Advertisement

“ಜಾನಪದೀಯ ನಂಬಿಕೆ, ಆಚರಣೆ ಮರೆವು ಅಧಃಪತನಕ್ಕೆ ದಾರಿ’

08:22 PM Jul 22, 2019 | Sriram |

ಬದಿಯಡ್ಕ : ತುಳು ಭಾಷೆ, ಸಂಸ್ಕೃತಿಗೆ ಸಂವರ್ಧನೆಗೆ ಪೂರಕವಾದ ಕಾರ್ಯಕ್ರಮವನ್ನು ಆಚರಿಸುವುದು, ತುಳು ಲಿಪಿ ಸಂಶೋಧಕರಾದ ಡಾ| ವೆಂಕಟರಾಜ ಪುಣಿಂಚಿತ್ತಾಯರ ಕನಸುಗಳನ್ನು ವ್ಯಾಪಕಗೊಳಿಸಿ ನನಸುಗೊಳಿಸುತ್ತಿರುವ ಜಿ.ಕೆ.ಚಾರಿಟೇಬಲ್‌ ಟ್ರಸ್ಟ್‌ನ ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್‌ ಕಾಸರಗೋಡು ಅವರು ಹೇಳಿದರು.

Advertisement

ವಾಂತಿಚ್ಚಾಲಿನ ಜಿ.ಕೆ.ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ವಾಂತಿಚ್ಚಾಲಿನಲ್ಲಿ ಆಯೋಜಿಸಲಾದ 51ನೇ ವರ್ಷದ ಆಟಿಡೊಂಜಿ ಅಟ್ಟಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಾರಿಟೆಬಲ್‌ ಟ್ರಸ್ಟ್‌ನ ಮೂಲಕ ತುಳುವಿನ ಸಮಗ್ರ ಸಾಹಿತಿಕ, ಸಾಂಸ್ಕೃತಿಕ, ಜಾನಪದ ಆಚರಣೆ ನಂಬಿಕೆಗಳಿಗೆ ಪುನಶ್ಚೇತನ ನೀಡುತ್ತಿರುವುದು ಹೊಸ ತಲೆಮಾರಿಗೆ ಪ್ರೇರಣೆಯಾಗಲಿದೆ. ಸಾಂಸ್ಕೃತಿಕ, ಜಾನಪದೀಯ ನಂಬಿಕೆ, ಆಚರಣೆಗಳ ಮರೆವು ಅಧಪತನದ ದಾರಿಯಾಗಿ ಅಶಾಂತಿಗೆ ಕಾರಣವಾಗುವುದು ಎಂದು ತಿಳಿಸಿದರು.

ಕೇರಳ ತುಳು ಅಕಾಡೆಮಿ ಮೂಲಕ ಮುಂದಿನ ದಿನಗಳಲ್ಲಿ ತುಳು ಲಿಪಿ ಕಾರ್ಯಾಗಾರ ನಡೆಸಲಾಗುವುದು ಎಂದ ಅವರು ತುಳು ಭವನದ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಡಾ|ಶ್ರೀನಿಧಿ ಸರಳಾಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಅಕಾಡೆಮಿ ಸದಸ್ಯೆ ವಿದ್ಯಶ್ರೀ, ಕಾಸರಗೋಡು ತುಳು ಲೇಖಕರ ಸಂಘದ ಅಧ್ಯಕ್ಷ ಸತೀಶ ಸಾಲಿಯಾನ್‌ ನೆಲ್ಲಿಕುಂಜೆ, ಯೋಗ ಶಿಕ್ಷಕಿ ಇಂದಿರಾ ಯಾದವ್‌ ನೆಟ್ಟಣಿಗೆ, ಕುಲಾಲ ಸಮಾಜ ಸುಧಾರಕ ಸಂಘ ಕಾಸರಗೋಡಿನ ಅಧ್ಯಕ್ಷ ಸುಂದರ ಕಟ್ನಡ್ಕ, ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪತ್ರಕರ್ತರಾದ ಜಯ ಮಣಿಂಪಾರೆ ತುಳು ಸಾಹಿತಿ ಬಾಲಕೃಷ್ಣ , ಕಿಶನ್‌ ಮುದುಂಗಾರ್‌ ಕಟ್ಟೆ , ಹರ್ಷ ರೈ ಪುತ್ರಕಳ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತುಳು ಅಕಾಡೆಮಿ ಅಧ್ಯಕ್ಷರಾದ ಉಮೆಶ್‌ ಸಾಲ್ಯಾನ್‌ ಅವರನ್ನು ಸಮ್ಮಾನಿಸಲಾಯಿತು. ಜಿ.ಕೆ.ಟ್ರಸ್ಟ್‌ನ ಗೋಪಾಲಕೃಷ್ಣ ಕುಲಾಲ್‌ ಸ್ವಾಗತಿಸಿ, ದಿವ್ಯ ಪ್ರದೀಪ್‌ ಕಳತ್ತೂರು ವಂದಿಸಿದರು. ಜಿಶನ್‌ ವಾಂತಿಚ್ಚಾಲ್‌ ಪ್ರಾರ್ಥನೆ ಹಾಡಿದರು.

Advertisement

ಜೀವಂತವಾಗಿಸಲು ಸಾಧ್ಯ
ತುಳುಭಾಷೆ ಮತ್ತು ಸಂಸ್ಕೃತಿ ವೈಶಿಷ್ಟéಪೂರ್ಣವಾದುದು. ಅದರಲ್ಲಿರುವ ಮೂಲ ತತ್ವಗಳನ್ನು, ಜೀವನ ಸೂತ್ರಗಳನ್ನು ಆಚರಣೆಯ ಮೂಲಕ ಮಾತ್ರ ಜೀವಂತವಾಗಿಸಲು ಸಾಧ್ಯ. ಸಂಪ್ರದಾಯಕ್ಕೆ ಚ್ಯುತಿ ಬರದಂತೆ ತೌಳವರ ಶ್ರೀಮಂತ ಬದುಕನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಪ್ರಯತ್ನ ನಮ್ಮದು. ನಮ್ಮ ಪಾಡªನಾ, ಆಟ ಆಯನ, ತಿಂಡಿ ತಿನಿಸುಗಳ ಪರಿಚಯದೊಂದಿಗೆ ಆಟಿ ಯಾಕೆ ಅಷ್ಟೊಂದು ವಿಶೇಷ ಎಂಬುವುದನ್ನು ಆಚರಣೆಯ ಮೂಲಕ ತಿಳಿಸಿಕೊಡುವ ಆಟಿಡೊಂಜಿ ಅಟ್ಟಣೆ ಕಾರ್ಯಕ್ರಮವನ್ನು ವರ್ಷಂಪ್ರತಿ ಆಚರಿಸಿಕೊಂಡು ಬಂದಿದೇವೆ ಎಂದು ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next