Advertisement

ಲಾಲುಗೆ ಮತ್ತೆ ಜೈಲು; ಮೇವು ಹಗರಣದಲ್ಲಿ ಎರಡನೇ ಬಾರಿಗೆ ಅಪರಾಧಿ

06:00 AM Dec 24, 2017 | |

ನವದೆಹಲಿ: ಬಿಹಾರ ಮಾಜಿ ಸಿಎಂ,ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಕುಟುಂಬಕ್ಕೆ ಶನಿವಾರ ಎರಡು ಆಘಾತ. ಒಂದೆಡೆ ಬಹುಕೋಟಿ ಮೇವು ಹರಗಣಗಳ ಪೈಕಿ ಒಂದು ಪ್ರಕರಣದಲ್ಲಿ ಲಾಲು ಅಪರಾಧಿ ಎಂದು ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ,ಲಾಲು ಪ್ರಸಾದ್‌ ಅವರನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಲಾಲು ಪುತ್ರಿ ಮಿಸಾ ಭಾರ್ತಿ ಮತ್ತು ಆಕೆಯ ಪತಿ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣವೊಂದರಲ್ಲಿ ಆರೋಪಪಟ್ಟಿ ದಾಖಲಿಸಿದೆ.

Advertisement

ಮೇವು ಹಗರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಲಾಲು ವಿರುದ್ಧದ ಶಿಕ್ಷೆ ಪ್ರಮಾಣವನ್ನು ಜನವರಿ 3 ರಂದು ಪ್ರಕ ಟಿಸುವುದಾಗಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ 22 ಆರೋಪಿಗಳ ಪೈಕಿ 15 ಮಂದಿಯನ್ನು ಅಪ ರಾಧಿಗಳು ಎಂದು ಘೋಷಿಸಲಾಗಿದೆ. ಬಿಹಾರದ ಮಾಜಿ ಸಿಎಂ ಜಗನ್ನಾಥ ಮಿಶ್ರಾ ಸೇರಿದಂತೆ ಏಳು ಆರೋಪಿಗಳನ್ನು ಖಲಾಸೆ ಗೊಳಿಸಲಾಗಿದೆ. 1994ರಿಂದ 1996ರ ಅವಧಿಯಲ್ಲಿ ದೇವ ಗಢ ಜಿಲ್ಲೆಯ ಖಜಾನೆಯಿಂದ 84.5 ಲಕ್ಷ ರೂ.ಗಳನ್ನು ಹಿಂಪ ಡೆದು ವಂಚನೆ ಎಸಗಿದ್ದರ ವಿರುದ್ಧದ ಪ್ರಕರಣ ಇದಾಗಿದೆ.

ಇನ್ನೂ ಮೂರು ಬಾಕಿ:
ಆರ್‌ಜೆಡಿ ಮುಖ್ಯಸ್ಥ ಲಾಲು ವಿರುದ್ಧ ಒಟ್ಟು  ಐದು ಪ್ರಕರಣ ಗಳಿದ್ದವು. ಈ ಪೈಕಿ ಮೂರು ಪ್ರಕರಣಗಳು ಇನ್ನೂ ಬಾಕಿ ಇವೆ. 2013ರ ಅಕ್ಟೋಬರ್‌ನಲ್ಲಿ ಒಂದು ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಐದು ವರ್ಷಗಳವರೆಗೆ ಜೈಲು ಹಾಗೂ ರೂ. 25 ಲಕ್ಷ ದಂಡ ವಿಧಿಸಲಾಗಿತ್ತು. ಆದರೆ ಎರಡೇ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದರು. ಚಾಯ್‌ ಬಸಾಖಜಾನೆಯಿಂದ 37.5 ಕೋಟಿ ರೂ. ಹಿಂಪಡೆದು ವಂಚನೆ ಎಸಗಿದ್ದರ ವಿರುದ್ಧ ಈ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶಿಕ್ಷೆಯಾಗುತ್ತಿದ್ದಂತೆಯೇ ಇದೇ ರೀತಿಯ ಇತರ ಪ್ರಕರಣಗಳಲ್ಲಿ ಅದೇ ಸಾಕ್ಷಿ ಮತ್ತು ಸಾಕ್ಷ್ಯಗಳನ್ನು ಬಳಸಿ ವಿಚಾ ರಣೆ ನಡೆಸಲಾಗದು ಎಂಬ ಕಾರಣಕ್ಕೆ ವಿಚಾರಣೆಗೆ ಜಾರ್ಖಂಡ್‌ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ಇದನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ ಹಿನ್ನೆಲೆಯಲ್ಲಿ, ವಿಚಾರಣೆ ಮುಂದುವರಿದಿದ್ದು, ಈಗ ಈ ಪೈಕಿ ಒಂದು ಪ್ರಕರಣದಲ್ಲಿ ತೀರ್ಪು ಪ್ರಕಟವಾಗಿದೆ.

ನೆಲ್ಸನ್‌ ಮಂಡೇಲಾ ನೆನಪಿಸಿಕೊಂಡ ಲಾಲು:
ಕೋರ್ಟ್‌ ತೀರ್ಪು ಪ್ರಕಟಿಸುವ ಮೊದಲು ತೀರ್ಪು ತನ್ನ ಪರವೇ ಬರಲಿದೆ ಎಂಬ ವಿಶ್ವಾಸವನ್ನು ಲಾಲು ಹೊಂದಿದ್ದರು. ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ. ಬಿಜೆಪಿ ಸಂಚು ಕೆಲಸ ಮಾಡುವುದಿಲ್ಲ. 2ಜಿ ಪ್ರಕರಣ ಹಾಗೂ ಆದರ್ಶ ಹಗರಣ ದಲ್ಲಿ ಹೇಗೆ ಆರೋಪಿಗಳು ಖುಲಾಸೆಯಾಗಿದ್ದಾರೋ ಅದೇ ರೀತಿ ನಾನೂ ಆರೋಪ ಮುಕ್ತಗೊಳ್ಳುತ್ತೇನೆ ಎಂದು ಲಾಲು ಹೇಳಿದ್ದ ರು. ಆದರೆ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಅವರು ನೆಲ್ಸನ್‌ ಮಂಡೇಲಾ, ಮಾರ್ಟಿನ್‌ ಲೂಥರ್‌ ಕಿಂಗ್‌ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ನೆನಪಿಸಿ ಕೊಂಡಿ ದ್ದಾರೆ. ಅವರು ತಮ್ಮ ಪ್ರಯತ್ನದಲ್ಲಿ ವಿಫ‌ಲರಾದರೆ, ವಿಲನ್‌ಗ ಳಂತೆ ನೋಡಲಾಗುತ್ತಿತ್ತು. ಈಗಲೂ ಅವರು ಕೋಮುವಾದಿ ಗಳು, ಜಾತಿವಾದಿಗಳಿಗೆ ವಿಲನ್‌ಗಳೇ ಆಗಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಹಲವು ಶಾಯರಿಗಳನ್ನೂ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಲಾಲುಗೆ ನೀವು ತೊಂದರೆ ಕೊಡಬಹುದು. ಆದರೆ ಸೋಲಿಸಲಾಗದು. ಸತ್ಯ ಎಂದೂ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ.

Advertisement

ಮಿಸಾ ವಿರುದ್ಧ ಚಾರ್ಜ್‌ಶೀಟ್‌
ಲಾಲು ಪುತ್ರಿ ಮಿಸಾ ಭಾರ್ತಿ ಹಾಗೂ ಆಕೆಯ ಪತಿ ವಿರುದ್ಧ ಹಣ ದುರುಪಯೋಗ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ ದಾಖಲಿಸಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ದೆಹಲಿಯಲ್ಲಿರುವ ಅವರ ಫಾರಂಹೌಸ್‌ ಅನ್ನು ಜಪ್ತಿ ಮಾಡಲಾಗಿತ್ತು.ಮೆಸರ್ಸ್‌ ಮಿಶೈಲ್‌ ಪ್ಯಾಕರ್ಸ್‌ ಆ್ಯಂಡ್‌ ಪ್ರಿಂಟರ್ಸ್‌ ಎಂಬ ಕಂಪನಿಯನ್ನು ಸ್ಥಾಪಿಸಿದ್ದ ಮಿಸಾ ಹಾಗೂ ಅವರ ಪತಿ ಈ ಮೂಲಕ ಹಲವು ಸ್ವತ್ತುಗಳನ್ನು ಖರೀದಿಸಿದ್ದರು. 2008-09ರಲ್ಲಿ  1.2 ಕೋಟಿ ರೂ.ಗೆ ಈ ಫಾರಂಹೌಸ್‌ ಖರೀದಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಜಾರಿ ನಿರ್ದೇಶ ನಾಲಯ ಈ ಹಿಂದೆಯೇ ದಾಳಿ ನಡೆಸಿ ಹಲವರನ್ನು ಬಂಧಿಸಿತ್ತು.

ಮೇಲ್ಮನವಿಗೆ ನಿರ್ಧಾರ:
ಶೀಘ್ರದಲ್ಲೇ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಆರ್‌ಜೆಡಿ ಹೇಳಿದೆ.

ನೀವು ಭ್ರಷ್ಟಾಚಾರ ಮಾಡಿದರೆ ಕಾನೂನಿನ ಕುಣಿಕೆಗೆ ಸಿಕ್ಕಿ ಬೀಳುತ್ತೀರಿ. ಇದು ನಾವು ಲಾಲು ಪ್ರಕರಣದಿಂದ ಕಲಿಯಬೇಕಿರುವ ಪಾಠವಿದು. ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 90ರ ದಶಕದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರವಾಗಿ ವಾದಿಸಿದ್ದೆ. ನಂತರ ಇದರ ವಿಚಾರಣೆಯನ್ನು ಸಿಬಿಐ ಕೈಗೆತ್ತಿಕೊಂಡಿತು.
– ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

1996ರಿಂದಲೂ ಲಾಲು ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ಇದೆಲ್ಲವೂ ಆರಂಭವಾಗಿದ್ದು ಬಿಜೆಪಿ ಮುಖಂಡರು ಪಟನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರಿಂದ. ಪ್ರಕರಣ ಎದುರಿಸಲು ಅವರು ಸಮರ್ಥರಾಗಿದ್ದಾರೆ. ಇದೇ ರೀತಿ ಶ್ರೀಜನ್‌ ಹಗರಣವನ್ನೂ ತನಿಖೆ ನಡೆಸಲಿ?
– ಮನೀಶ್‌ ತಿವಾರಿ, ಕಾಂಗ್ರೆಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next