Advertisement

ಕೊಳಚೆ ಪ್ರದೇಶದಲ್ಲಿ ಫಾಗಿಂಗ್‌ಗೆ ಆಗ್ರಹ

11:51 AM Jul 03, 2019 | Team Udayavani |

ಧಾರವಾಡ: ಅವಳಿ ನಗರದ ಕೆಲ ಬಡಾವಣೆ ಹಾಗೂ ಸ್ಲಂಗಳಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಲು ಹಾಗೂ ಸೊಳ್ಳೆ ನಿಯಂತ್ರಿಸಲು ಫಾಗಿಂಗ್‌ ಮಾಡುವಂತೆ ಆಗ್ರಹಿಸಿ ಎಸ್‌ಯುಸಿಐ(ಕಮ್ಯುನಿಸ್ಟ್‌)ಪಕ್ಷದಿಂದ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಜನ್ನತ ನಗರ, ಲಕ್ಷ್ಮೀಸಿಂಗನಕೆರೆ, ಚಪ್ಪರಬಂದ್‌ ಕಾಲೋನಿ, ಲೈನ್‌ ಬಜಾರ್‌, ಗೌಡರ ಕಾಲೋನಿ, ಸರಸ್ವತಪುರ ಸ್ಲಂ, ಜಯನಗರ ಪ್ಲಾಟ್, ನೆಹರುನಗರ, ಮದಾರಮಡ್ಡಿ, ಗೌಳಿಗಲ್ಲಿಯಲ್ಲಿ ಸೊಳ್ಳೆ ನಿಯಂತ್ರಿಸಲು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಫಾಗಿಂಗ್‌ ಮಾಡಬೇಕು. ನಿಯಮಿತವಾಗಿ ಕಸ ವಿಲೇವಾರಿ ಮಾಡಬೇಕು. ಹಲವು ಸ್ಲಂಗಳಲ್ಲಿ ಚರಂಡಿಗಳು ದುರಸ್ತಿಯಲ್ಲಿದ್ದು, ರಿಪೇರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಕಾರ್ಯನಿರ್ವಾಹಕ ಅಭಿಯಂತ ಸಾಲಿಮಠ ಮಾತನಾಡಿ, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಹಾಗೂ ಫಾಗಿಂಗ್‌ ಕಾರ್ಯವನ್ನು ನಾಳೆಯಿಂದಲೇ ಮಾಡಲಾಗುವುದು. ದುರಸ್ತಿಯಲ್ಲಿರುವ ಚರಂಡಿಗಳ ಸ್ಥಳ ಪರಿಶೀಲಿಸಿ ರಿಪೇರಿಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು.

ದೀಪಾ ವಿ., ಭುವನಾ ಎ., ರಮೇಶ ಹೊಸಮನಿ, ಮಧುಲತಾ ಗೌಡರ, ಭವಾನಿಶಂಕರ, ವಿಜಯಲಕ್ಷ್ಮೀ ದೇವತ್ಕಲ್, ಗಂಗಾ ಕೋಕರೆ, ದೇವಮ್ಮ, ಸಿಂಧು ಕೌದಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next