Advertisement
ಮಲ್ಟಿ ಟಾಸ್ಕಿಂಗ್ಈ ಫೋಲ್ಡೆಬಲ್ ಫೋನ್ ಮಲ್ಟಿ ಟಾಸ್ಕಿಂಗ್ (ಏಕಕಾಲಕ್ಕೆ ವಾಟ್ಸಾಪ್ ನೋಡಿಕೊಂಡು, ಬ್ರೌಸಿಂಗ್ ಕೂಡ ಮಾಡ ಬಹುದು) ಗೆ ಪೂರಕವಾಗಿದೆ. ಉತ್ತಮ ಡಿಸ್‌ಪ್ಲೇ ಹೊಂದಿದ್ದು, ವೀಡಿಯೋ ನೋಡಲು, ಕಚೇರಿ ಕೆಲಸ ಮಾಡಲು ಅನುಕೂಲವಾಗಿದೆ. ಫೋನ್ ಮಡಚುವ ಸ್ಕ್ರೀನ್ ಹೊಂದಿದ್ದರೂ, ಬಾಗುವಿಕೆ, ದೃಶ್ಯ ವಕ್ರವಾಗಿ ಕಾಣಲು ಅವಕಾಶವಿಲ್ಲ. ಅಷ್ಟು ಅತ್ಯುನ್ನತ ಮಟ್ಟದ ತಂತ್ರಜ್ಞಾನದಿಂದ ಸ್ಕ್ರೀನ್ ರೂಪಿಸಲಾಗಿದೆ.
5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್ ನೆಟ್‌ವರ್ಕ್ ತಂತ್ರಜ್ಞಾನ. ಇದು ಅಪ್‌ಲೋಡ್, ಡೌನ್‌ಲೋಡ್ ವೇಗ ಹೆಚ್ಚಿಸಲಿದೆ. 4ಜಿಗೆ ಹೋಲಿಸಿದರೆ 5ಜಿ ನೂರು ಪಟ್ಟು ವೇಗ ಹೊಂದಿದೆ. ಜತೆಗೆ ಸ್ಪಷ್ಟ ಧ್ವನಿ ಸಂದೇಶ ಉತ್ತಮ ಇಂಟರ್ನೆಟ್ ಸ್ಪೀಡ್‌ಗೆ ನೆರವಾಗುತ್ತದೆ. 5ಜಿಗೆ ಸಿದ್ಧತೆ ಹೇಗಿದೆ?
ಅಮೆರಿಕಾ ಹೊರತಾಗಿ ದ. ಕೊರಿಯಾ, ಜಪಾನ್‌ನಲ್ಲಿ ಇದರ ಕಾರ್ಯ ಸದ್ಯ ಆರಂಭವಾಗಿದ್ದು 2019ರಲ್ಲಿ ಫೋನ್ ಮತ್ತು ನೆಟ್‌ವರ್ಕ್ ಬರಲಿದೆ. ಭಾರತ ಕೂಡ 5ಜಿ ತಂತ್ರಜ್ಞಾನ ಸ್ವೀಕರಿಸಲು ಸಿದ್ಧವಾಗಿದೆ. ಈ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (5ಜಿ) ಕುರಿತ ಕಾನೂನು, ತರಂಗಾಂತರದ ಹರಾಜಿಗೆ ಸಿದ್ಧವಾಗುತ್ತಿದೆ.
Related Articles
5ಜಿ ಯುಗದಲ್ಲಿ ಇಂಟರ್ನೆಟ್ ಅತ್ಯಧಿಕ ವೇಗ ಇರಲಿದೆ. ಸದ್ಯ ನಾವು 4ಜಿಯನ್ನು ಬಳಸುತ್ತಿದ್ದು, ಇದರ ಗರಿಷ್ಠ ವೇಗ 100 ಎಂಬಿಪಿಎಸ್ ಇದ್ದರೆ, 5ಜಿ ಯದ್ದು 10 ಜಿಬಿಪಿಎಸ್ ಇರಲಿದೆ. ಅಂದರೆ ಆಪರೇಟರ್ ಸಿಗ್ನಲ್ ಸರಿಯಾಗಿ ಇದೆ ಎಂದಾದರೆ, ಕೇವಲ 10 ಸೆಕೆಂಡ್‌ನಲ್ಲಿ ವೀಡಿಯೋಗಳು ಡೌನ್‌ಲೋಡ್ ಆಗಬಹುದು. ಯಾವುದೇ ಅಡೆತಡೆ ಇಲ್ಲದೆ 1080 ವಿಡಿಯೋಗಳು ಪ್ಲೇ ಆಗಬಹುದು. ಇದರೊಂದಿಗೆ ಸಂಪರ್ಕವೂ ಸುಧಾರಣೆ ಯಾಗಲಿದ್ದು, ಹೆಚ್ಚು ಸಂಪರ್ಕ ಇರುವ ಸ್ಥಳಗಳಲ್ಲೂ ನೆಟ್‌ವರ್ಕ್ ಸಮಸ್ಯೆ ಕಾಡದು.
Advertisement