Advertisement
ಸುಮಾರು ನಲ್ವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಕೆಲ ಹಿರಿಯರೂ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿ ಪುಳಕಿತಗೊಂಡರು. ವೆಂಕಿ ಪಲಿಮಾರ್ ಅವರವರ ವಯಸ್ಸಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಿ ಕಲಾಕೃತಿಗಳನ್ನು ರಚಿಸಿಕೊಂಡರು. ಭಾರತೀಯ ಸಂಸ್ಕೃತಿ ಮತ್ತು ಜಾನಪದ ಲೋಕಕ್ಕೆ ಸಂಬಂಧಿಸಿದ ವಿಷಯಗಳನ್ನು ಆಯ್ದುಕೊಂಡು ಆವೆಮಣ್ಣಿನ ಕಲಾಕೃತಿಗಳನ್ನು ರೂಪಿಸಲಾಯಿತು. ಯಕ್ಷಗಾನ ಮತ್ತು ಭೂತದ ಮುಖವಾಡಗಳು ಹೆಚ್ಚು ರಚನೆಯಾದವು. ಭಯಾನಕ, ಭೀಭತ್ಸ, ರೌದ್ರರಸಗಳು ಕಲಾಕೃತಿಗಳಲ್ಲಿ ಮೂಡಿಬಂದವು. ಶಿಬಿರದ ಕೊನೆಯಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ವೀಕ್ಷಕರು ಇದನ್ನು ಕಂಡು ವಿದ್ಯಾರ್ಥಿ ಪ್ರತಿಭೆಗೆ ಮನದೂಗಿದರು.
Advertisement
ಚಿಣ್ಣರ ಕೈಯಲ್ಲರಳಿದ ಜಾನಪದ ಮೃಣ್ಕಲೆ
12:08 AM Jun 14, 2019 | mahesh |
Advertisement
Udayavani is now on Telegram. Click here to join our channel and stay updated with the latest news.