Advertisement

ಪಠ್ಯಪುಸ್ತಕದಲ್ಲಿ ಜಾನಪದ ಸಾಹಿತ್ಯ ಅಳವಡಿಸಲಿ

09:56 AM May 27, 2019 | Team Udayavani |

ರಾಯಚೂರು: ಪ್ರಸ್ತುತ ಆಧುನೀಕರಣ ಭರಾಟೆಯ ದಿನಗಳಲ್ಲಿ ಜಾನಪದ ಸಾಹಿತ್ಯ, ಕಲೆಗಳು ಕಣ್ಮರೆಯಾಗುತ್ತಿದ್ದು, ಪಠ್ಯಪುಸ್ತಕದಲ್ಲಿ ಜಾನಪದ ಸಾಹಿತ್ಯ ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಬೆಳೆಸುವ ಕೆಲಸ ಆಗಬೇಕು ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ| ಬಾಲಾಜಿ ಅಭಿಪ್ರಾಯಪಟ್ಟರು.

Advertisement

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ರವಿವಾರ ನಡೆದ ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಹಾಗೂ ಸಿಂದಿಗಿ ಜಾನಪದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಎಲ್ಲರ ಕರ್ತವ್ಯ ನಮ್ಮ ಗ್ರಾಮೀಣ ಜನರ ಬದುಕನ್ನು ಬಿಂಬಿಸುವ ಸಾಹಿತ್ಯವೇ ಇದಾಗಿದೆ. ಯುವಕರು ಇಂಥ ಸಾಹಿತ್ಯ ಹೆಚ್ಚಾಗಿ ಅಭ್ಯಾಸ ಮಾಡಬೇಕು ಎಂದರು.

ನಿವೃತ ಪ್ರಾಧ್ಯಾಪಕಿ ಡಾ| ಜಯಲಕ್ಷ್ಮೀ ಮಂಗಳಾಮೂರ್ತಿ ಮಾತನಾಡಿ, ಜಾನಪದ ಸಾಹಿತ್ಯ ಸರ್ವವ್ಯಾಪಿ ಸಾಹಿತ್ಯವಾಗಿದೆ. ಇದರಲ್ಲಿ ಅನೇಕ ನೈತಿಕತೆಗಳು ಅಡಗಿವೆ. ಇದನ್ನು ಕೇವಲ ಆಸ್ವಾದಿಸುವುದಲ್ಲದೇ ಅದರಲ್ಲಿನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅತಿಥಿ ವೀರಹನುಮಾನ ಮಾತನಾಡಿ, ಮೂಲ ರಾಮಾಯಣದಲ್ಲಿ ಇರಲಾರದ ಎಷ್ಟೋ ವಿಚಾರಗಳು ಜಾನಪದ ರಾಮಾಯಣದಲ್ಲಿ ಅಡಗಿವೆ ಎಂದರು. ಸಿಂದಿಗಿಯ ಜಾನಪದ ಸ್ಮರಣ ಸಂಚಿಕೆಯನ್ನು ಹಿರಿಯ ವಾಹನ ನಿರೀಕ್ಷಕ ವೆಂಕಟೇಶ್ವರರಾವ್‌ ಬಿಡುಗಡೆಗೊಳಿಸಿದರು. ಸಾಹಿತಿ ಅಯ್ಯಪ್ಪಯ್ಯ ಹುಡಾ, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ, ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಡಾ| ಅರುಣ ಹಿರೇಮಠ, ಡಾ| ಅಹೋಜಿ ಮಾತನಾಡಿದರು.

ಪರಿಷತ್‌ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಶರಣಪ್ಪ ಗೋನಾಳ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅವಧೂ‌ ಬಂಡಗಾರ, ಸಿದ್ದಯ್ಯಸ್ವಾಮಿ ಚೇಗುಂಟ, ಕವಿಗಳಾದ ಯಾಡ್ಕಿ ಮಹೇಶಬಾಬು, ತಾಯಪ್ಪ, ಬಿ.ಹೊಸೂರು, ಡಾ| ಧರ್ಮಣ್ಣ, ದೇವರೆಡ್ಡಿ, ಶ್ರೀದೇವಿ, ವೀರಣ್ಣ, ಪಲುಗುಲ ನಾಗಾರಾಜ, ಗಜಲ್ ಸಾಹಿತ್ಯ ಪರಿಷತ್‌ ಅಧ್ಯಕ್ಷ ರಾಂಪುರಿ, ಹಾಜಿಬಾಬು , ಶ್ರೀಕಾಂತ, ಪ್ರವೀಣ ಮಾನ್ವಿ, ಗೋಪಾಲ, ವೀರಪ್ಪ ಸೇರಿ ಇತರರಿದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next