Advertisement

ವಿದೇಶಿಗರಿಂದ ಜಾನಪದ ಅಧ್ಯಯನ

04:56 PM Jan 29, 2020 | Suhan S |

ಅಂಕೋಲಾ: ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ತಾಲೂಕಿನ ಬಡಗೇರಿಯ ಸುಕ್ರಿ ಗೌಡರ ಮನೆಗೆ ಆಗಮಿಸಿದ ಜರ್ಮನ್‌ ಮತ್ತು ಆಸ್ಟ್ರೀಯಾ ಪ್ರಜೆಗಳು ಸುಕ್ರಜ್ಜಿ ಜಾನಪದ ಹಾಡುಗಳಿಗೆ ಮಾರು ಹೋಗಿ ಎರಡು ದಿನ ಅವರ ಮನೆಯಲ್ಲಿಯೆ ಉಳಿದು ಅವರ ಉಡುಗೆ ತೊಡುಗೆ ತೊಟ್ಟು ಆನಂದಿಸಿದ್ದಾರೆ.

Advertisement

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಡಗೇರಿ ಸುಕ್ರಜ್ಜಿ ಮನೆಗೆ ಬುಡಕಟ್ಟು ಸಮುದಾಯ ಮತ್ತು ಅಲ್ಲಿಯ ಪರಿಸರದ ಕುರಿತು ಅಧ್ಯಯನಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ ಜರ್ಮನ್‌ ದೇಶದ ಮೆಕ್ಸಿಮಿಲನ್‌ ನೇರಲಿಂಗ ಆಸ್ಟ್ರಿಯಾದ ವೇಲೆರೀಯಾ ಸ್ಟ್ರೋಬ್‌ ವಿದ್ಯಾರ್ಥಿಗಳೊಂದಿಗೆ ಅತಿಥಿಗಳಾಗಿ ಆಗಮಿಸಿ ಸುಕ್ರಿ ಗೌಡರ ಜಾನಪದ ಭಂಡಾರಕ್ಕೆ ಮಾರು ಹೊಗಿದ್ದಾರೆ.

ಸುಮಾರು 4000 ಜಾನಪದ ಹಾಡುಗಳನ್ನು ಯಾವುದೇ ಪುಸ್ತಕದಲ್ಲಿ ಅಚ್ಚಾಗಿಸದೆ ತಮ್ಮಲ್ಲಿಯೆ ಭಂಡಾರವಾಗಿಸಿಕೊಂಡಿರುವ ಸುಕ್ರಜ್ಜಿ ಮತ್ತು ಅವರ ಸಮುದಾಯ ಇಲ್ಲಿಯ ಪರಿಸರದ ಕುರಿತು ಈ ತಂಡ ಅಧ್ಯಯನಕ್ಕೆ ಆಗಮಿಸಿತ್ತು.

ಕುಚಲಕ್ಕಿ ಊಟ :  ಹಳ್ಳಿಯ ಸಂಪ್ರದಾಯದಂತೆ ಅಧ್ಯಯನ ಕೇಂದ್ರದ 30 ಮಕ್ಕಳ ತಂಡ ಮತ್ತು ವಿದೇಶದ ಈ ಪ್ರಜೆಗಳು ಹಳ್ಳಿಯ ಊಟವಾದ ಕುಚಲಕ್ಕಿ ಗಂಜಿ ಮೀನು ಊಟ ಸವಿದು ಇಲ್ಲಿಯೇ ವಾಸ್ತವ್ಯ ಮಾಡಿದರು. ಮುಂಜಾನೆ ಬೆಟ್ಟಕ್ಕೆ ಕಟ್ಟಿಗೆ ಹೊಗುವವರೊಂದಿಗೆ ಈ ತಂಡವು ತೆರಳಿ ಬೆಟ್ಟದಲ್ಲಿನ ಮರಗಿಡಗಳ ಅಧ್ಯಯನ ನಡೆಸಿತು.

ಹಳ್ಳಿ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿಗರು : ಜರ್ಮನ್‌ ಮೂಲದ ಪ್ರಜೆಗಳು ಹಳ್ಳಿಯ ವಾತಾವರಣ ಣ ಸುಕ್ರಿ ಗೌಡರ ಜಾನಪದ ನೃತ್ಯಗಳು ಅದರಲ್ಲೂ ತಾರೆಲ ಕುಣಿತ ಣ ಈ ತಂಡದವರಿಗೆ ಮುದ ನೀಡಿತು. ಹಾಲಕ್ಕಿ ಸಮುದಾಯದವರ ಉಡುಗೆಯನ್ನು ವಿದೇಶಿ ಪ್ರಜೆಗಳು ಣತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸುಕ್ರಜ್ಜಿ ತಂಡದೊಂದಿಗೆ ತಾವು ಕೂಡ ಹೆಜ್ಜೆ ಹಾಕಿದರು.

Advertisement

ಜರ್ಮನ್‌ ತಂಡದೊಂದಿಗೆ ಬರುತ್ತೇವೆ :  ಹಾಲಕ್ಕಿ ಸಮುದಾಯದವರ ಸಾಂಪ್ರದಾಯಿಕ ಆಚಾರ ಣ ವಿಚಾರ, ಹಾಡು, ಕುಣಿತ, ಉಡುಗೆಗಳಿಗೆ ಮಾರುಹೊದ ವಿದೇಶಿ ಪ್ರಜೆಗಳು ಮತ್ತು ಅಧ್ಯಯನ ಕೇಂದ್ರದವರು ಸುಕ್ರಿ ಗೌಡರಿಗೆ ಸನ್ಮಾನಿಸಿ ಗೌರವ ನೀಡಿದ್ದಾರೆ. ಮುಂದಿನ ದಿನದಲ್ಲಿ ಜರ್ಮನ ದೇಶದಿಂದಲೇ ನಮ್ಮ ತಂಡ ಕರೆದುಕೊಂಡು ಇಲ್ಲಿಗೆ ಬರುವುದಾಗಿ ಹೇಳಿ ಹೋಗಿದ್ದಾರೆ.

ಮಂಗಳೂರಿನ ಮಕ್ಕಳೊಂದಿಗೆ ಎರಡು ದಿನ ಹೊರದೇಶದ ವರುಣ ನಮ್ಮ ಮನೆಯಲ್ಲಿ ಇದ್ದರು. ಇಲ್ಲೆ ಮಲಗಿ ನಮ್ಮ ಊಟವನ್ನೆ ಮಾಡಿದ್ದಾರೆ. ನಾವು ಕೂಡ ಅವರಿಗೆ ಜಾನಪದ ಹಾಡನ್ನ ಹೇಳಿ ನೃತ್ಯ ಮಾಡುವುದರ ಮೂಲಕ ಮನರಂಜನೆ ನೀಡಿದ್ದೆವು.  –ಸುಕ್ರಿ ಗೌಡ ಪದ್ಮಶ್ರೀ ಪುರಸ್ಕೃತೆ

 

ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next