Advertisement

ಶಾಲಾ ಕಾಲೇಜುಗಳಲ್ಲಿ ಜಾನಪದ ಪಠ್ಯ ಅವಶ್ಯ

04:21 PM Jul 30, 2019 | Suhan S |

ರಾಮನಗರ: ಶಿಕ್ಷಣ ಪಠ್ಯಕ್ರಮದಲ್ಲಿ ಜಾನಪದವನ್ನು ಒಂದು ಕಡ್ಡಾಯ ಪಠ್ಯವನ್ನಾಗಿಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.

Advertisement

ತಾಲೂಕಿನ ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಕೆ.ಎಸ್‌.ಮುದ್ದಪ್ಪ ಸ್ಮಾರಕ ಟ್ರಸ್ಟ್‌, ಇಂಡಿಯನ್‌ ಫೋಕ್ಲೋರ್‌ ರಿಸರ್ಚ್‌ ಆರ್ಗನೈಸೇಷನ್‌, ಇಫ್ರೊ ಜಾನಪದ ಮಹಾವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆದ ಶಾಲಾ ಕಾಲೇಜುಗಳಲ್ಲಿ ಜಾನಪದ ಅಧ್ಯಯನವನ್ನು ಕಡ್ಡಾಯಗೊಳಿಸಲು ಕುರಿತು ನಡೆದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ, ಕಾಲೇಜುಗಳ ಪಠ್ಯಕ್ರಮದಲ್ಲಿ ಜಾನಪದ ಒಂದು ಪಠ್ಯ ಕ್ರಮವಾದರೆ ಆಯಾ ಭಾಗದ ಜಾನಪದ ಕಲೆಯನ್ನು ಕಲಿಯುವ ಆ ಮೂಲಕ ಹೊಸ ತಲೆಮಾರಿನಲ್ಲಿ ಜಾನಪದವನ್ನು ಉಳಿಸಿ, ಕಲಾವಿದರನ್ನು ಹುಟ್ಟುಹಾಕಬಹುದು ಎಂದರು.

ಜಾನಪದ ಕಲಾವಿದರಿಗೆ ಗೌರವ ನೀಡಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್‌. ವೆಂಕಟೇಶ್‌ ಮಾತನಾಡಿ, ಜಾನಪದ ಕಲಾವಿದರಿಗೆ ನಮ್ಮಲ್ಲಿ ಗೌರವ ಕಡಿಮೆ. ಹಾಗಾಗಿ ಜಾನಪದ ಕಲಾವಿದರಿಗೆ ಗೌರವ ಸಿಗುವ ವಾತಾವರಣವನ್ನು ನಿರ್ಮಿಸಬೇಕಿದೆ. ಕಲಾವಿದರು ತಮ್ಮ ಕಲೆಯನ್ನೇ ನಂಬಿ ಬದುಕಬಹುದೆಂಬ ಆತ್ಮವಿಶ್ವಾಸವನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಚಂದ್ರಶೇಖರ್‌ ಮಾತನಾಡಿ, ಇಂದಿನ ಜಾನಪದ ಅಧ್ಯಯನದ ತುರ್ತು ಬೇರೆಯೇ ಆಗಿದೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೂಂಡು ಈ ಕಾಲಕ್ಕೆ ಹೊಂದಿಕೆಯಾಗುವಂತಹ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

Advertisement

ಜಾನಪದ ಸಾಹಿತ್ಯ ಅನುವಾದ ಅವಶ್ಯ: ಇಫ್ರೋ ಪ್ರಧಾನ ಕಾರ್ಯದರ್ಶಿ ಡಾ.ಎಂ.ಬೈರೇಗೌಡ ಮಾತನಾಡಿ, ಕನ್ನಡ ಜಾನಪದವನ್ನು ಇಂಗ್ಲಿಷ್‌ಗೆ ಮತ್ತು ಭಾರತೀಯ ಇತರೆ ಭಾಷೆಗೆ ಅನುವಾದ ಮಾಡುವ ಅಗತ್ಯವಿದೆ. ಹಾಗಾಗಿ ವಿಶ್ವವಿದ್ಯಾಲಯಗಳಲ್ಲಿ ಭಾಷಾಂತರ ವಿಭಾಗವನ್ನು ತೆರೆಯಬೇಕು. ಅನುವಾದವಾದ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಇಂಡಿಯನ್‌ ಫೋಕ್ಲೋರ್‌ ರಿಸರ್ಚ್‌ ಆರ್ಗನೈಸೇಷನ್‌ ಖಜಾಂಚಿ ಕೆ.ಎಸ್‌. ರಂಗೇಗೌಡ ಮಾತನಾಡಿದರು. ಇಫ್ರೋ ಅಧ್ಯಕ್ಷ ಡಾ.ಇ.ಕೆ.ಗೋವಿಂದ ವರ್ಮರಾಜ, ಡಾ.ರತಿ ತಂಬಟ್ಟಿ, ತಮಿಳು ಜಾನಪದ ವಿದ್ವಾಂಸ ಡಾ.ರಾಮಾನುಜನ್‌, ಜಾನಪದ ವಿದ್ವಾಂಸ ಡಾ.ಕ್ಯಾತನಹಳ್ಳಿ ರಾಮಣ್ಣ, ಸಂಶೋಧನಾ ವಿದ್ಯಾರ್ಥಿಗಳಾದ ಜಿ.ಸಣ್ಣಯ್ಯ, ರಜಿಯಾ ನದಾಫ್, ಡಾ.ಬಸವರಾಜು, ದ್ರಾವಿಡ ವಿಶ್ವವಿದ್ಯಾಲಯದ ಡಾ.ನರಸಿಂಹ ಪ್ರಸಾದ್‌, ಟಿ. ಲಕ್ಷ್ಮೀನಾರಾಯಣ, ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲದ ಡಾ.ವಿಜಿಶಾ, ಡಾ.ಧನ್ಯಾ, ಮೈಸೂರಿನ ದಿನೇಶ್‌, ಡಾ.ಯು.ಎಂ. ರವಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next