Advertisement

Folk Sports: ಕಣ್ಮರೆಯಾಗಿವೆ ಜಾನಪದ ಕ್ರೀಡೆಗಳು

11:49 AM Sep 08, 2024 | Team Udayavani |

ಗ್ರಾಮೀಣ ಪ್ರದೇಶದ ಜಾನಪದ ಶೈಲಿ, ಹಳ್ಳಿ ಬದುಕಿನ ಆಚಾರ ವಿಚಾರ ಸಂಸ್ಕೃತಿ, ವಿಭಿನ್ನ ಜೀವನ  ಶೈಲಿ ಅದೊಂದು ಅದ್ಭುತವೇ ಸರಿ. ಅಂದಿನ ಸಂಸ್ಕೃತಿ ಇಂದಿನ ಆಧುನಿಕತೆ ಇವೆರಡರ ನಡುವೆ ಇರುವುದು ವ್ಯತ್ಯಾಸ ಮಾತ್ರ ಒಂದೇ, ಸಂಸ್ಕೃತಿ ಹೆಚ್ಚು ಆದ್ಯತೆ ನೀಡಿದ್ದು ಅಂದು, ಆದರೆ ಇಂದು ಬದಲಾಗುವ ಅಧುನಿಕತೆಗೆ ಹೆಚ್ಚು ಆದ್ಯತೆ ನೀಡುತ್ತಿವೆ.

Advertisement

ಅತೀಯಾದ ನಾಗರಿಕತೆಗೆ  ಮಾರು ಹೋದ ಮನುಷ್ಯ ಬದಲಾವಣೆ ಎಂಬುದಕ್ಕೇ ಮನಸೋತಂತಿದೆ. ಹೀಗೆ ನೋಡುತ್ತಾ ಹೋದರೆ ಗ್ರಾಮೀಣ ಪ್ರದೇಶದ ಜನರು ಅಂದಿನ ಕಾಲಕ್ಕೆ  ಇವತ್ತಿನ ದಿನಕ್ಕೆ ಅವರೇನು ಯಾವುದಕ್ಕೂ ಕಮ್ಮಿ ಇರಲಿಲ್ಲ. ಅದಕ್ಕೆ ಬೇಕಾದ ಕುರುವು ನಮಗೆ ಕಾಣಸಿಗುತ್ತವೆ.

ಅವರದ್ದೇ ಆದ ಶೈಲಿಯ ವಿವಿಧ ರೀತಿಯ ಆಟಗಳು ಅವತ್ತಿನ ದಿನಕ್ಕೆ  ಪ್ರಚಲಿತದಲ್ಲಿದವು.  ಆಟವೆಂದು ಕೂಡಲೇ ಹೊರಾಂಗಣ ಆಟ ಕಬಡ್ಡಿ ಲಗೋರಿ, ಮರಕೋತಿ, ಚಿನ್ನೀ ದಾಂಡು, ಹುಲಿ ದನ, ಕುಂಟೆಬಿಲ್ಲೆ, ಕಣ್ಣ ಮುಚ್ಚಾಲೆ, ಶುಕ್ರ ಚಂಡು ಹೀಗೆ ಹತ್ತಾರು. ಹೀಗೆ ಒಳಾಂಗಣ ಆಟಗಳೆಂದರೆ ಛಂದೇ ಮನೆ, ಅಳಗುಳಿ ಮನೆ, ಅಂಚಿ ಬಿಂಚಿ, ಎತ್ಕಲ್‌ ಆಟ ಹೀಗೆ ಹುಡುಕುತ್ತಾ ಹೋದರೆ ಆಟಗಳು ಹತ್ತಾರು. ಇವು ಮನರಂಜನೆಯ ಜತೆಗೆ ಮನುಷ್ಯನ ದೈಹಿಕ ಸಾಮರ್ಥಯ ಮತ್ತು ಮನಸ್ಥಿತಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಒಂದು ರೀತಿಯ ಸಹಾಯವನ್ನು  ಮಾಡುತ್ತಿದ್ದವು. ಅಂದಿನ ಗ್ರಾಮೀಣ ಬದುಕಿನ ಜನರಿಗೆ ಈ ಆಟಗಳು ಒಂದು ವಿಶಿಷ್ಟ ಲೋಕವನ್ನು ಸೃಷ್ಟಿಸುತ್ತಿದ್ದವು. ಮಕ್ಕಳು ಬಾಲ್ಯದ  ದಿನಗಳಲ್ಲಿ ಈ ಆಟಗಳನ್ನ ಆಡುತ್ತ ಬೆಳೆಯುತ್ತಿದ್ದರು ಮತ್ತು ಇವೆ ಅವತ್ತಿನ ದಿನಕ್ಕೆ ಸ್ಪರ್ಧೆಗಳ ಪ್ರೀತಿಯಲ್ಲಿ ನಡೆಯುತ್ತಿದ್ದವು.

ಆದರೆ ಮನುಷ್ಯ ಜೀವನ ಶೈಲಿಯ ಪ್ರಭಾವ ದಿಂದಾಗಿ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶದ ವಿವಿಧ ಮಾದರಿಯ ಆಟಗಳಿಗೆ ಮಾರು ಹೋಗಿ  ಅವುಗಳು ಬೆನ್ನು ಹತ್ತಿರುವುದು ಮಾತ್ರ ಶೋಚನೀಯ. ಎಲ್ಲ ಆಟಗಳು ಇತ್ತೀಚಿನ ದಿನಗಳಲ್ಲಿ ಮನರಂಜನೆ ಹೊರತುಪಡಿಸಿ ಇವರದ್ದೇ ಆದಂತ ಒಂದು ವ್ಯವಹಾರಿಕ ಮಾರ್ಗವಾಗಿ ರೂಪಗೊಂಡಿವೆ. ಇನ್ನು ಕೆಲವು ಸ್ಪರ್ಧೆಗಳು, ಅವು ಕೇವಲ ಸ್ಪರ್ಧೆಯಾಗಿಲ್ಲ. ಅದು ಚಿನ್ನದ ಮೊಟ್ಟೆ ಇಡುವ ವ್ಯವಹಾರವಾಗಿ ರೂಪಗೊಂಡಿವೆ.

ಈ ರೀತಿಯ ವಿದೇಶಿ ಆಟಗಳಿಗೆ  ನವ ಜಗತ್ತಿನ ಜನ ಸಮೂಹ ಮಾರುಹೋಗಿದ್ದಾರೆ. ಅತೀಯಾದ ನಗರೀಕರಣ, ಜಾಗತೀಕರಣ ಮತ್ತು ಎಲ್ಲವೂ ಬೆರಳ ತುದಿಯಲ್ಲಿ ಆಗುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಮಾರ್ಪಾಡುಗಳು ಎಲ್ಲ ಆಟಗಳನ್ನು ವ್ಯವಹಾರದ ದೃಷ್ಟಿಯಿಂದ ನೋಡಲಾಗುತ್ತಿದೆ. ಹಣಗಳಿಸುವ ಮೂಲ ಉದ್ದೇಶವಾಗಿ ಬೆಳೆಯುತ್ತಿರುವುದು ಗ್ರಾಮೀಣ ಪ್ರದೇಶದ ಈ ಆಟಗಳು ನಶಿಸಿ ಹೋಗಲು ಮುಖ್ಯ ಕಾರಣ.

Advertisement

21ನೇ ಶತಮಾನದ ನವಯುಗದ ಎಲ್ಲಾ ಯುವ ಸಮುದಾಯಕ್ಕೆ ಈ ಗ್ರಾಮೀಣ ಆಟಗಳ ಬಗ್ಗೆ ಒಂದು ಚಿಕ್ಕ ಪರಿಕಲ್ಪನೆಯು ಇರಲಿಕೆ ಸಾಧ್ಯವೇ ಎಂಬಂತಾಗಿದೆ ಇದ್ದರೂ ಕೂಡ ಅದು ಕೇವಲ ಬೆರಳಣಿಕೆ ಎಷ್ಟು ಮಾತ್ರ. ಎಂಬಂತಾಗಿದೆ. ಇತ್ತೀಚಿನ ಈ ತಂತ್ರಜ್ಞಾನದ ಯುಗದಲ್ಲಿ  ಗ್ರಾಮೀಣ ಪ್ರದೇಶದ ಸಂಸ್ಕೃತಿಗೆ ಹೇಗೆ ಮಹತ್ವ ಸಿಗುತ್ತಿದೆಯೋ ಹಾಗೆ ಗ್ರಾಮೀಣ ಕ್ರೀಡೆಗಳಿಗೆ ಅದರದ್ದೇ ಆದ ಮಹತ್ವವಿದೆ. ಮುಂದಿನ ಜನಸಮುದಾಯಕ್ಕೆ ಜಾದಪದ ಆಟಗಳು ಪರಿಚಯವಾಗಬೇಕಾಗಿದೆ.

- ಕಿರಣ್‌ ಕುಮಾರ್‌ ಕಾನ್ಮನೆ

ಸಾಗರ

Advertisement

Udayavani is now on Telegram. Click here to join our channel and stay updated with the latest news.

Next