ಆಸೆ.. ಮಧ್ಯಮ ಕುಟುಂಬದವರ ಬದುಕಿನಲ್ಲಿ ಆಸೆಯೂ ಕೂಡಾ ಮಧ್ಯಮದಲ್ಲಿ ಇರುತ್ತದೆ. ಈ ಕಡೆ ಚಿಕ್ಕದು ಅಲ್ಲ, ಆ ಕಡೆ ದೊಡ್ಡದು ಅಲ್ಲ, ನಾನು ಕನ್ನಡ ಶಾಲೆಗೆ ಹೋಗುತ್ತಿರುವಾಗ ನಮ್ಮ ಅಜ್ಜಿ ಹೇಳ್ತಿದ್ಲು, ಮಗ ನೀನು ಚೆನ್ನಾಗಿ ಓದಿ ಒಳ್ಳೆ ಕೆಲಸ ಹಿಡಿದು ಒಂದು ಮನೆ ಕಟ್ಟಿಸು ಅಂತ. ಆ ಹಂತದಿಂದ ಮೇಲೆ ಬಂದಾಗ ಪ್ರೌಢಾವಸ್ಥೆಯಲ್ಲಿ ನಮ್ಮ ಸಂಬಂದಿಕರೆಲ್ಲಾ ಹೇಳ್ತಿದ್ರು.. ನೀನು ಓದು ಮುಗಿದ ನಂತರ ಮೊದಲು ಆ ಒಂದು ಎಕರೆ ಗದ್ದೆ ಇದೆ ಅಲ್ವಾ ಅದನ್ನು ತೋಟ ಹಚ್ಚು. ಆಮೇಲೆ ಮನೆ, ಬೈಕ್, ಕಾರ್ ಮಾಡುವಂತಿರು ಎಂದು, ಇನ್ನೂ ಕೆಲವರು ಓದಿನ ಬಗ್ಗೆ ಅವರು ಅಭಿಪ್ರಾಯ ಎಷ್ಟು ಚೆಂದ ಹೇಳ್ತಾಯಿದ್ರಂದ್ರೆ.., ಸಾಕು ತಮ್ಮ ಎಷ್ಟು ಓದುತೀಯಾ, ನೀ ಎಷ್ಟೇ ಓದಿದ್ರು ಬೆಂಗಳೂರಿನಂಥ ಮಹಾನಗರಗಳಿಗೆ ಕೆಲ್ಸಕ್ಕೆ ಹೋಗ್ಬೇಕು 10,000-15,000 ಅಲ್ಲಿ ದುಡೀಬೇಕು, ಎಷ್ಟು ಜನ ಇದಾರೆ ನಿನಗೆ ಗೊತ್ತು ಅಲ್ವಾ ಡಿಗ್ರಿ ಮುಗಿಸಿ ಕೂಡಾ ಉದ್ಯೋಗ ಇಲ್ದೆ ಮನೇಲಿ ಇರೋರು, ನೀನು ಓದನ್ನ ನಿಲ್ಲಿಸಿ, ಕೆಲ್ಸಕ್ಕೆ ಹೋಗು, ನೀನ್ ಓದಿಗೆ ಬೆಂಗಳೂರಿನಲೆಲ್ಲ ಕಡಿಮೆ ಅಂದ್ರು 15,000 ಮೇಲೆ ಸಂಬಳ ಕೊಡತ್ತಾರೆ.
ಹೀಗೆ ಹಲವರು ಮಧ್ಯಮ ಆಸೆ ಈಡೇರಿಸಿಕೊಳ್ಳಲು ಅವರ ಗುರಿಯ ಹಾದಿಯನ್ನು ತಪ್ಪಿಸುತ್ತಾರೆ.ಗುರಿಯನ್ನು ಮರೆತು… ಆಸೆಯೇಡೆಗೆ ಪಯಣ ಬೆಳಸುತ್ತಾರೆ. ಆದರೆ ಈ ಸಣ್ಣ ಸಣ್ಣ ಆಸೆ ಈಡೇರಿದ ನಂತರ,ದೊಡ್ಡ ಆಸೆಗಳ ಕಡೆಗೆ ನೋಡಿದಾಗಲೇ ಅವರಿಗೆ ತಮ್ಮ ತಪ್ಪಿನ ಬಗ್ಗೆ ತಿಳಿಯುವುದು, ಆಸೆಯ ಕಡೆ ಗಮನ ಹರಿಸಿ.. ಗುರಿಯನ್ನು ಮರೆತು ಎಷ್ಟು ದೊಡ್ಡ ತಪ್ಪು ಮಾಡಿದೆ ಎಂದು, ಅಷ್ಟಿಲ್ಲದೇ ಹೇಳ್ತಾರಾ ನಮ್ಮ ಹಿರಿಯರು ‘ಆಸೆಯೇ ದುಃಖಕ್ಕೆ ಮೂಲವೆಂದು’.
ಅದರಿಂದ ನಾವು ಮೊದಲು ನಮ್ಮ ಗುರಿ ಕಡೆಗೆ ಗಮನ ಹರಿಸೋಣ.ಅದು ನಮ್ಮಲ್ಲಿನ ಎಲ್ಲ ಆಸೆಯ ಮೀರಿ ಯಶಸ್ಸಿನ ಕಡೆ ಕರೆದ್ಯೋಯುತ್ತದೆ.ಅದೆಷ್ಟೇ ಕಷ್ಟ ಬಂದ್ರು ಕೂಡಾ, ಅದು ಎಂತದ್ದೇ ಅಡೆ ತಡೆ ಬಂದ್ರು ಕೂಡಾ ನಮ್ಮ ಗುರಿ ಕಡೆಗೆ ನಮ್ಮ ಗಮನ ಇದ್ದರೆ,ಪ್ರತಿ ಕ್ಷಣ ಕೂಡಾ ನಾವುಗಳು ಗುರಿಯ ಯೋಚನೆಯಲ್ಲಿ ತೇಲಾಡುತ್ತಿದ್ದರೆ..ಗುರಿ ತಲುಪುವ ದಾರಿಯಲ್ಲಿ ಪ್ರಕೃತಿ ಕೂಡಾ ನಮ್ಮ ಸಹಾಯಕ್ಕೆ ನಿಲ್ಲುತ್ತದೆ.ನಮಗೆ ಸಹಾಯ ಮಾಡಲು ಎಂದೇ ಇರುವ ಹಾಗೈ ಹೊಸ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ, ಮತ್ತು ನಮಗೆ ಬೇಕಾದ ಸಹಾಯ ಅವರಿಂದ ದೊರೆಯುತ್ತದೆ.
ಎಷ್ಟೋ ಜನ ಉನ್ನತ ಶಿಕ್ಷಣ ಮುಗಿಸಿ ಕೂಡಾ ಉದ್ಯೋಗ ಇಲ್ಲದೇ ಇದ್ದಾರೆ ಅದಕ್ಕೆ ಕಾರಣ ಅವರಿಗೆ ಆಸಕ್ತಿ ಇಲ್ಲದ್ದನ್ನು ಮಾಡಿ ಅವರ ಗುರಿಯನ್ನು ಮರೆತು ಬೇರೆ ಹಾದಿಯಲ್ಲಿ ಹೋಗಿರುವುದು.. ಮತ್ತೆ ಎಲ್ಲರ ಜೀವನದ ಹಾದಿ ಒಂದೇ ತರ ಇರುವುದಿಲ್ಲ ಅಲ್ಲವೇ!
ನೀವು ಎಂದಿಗೂ ಒಳ್ಳೆಯ ಯೋಚನೆಯನ್ನೇ ಮೊದಲು ಮಾಡಿ.. ಆಗುವುದಾದರೆ ಮೊದಲು ಒಳ್ಳೆಯದೇ ಆಗಲಿ,ನಮ್ಮ ಮೊದಲ ಗಮನ ಗುರಿ ಕಡೆ ಇರಲಿ,ಹಾಗೆ ಆ ಗುರಿ ಮುಟ್ಟುವವರೆಗೂ ಬಿಡದ ಛಲ ಇರಲಿ. ಸಣ್ಣ ಸಣ್ಣ ಆಸೆಗಳಿಗೋಸ್ಕರ, ಕ್ಷಣಿಕ ಕಷ್ಟಗಳಿಗೋಸ್ಕರ ಎಂದು ಕೂಡಾ ನಾವು ಹೊರಟ ಗುರಿಯ ಹಾದಿಯನ್ನು ಬದಲಿಸಬಾರದು.
ಆ ಕಷ್ಟದಲ್ಲಿ ಅದನ್ನು ಎದುರಿಸಿ ನಿಂತರೆ,ಅದೇ ಕಡೆಗೆ ಯಶಸ್ಸಿನ ಕಡೆಗೆ ಕರೆದೊಯ್ಯೋವುದು. ಒಂದು ಬಾರಿ ಯಶಸ್ಸು ನಿಮ್ಮದಾದರೆ ಯಾರು ನಿಮಗೆ ಓದು ನಿಲ್ಸು ಎಂದಿದಾರೋ, ಯಾರು ನಿಮಗೆ ಅವಮಾನಿಸಿದ್ದರೋ ಅವೆÅಲ್ಲಾ ನಿಮ್ಮನ್ನು ಮಾದರಿಯಾಗಿಟ್ಟುಕೊಳ್ಳುತ್ತಾರೆ.ನೀವು ಮೊದಲು ಯಶಸ್ವಿಯಾದವರನ್ನು ಮಾದರಿಯಾಗಿಟ್ಟುಕೊಳ್ಳಿ, ಅವರಂತೆ ಗುರಿಯ ತಲುಪುವ ಛಲದ ಹಾದಿಯಲ್ಲಿ ನಡೆಯಿರಿ,ಮತ್ತೆ ಮತ್ತೆ ಹೇಳುತ್ತೇನೆ ಮೊದಲು ಗುರಿಯ ಕಡೆ ಗಮನ ಮಾತ್ರವಲ್ಲ, ಅದನ್ನು ಸಾಧಿಸುವಲ್ಲಿ ಛಲ ಇರಲಿ…
-ಭರತ್ ವಾಸು ನಾಯ್ಕ…
ಶಿರಸಿ