜ್ಞಾನಗಂಗಾ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, ಜಾನ ಪದ ಕಲೆಗೆ ಸಾವಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತಿವೆ. ಇದರಿಂದಾಗಿ ಅಧ್ಯಯನಕಾರರಿಗೆ ಮೂಲ ಕಲೆಗಳ ಮಾಹಿತಿ ಕೊರತೆಯಿಂದ ಸಂಶೋಧನೆಗೆ ತೊಡಕಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಸಂಘ  ಸಂಸ್ಥೆಗಳು ಜಾನಪದ ಕಲೆ ಉಳಿಸುವ ಯೋಜನೆ ರೂಪಿಸಬೇಕೆಂದರು.

ಕಲಾವಿದರಿಗೆ ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ತಾರತಮ್ಯ ಮಾಡದೆಜಾನಪದ ಕಲಾವಿದರಿಗೂ ಅಗತ್ಯ ಮನ್ನಣೆನೀಡಬೇಕು. ಯುವ ಜನರಲ್ಲಿ ನಮ್ಮಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಭಿಮಾನ ಮೂಡಿಸಲು ಜಾನಪದ ಗೀತೆಗಳ ಗಾಯನ ಸಹಕಾರಿ ಎಂದರು.

ಇದೇ ವೇಳೆ ವೀರಗಾಸೆ, ತಮಟೆ, ಕೋಲಾಟ, ನಾದಸ್ವರ, ಸುಗಮ ಸಂಗೀತ,ಜಾನಪದ ಗೀತೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಪ್ರಸನ್ನ ಕುಮಾರ್‌, ಬಲಿಜ ಜನಾಂಗದ ಅಧ್ಯಕ್ಷ ಮಹತ್ಯಾಂಜನೇಯ, ಎಂ.ವಿ.ನಾಯ್ಡು, ಶಿಕ್ಷಕ ವೃಂದ, ಕಲಾವಿದರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next